ಭಾರತೀಯ ವಕೀಲ ಪರಿಷತ್ತು (Bar Council of India-BCI) 20ನೇ ಅಖಿಲ ಭಾರತ ವಕೀಲರ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ದೇಶದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ನ.30ರಂದು ಆಫ್‌ಲೈನ್‌ನಲ್ಲಿ ಪರೀಕ್ಷೆ ನಡೆಯಲಿದ್ದು, ಭಾರತೀಯ ನ್ಯಾಯಾಲಯಗಳಲ್ಲಿ ವಕೀಲರಾಗಿ ವೃತ್ತಿಜೀವನ ನಡೆಸಲು ಕಾನೂನು ಪದವೀಧರರು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಅತ್ಯಗತ್ಯ. ಅರ್ಜಿ ಸಲ್ಲಿಸಲು ಸಾಮಾನ್ಯ/ಒಬಿಸಿ ವರ್ಗ ಶೇ.45 ಮತ್ತು ಪರಿಶಿಷ್ಟ ಜಾತಿ/ಪಂಗಡ ಮತ್ತು ಅಂಗವಿಕಲ ವರ್ಗದವರಿಗೆ ಶೇ.40ರಷ್ಟು ಉತ್ತೀರ್ಣತೆ ಪ್ರಮಾಣ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.29 ರಿಂದ ಅ.28ರವರೆಗೆ ಅವಕಾಶವಿದೆ. ಆಸಕ್ತರು https://www.allindiabarexamination.com/ನ ಮೂಲಕ ನೋಂದಣಿ ಮಾಡಬಹುದು.
ಪ್ರವೇಶ ಪತ್ರಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುವ ಅವಧಿ – ನವೆಂಬರ್ 15
ಪರೀಕ್ಷಾ ದಿನಾಂಕ – ನವೆಂಬರ್ 30
ಅರ್ಜಿ ಸಲ್ಲಿಸಲು ಯಾರು ಅರ್ಹರು:
ಭಾರತೀಯ ವಕೀಲ ಪರಿಷತ್ತಿನಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಕಾಲೇಜಿನಲ್ಲಿ ಈ ಕೆಳಗಿನ ಅರ್ಹತೆ ಪೂರೈಸಿರಬೇಕು;
→ ಕಾನೂನು ಪದವಿ ಪಡೆದಿರುವವರು. → ಹಿಂದಿನ ಸೆಮಿಸ್ಟರ್‌ಗಳಲ್ಲಿ ಬ್ಯಾಕ್‌ಲಾಗ್‌ಗಳಿಲ್ಲದ ಅಂತಿಮ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಅಭ್ಯರ್ಥಿಗಳು → 3 ವರ್ಷ ಅಥವಾ 5 ವರ್ಷ ಎಲ್‌ಎಲ್‌ಬಿ ಉತ್ತೀರ್ಣರಾಗಿ ಪದವಿ ಪಡೆಯದ ಅಭ್ಯರ್ಥಿಗಳು → ಕಾನೂನು ಪದವಿ ಪಡೆದಿದ್ದರೂ ಯಾವುದೇ ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ದಾಖಲಾಗದ ಅಥವಾ ದಾಖಲಾತಿ ಪ್ರಮಾಣಪತ್ರವನ್ನು ಒಪ್ಪಿಸಿರುವ ಅಭ್ಯರ್ಥಿಗಳು
ಈ ಮೇಲಿನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಪರಿಷತ್ತು ಹೊರಡಿಸಿದ ಅಧಿಸೂಚನೆ ತಿಳಿಸಿದೆ.
ಅರ್ಜಿ ಸಲ್ಲಿಕೆ ಹೀಗೆ…
ಅಧಿಕೃತ ಜಾಲತಾಣ https://www.allindiabarexamination.com/ಕ್ಕೆ ಭೇಟಿ ನೀಡಿ
Aibe Xx Application Form 2025
ಮುಖಪುಟದಲ್ಲಿ ನೀಡಲಾದ “ನೋಂದಣಿ(Registration)” ಗುಂಡಿ ಮೇಲೆ ಒತ್ತಿ, ಕೇಳಾದ ವಿವರ ಭರ್ತಿ ಮಾಡಿ ನೋಂದಣಿಯಾಗಿ ಮುಂದೆ ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದು;
➣ ವೈಯಕ್ತಿಕ ವಿವರಗಳು ➣ ವಿಳಾಸದ ವಿವರಗಳು ➣ ಶೈಕ್ಷಣಿಕ ವಿವರಗಳು ➣ ಪರೀಕ್ಷೆ (ಭಾಷೆ ಮತ್ತು ಪರೀಕ್ಷಾ ಕೇಂದ್ರದ ಆಯ್ಕೆ) ➣ ಲಗತ್ತು (ಕೇಳಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ) ➣ ಪೂರ್ವವೀಕ್ಷಣೆ ಮತ್ತು ಘೋಷಣೆ ➣ಅರ್ಜಿ ಶುಲ್ಕ ಪಾವತಿ
ನಾನು 2021 ರಿಂದ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ತೊಡಗಿಕೊಂಡಿರುವೆ. ನಿಮಗೆ ಮಾಹಿತಿ(ಸುದ್ದಿ)ಯನ್ನು ತಲುಪಿಸುವ ಕಾರ್ಯ ಮಾಡುವುದೇ ನನ್ನ ಧ್ಯೇಯ. ಮಾಹಿತಿ ತಲುಪಿಸುವುದರ ಜೊತೆಗೆ ನಾನು ಕೂಡಾ ಹೊಸ ಹೊಸ ಮಾಹಿತಿಯನ್ನು ತಿಳಿದುಕೊಂಡಿದ್ದೇನೆ. ಈಗಲೂ ತಿಳಿದುಕೊಳ್ಳುತ್ತಲೇ ಇದ್ದೇನೆ. ನಿರಂತರ ಕಲಿಕೆಯಲ್ಲಿ ದೋಣಿ ಸಾಗುತ್ತಿದೆ.ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ.....
Tailoring machine