AFCAT 2 2025 Notification: ಭಾರತೀಯ ವಾಯುಪಡೆ (IAF) ಕಮಿಷನ್ಡ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದ್ದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ವಾಯುಪಡೆಯಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಭಾರತೀಯ ವಾಯುಪಡೆ (IAF) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 284 ಕಮಿಷನ್ಡ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಭಾರತೀಯ ವಾಯುಪಡೆಯ ಅಧಿಕೃತ ವೆಬ್ ಸೈಟ್ https://afcat.cdac.in/AFCAT/ ಗೆ ಭೇಟಿ ನೀಡಿ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Highlights of Employment News
Organization Name – Indian Air Force (IAF) Exam Name – AFCAT – 02/2025 and NCC SPECIAL ENTRY Post Name – Commissioned Officer Total Vacancy – 284 Apply Mode– Online Job Location – India
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ – 02-06-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 01-07-2025
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ, ಗಣಿತ ಮತ್ತು ಭೌತಶಾಸ್ತ್ರದೊಂದಿಗೆ 12ನೇ ತರಗತಿ ಉತ್ತೀರ್ಣ ಮತ್ತು ಯಾವುದೇ ವಿಭಾಗದಲ್ಲಿ ಪದವಿ ಅಥವಾ ಬಿಇ/ಬಿ ಟೆಕ್ ಪದವಿ ಹೊಂದಿರುವವರು ಅರ್ಹರು.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 20 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 26 ವರ್ಷಗಳು
ಭಾರತೀಯ ವಾಯುಪಡೆಯ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
AFSB(Air Force Selection Board) ಪರೀಕ್ಷೆ
ವೈದ್ಯಕೀಯ ಪರೀಕ್ಷೆ.
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ – 500 ರೂ.(NCC ವಿಶೇಷ ಪ್ರವೇಶಕ್ಕೆ ಅನ್ವಯಿಸುವುದಿಲ್ಲ)
How to Apply for AFCAT 2 2025
ಭಾರತೀಯ ವಾಯುಪಡೆಯ ಅಧಿಕೃತ ವೆಬ್ ಸೈಟ್ https://afcat.cdac.in/afcatreg/candidate/login ಗೆ ಭೇಟಿ ನೀಡಿ.
ಇ-ಮೇಲ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ. ಅಥವಾ ನೋಂದಾಯಿಸಿ.
ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ವಿವರಗಳನ್ನು ಅಪ್ಲೋಡ್ ಮಾಡಿ.
ಅರ್ಜಿ ಶುಲ್ಕ ಪಾವತಿ ಮಾಡಿ.
ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.