ನವದೆಹಲಿ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯಡಿ ಬರುವ ಪ್ರಮುಖ ಪ್ರಯೋಗಾಲಯವಾಗಿರುವ ರಾಷ್ಟ್ರೀಯ ಭೌತಿಕ ಪ್ರಯೋಗಾಲಯ(ಎನ್ಪಿಎಲ್)ದಲ್ಲಿ 20 ತಂತ್ರಜ್ಞ-I ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಬಿಡುಗಡೆಯಾಗಿದೆ.
ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಆಪರೇಟರ್ & ಪ್ರೋಗ್ರಾಮ್ ಅಸಿಸ್ಟೆಂಟ್ ಹಾಗೂ ಮಲ್ಟಿಮೀಡಿಯಾ ಅನಿಮೇಷನ್ & ಸ್ಪೆಷಲ್ ಎಫೆಕ್ಟ್ಸ್ ಸೇರಿದಂತೆ ಇತರೆ ವಿಭಾಗಗಳಿಗೆ ನೇಮಕ ನಡೆಯಲಿದೆ. ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಜೂ.30ರೊಳಗೆ ಎನ್ಪಿಎಲ್ ಅಧಿಕೃತ ಜಾಲತಾಣ https://www.nplindia.in/index.php/home_en/ಕ್ಕೆ ಭೇಟಿ ನೀಡಿ, ನಿಗದಿತ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ, ‘ಸೀನಿಯರ್ ಕಂಟ್ರೋಲರ್ ಆಫ್ ಅಡ್ಮಿನಿಸ್ಟ್ರೇಷನ್, ಸಿಎಸ್ಐಆರ್-ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ, ಡಾ. ಕೆ.ಎಸ್. ಕೃಷ್ಣನ್ Marg, ನವದೆಹಲಿ-110012’ಗೆ ಅಂಚೆ ಮೂಲಕ ಸಲ್ಲಿಸಬೇಕು.
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 55% ಅಂಕಗಳೊಂದಿಗೆ ವಿಜ್ಞಾನ ವಿಷಯಗಳೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣ/ತತ್ಸಮಾನ ಅರ್ಹತೆಯನ್ನು ಪೂರ್ಣಗೊಳಿಸಿರಬೇಕು ಹಾಗೂ NCVT/SCVT ಯಿಂದ ನೀಡಲಾದ ಆಯಾ ಟ್ರೇಡ್ ನಲ್ಲಿ ITI ಉತ್ತೀರ್ಣರಾದ ಪ್ರಮಾಣಪತ್ರವನ್ನು ಹೊಂದಿರಬೇಕು ಅಥವಾ ಸಂಬಂಧಿತ ವಿಭಾಗದಲ್ಲಿ ಕನಿಷ್ಠ 2/3 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.
ವಯೋಮಿತಿ:
30-06-2026 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ – 28 ವರ್ಷಗಳು
ವಯೋಮಿತಿ ಸಡಿಲಿಕೆ: ಒಬಿಸಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ, ಪ.ಪಂಗಡ ಹಾಗೂ ಸಿಎಸ್ಐಆರ್ ಸಂಸ್ಥೆ ಹಾಗೂ ಅಂಗಸಂಸ್ಥೆಗಳ ಉದ್ಯೋಗಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳು, ಪಿಡಬ್ಲ್ಯೂಡಿ ಒಬಿಸಿ ಅಭ್ಯರ್ಥಿಗಳಿಗೆ 13 ವರ್ಷಗಳು, ಪಿಡಬ್ಲ್ಯೂಡಿ ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 15 ವರ್ಷಗಳು.
ಆಯ್ಕೆ ಪ್ರಕ್ರಿಯೆ:
ಟ್ರೇಡ್ ಪರೀಕ್ಷೆ
ಲಿಖಿತ ಪರೀಕ್ಷೆ
ಅಂತಿಮ ಮೆರಿಟ್ ಪಟ್ಟಿ
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.19,900- 63,200ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
• ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.500 • ಪ.ಜಾತಿ, ಪ.ಪಂಗಡ, ಮಹಿಳೆಯರು, ಪಿಡಬ್ಲ್ಯೂಬಿಡಿ, CSIR ಉದ್ಯೋಗಿಗಳು ಹಾಗೂ ತೃತಿಯ ಲಿಂಗಿ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
• ಶುಲ್ಕ ಅನ್ವಯವಾಗುವ ಅಭ್ಯರ್ಥಿಗಳು 500ರೂ. ಡಿಮ್ಯಾಂಡ್ ಡ್ರಾಫ್ಟ್ ಅನ್ನು ನಿರ್ದೇಶಕರು, ರಾಷ್ಟ್ರೀಯ ಭೌತಿಕ ಪ್ರಯೋಗಾಲಯದ ಹೆಸರಿನಲ್ಲಿ ನವದೆಹಲಿಯಲ್ಲಿ ಪಾವತಿಸಬಹುದು.
• ಡಿಮ್ಯಾಂಡ್ ಡ್ರಾಫ್ಟ್ನ ಹಿಂಭಾಗದಲ್ಲಿ ವೈಯಕ್ತಿಕ ವಿವರಗಳನ್ನು (ಹೆಸರು ಮತ್ತು ಅಂಚೆ ಕೋಡ್) ನಮೂದಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ:
• ಮೊದಲಿಗೆ ಅಭ್ಯರ್ಥಿಗಳು NPL ಅಧಿಕೃತ ಜಾಲತಾಣ https://www.nplindia.in/index.php/home_en/ಕ್ಕೆ ಭೇಟಿ ನೀಡಿ.
• ಪ್ರಕಟಣೆಗಳು ವಿಭಾಗದಲ್ಲಿ ನೀಡಲಾಗಿರುವ *ತಂತ್ರಜ್ಞ ಹುದ್ದೆಗೆ ನೇಮಕಾತಿ-2026 “ಅರ್ಜಿ ನಮೂನೆ” ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ತಮ್ಮ ಮೂಲ ಮಾಹಿತಿಗಳನ್ನು ನಮೂದಿಸಿ.
• ಪ್ರಮಾಣಪತ್ರಗಳ ಸ್ವಯಂ-ದೃಢೀಕರಿಸಿದ ಪ್ರತಿಗಳು, ಅಂಕಪಟ್ಟಿಗಳು ಜೊತೆಗೆ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಸ್ವಯಂ-ಸಹಿ ಮಾಡಿದ ಭಾವಚಿತ್ರವನ್ನು ಲಗತ್ತಿಸಿ.
• ತಂತ್ರಜ್ಞರ ಹುದ್ದೆಗೆ ಅರ್ಜಿ – ಪೋಸ್ಟ್ ಕೋಡ್ ಸಂಖ್ಯೆ ಎಂದು ಲಕೋಟೆಯಲ್ಲಿ ಬರೆದು ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ಜೂನ್ 30ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: “ಸೀನಿಯರ್ ಕಂಟ್ರೋಲರ್ ಆಫ್ ಅಡ್ಮಿನಿಸ್ಟ್ರೇಷನ್, ಸಿಎಸ್ಐಆರ್-ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ, ಡಾ. ಕೆ.ಎಸ್. ಕೃಷ್ಣನ್ Marg, ನವದೆಹಲಿ-110012”