ಅಂಡಮಾನ್ ಮತ್ತು ನಿಕೋಬಾರ್ ಪರಿಸರ ಮತ್ತು ಅರಣ್ಯ ಇಲಾಖೆಯು ಉತ್ತರ ಮತ್ತು ಮಧ್ಯ ಅಂಡಮಾನ್ ಜಿಲ್ಲೆಯ ವ್ಯಾಪ್ತಿಗಾಗಿ ಗ್ರೂಪ್ ‘ಸಿ’ ವೃಂದದ ಮಜ್ದೂರ್ (ಕೈಗಾರಿಕಾ ಹುದ್ದೆ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ವಿವಿಧ ವಿಭಾಗಗಳಿಗೆ ಒಟ್ಟು 196 ಸ್ಥಾನಗಳಿಗೆ ನೇಮಕ ನಡೆಯಲಿದ್ದು, ಹತ್ತನೇ ತರಗತಿ ಉತ್ತೀರ್ಣರಾದ ಅರ್ಹ ಪುರುಷ ಹಾಗೂ ಮಹಿಳಾ ಅರ್ಜಿದಾರರು ಮೇ 06ರೊಳಗೆ ಅಂಡಮಾನ್ ನಿಕೋಬಾರ್ ಅಧಿಕೃತ ಜಾಲತಾಣ https://erecruitment.andamannicobar.gov.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮಾರ್ಚ್ 23, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮೇ 06, 2026
- ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – ಮೇ 06, 2026
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪೂರ್ಣಗೊಳಿಸಿರಬೇಕು ಹಾಗೂ ಉತ್ತಮ ದೈಹಿಕ ಸದೃಢತೆ ಹೊಂದಿದ್ದು, ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬೇಕು ಜೊತೆಗೆ ಹಿಂದಿ ಭಾಷೆಯ ಜ್ಞಾನವನ್ನು ಹೊಂದಿರಬೇಕು.
ವಯೋಮಿತಿ:
06-05-2026 ರಂತೆ;
ಪುರುಷ ಅಭ್ಯರ್ಥಿಗಳಿಗೆ 18-33 ವರ್ಷಗಳು, ಮಹಿಳಾ ಅಭ್ಯರ್ಥಿಗಳಿಗೆ 18-38 ವರ್ಷಗಳು.
ವಯೋಮಿತಿ ಸಡಿಲಿಕೆ: ಒಬಿಸಿ ಹಾಗೂ ಕೇಂದ್ರ ಸರ್ಕಾರಿ ನಾಗರಿಕ ನೌಕರ ಅಭ್ಯರ್ಥಿಗಳಿಗೆ 03 ವರ್ಷಗಳು, ಪರಿಶಿಷ್ಟ ಪಂಗಡ ಹಾಗೂ ಗೌರವಾನ್ವಿತ ಕ್ರೀಡಾ ಪಟು ಅಭ್ಯರ್ಥಿಗಳಿಗೆ 05 ವರ್ಷಗಳು.
ಆಯ್ಕೆ ವಿಧಾನ:
- ಹಂತ-I ರನ್ನಿಂಗ್ ಪರೀಕ್ಷೆ
- ಹಂತ-II ಲಾಂಗ್ ಜಂಪ್ ಪರೀಕ್ಷೆ
- ಹಂತ-III ವೈಟ್ ಲಿಫ್ಟಿಂಗ್ ಪರೀಕ್ಷೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹18,000-₹56,900ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹100, ಪ.ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಈ ಕೆಳಗಿನ ಬ್ಯಾಂಕ್ ಖಾತೆಗೆ ಅರ್ಜಿ ಶುಲ್ಕ ಪಾವತಿಸಬೇಕು.
Account Name : Principal, Dr. B.R. Ambedkar Institute of Technology,
Bank Account Number: 41881546799,
Name of the Bank : State Bank of India,
Branch: Dollygunj,
IFSC Code: SBIN0017178
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ…
• ಮೊದಲಿಗೆ ಅಭ್ಯರ್ಥಿಗಳು ಅಂಡಮಾನ್ ನಿಕೋಬಾರ್ ಅಧಿಕೃತ ಜಾಲತಾಣ https://erecruitment.andamannicobar.gov.in/ ಕ್ಕೆ ಭೇಟಿ ನೀಡಿ.
• ಬಳಿಕ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ “ಅಭ್ಯರ್ಥಿ ಕಾರ್ನರ್” ಬಟನ್ ಮೇಲೆ ಕ್ಲಿಕ್ ಮಾಡಿ.
• ಮುಂದುವರೆದಂತೆ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ನಂತರ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
• ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | police.andamannicobar.gov.in |
| More Updates | KarnatakaHelp.in |
Ajith c.s