ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಇಂದು ನಾವು “ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ” ದಿಂದ ನೀಡುವ ವಿವಿಧ ಯೋಜನೆಗಳ (Ambigara Development Karnataka gov in loan Scheme 2024/ Nijasharana Ambigara Choudayya Nigama 2024) ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಯಿಸಿದ್ದೇವೆ.
ಅಂಬಿಗರ ಚೌಡಯ್ಯ ನಿಗಮದಿಂದ ವಿವಿಧ ಸಹಾಯಧನ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸಬಯಸುವ ಅರ್ಹ ಫಲಾನುಭವಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ, ಜೊತೆಗೆ ನಿಮ್ಮ ಹಿತೈಶಿಗಳಿಗೂ ತಪ್ಪದೇ ಶೇರ್ ಮಾಡಿ.
2024-25ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
☞ ಗಂಗಾ ಕಲ್ಯಾಣ ನೀರಾವರಿ ಯೋಜನೆ ☞ ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ ☞ ಅರಿವು ಶೈಕ್ಷಣಿಕ ಸಾಲ ಯೋಜನೆ ☞ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಆರ್ಥಿಕ ನೆರವು ☞ ಸ್ವಯಂ ಉದ್ಯೋಗ ಸಾಲ ಯೋಜನೆ ☞ ಸ್ವಾವಲಂಬಿ ಸಾರಥಿ ಯೋಜನೆ
ಗಂಗಾ ಕಲ್ಯಾಣ ನೀರಾವರಿ ಯೋಜನೆ:
• ಘಟಕ ವೆಚ್ಚ ರೂ. 4.75ಲಕ್ಷ / ರೂ. 3.75ಲಕ್ಷ • ಸಹಾಯ ಧನ ರೂ. 4.25ಲಕ್ಷ / ರೂ. 3.25ಲಕ್ಷ • ಸಾಲ ಮೊತ್ತ ರೂ. 50,000/- • ಬಡ್ಡಿದರ: ಶೇ.4ರಷ್ಟು
Also Read: ಗಂಗಾ ಕಲ್ಯಾಣ ನೀರಾವರಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ:
• ಘಟಕ ವೆಚ್ಚ ರೂ. 1ಲಕ್ಷ / ರೂ. 2ಲಕ್ಷ • ಸಹಾಯ ಧನ: ರೂ. 20,000/-/ರೂ. 30,000/- • ಸಾಲ ಮೊತ್ತ ರೂ. 80,000/- / ರೂ. 1,70,000/- • ಬಡ್ಡಿದರ: ಶೇ.4ರಷ್ಟು
ಅರಿವು ಶೈಕ್ಷಣಿಕ ಸಾಲ ಯೋಜನೆ (ಹೊಸತು):
• ವಾರ್ಷಿಕ ಗರಿಷ್ಟ ರೂ. 1ಲಕ್ಷ • ವಾರ್ಷಿಕ ಬಡ್ಡಿ ಶೇ. 2ರಷ್ಟು • ಕರ್ನಾಟಕ ಪರೀಕ್ಷಾ ಪ್ರಾಧಿಕಾರ / ನೀಟ್ ಪರೀಕ್ಷೆ ಮೂಲಕ ಪ್ರವೇಶಾತಿ ಪಡೆದಿರಬೇಕು
ಅರಿವು ಶೈಕ್ಷಣಿಕ ಸಾಲ ಯೋಜನೆ (ನವೀಕರಣ):
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ, ವ್ಯಾಪ್ತಿಗೆ ಒಳಪಡುವ ವಿದ್ಯಾರ್ಥಿಗಳು 2022-23ನೇ ಸಾಲ ಪಡೆದ ವಿದ್ಯಾರ್ಥಿಗಳಿಗೆ 3ನೇ ಕಂತಿನ ನವೀಕರಣ ಸಾಲ ಹಾಗೂ 2023-24ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 2ನೇ ಕಂತಿನ ಸಾಲ ಪುಂಜೂರು ಮಾಡಲು ವ್ಯಾಸಂಗ ದೃಢೀಕರಣ ಮತ್ತು ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸುವುದು.
ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಆರ್ಥಿಕ ನೆರವು:
• ವಾರ್ಷಿಕ ಗರಿಷ್ಟ ರೂ. 10ಲಕ್ಷ • ಬಡ್ಡಿದರ : ಶೂನ್ಯ(೦%) • QS World Ranking – 500 ರೊಳಗೆ
ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ):
• ಘಟಕ ವೆಚ್ಚ : ಶೇ 20ರಷ್ಟು /ಗರಿಷ್ಟ ರೂ. 1ಲಕ್ಷ ಸಹಾಯಧನ, • ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲ. • ಉದ್ದೇಶ : ಕೃಷಿ / ಕೃಷಿ ಅವಲಂಭಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳು / ಉದ್ಯಮಗಳು
ಸ್ವಾವಲಂಬಿ ಸಾರಥಿ ಯೋಜನೆ:
• ಘಟಕ ವೆಚ್ಚ ಶೇ.50 ರಷ್ಟು /ಗರಿಷ್ಟ ರೂ. 3ಲಕ್ಷಗಳ ಸಹಾಯಧನ. • ನಾಲ್ಕು ಚಕ್ರಗಳ ವಾಹನ ಖರೀದಿಸಲು (ಹಳದಿ ಬೋರ್ಡ್) • ವಯೋಮಿತಿ 21 ರಿಂದ 45 ವರ್ಷದೊಳಗಿರಬೇಕು.
Last Date of Nijasharana Ambigara Choudayya Nigama Scheme 2024-25
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date: 30 August 2024
ನಿಗಮದ ಸಹಾಯವಾಣಿ (Helpline) ಸಂಖ್ಯೆ 080-22864099ಗೆ ಕಛೇರಿ ಸಮಯದಲ್ಲಿ ಬೆಳಗ್ಗೆ 10:00 ರಿಂದ ಸಂಜೆ 5:30ರವರೆಗೆ ಸಂಪರ್ಕಿಸಬಹುದಾಗಿದೆ
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.