ಆರ್‌ಆರ್‌ಬಿ NTPC(ಯುಜಿ) ಸಿಬಿಟಿ-Iರ ಪ್ರವೇಶ ಪತ್ರ ಬಿಡುಗಡೆ

Published on:

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ ಸಂಖ್ಯೆ 07/2025ರಡಿ ಅಧಿಸೂಚಿಸಲಾದ ಎನ್‌ಟಿಪಿಸಿ ಪದವಿಪೂರ್ವ ಹಂತದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಮೇ 07ರಿಂದ ಆರಂಭವಾಗಲಿರುವ ಕಂಪ್ಯೂಟರ್‌ ಆಧಾರಿತ ಪರೀಕ್ಷೆ(ಸಿಬಿಟಿ-I)ಯ ಪ್ರವೇಶ ಪತ್ರವನ್ನು ಬಿಡುಗಡೆಗೊಳಿಸಿದೆ.

ಮೇ 07, 08, 09 ಹಾಗೂ ಜೂನ್ 13, 14, 16, 17, 18, 19, 20 ಮತ್ತು 21ರವರೆಗೆ ಪರೀಕ್ಷೆ ನಡೆಯಲಿವೆ. ಆಯಾ ಪರೀಕ್ಷೆ ದಿನದ ನಾಲ್ಕು ದಿನದ ಮುಂಚೆ ಪ್ರವೇಶ ಪತ್ರ ಡೌನ್ಲೋಡ್‌ ಮಾಡಿಕೊಳ್ಳಬಹುದು. ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು ಆರ್‌ಆರ್‌ಬಿ ಅಧಿಕೃತ ಜಾಲತಾಣ https://rrb.digialm.com//EForms/configuredHtml/33128/100181/login.htmlದಲ್ಲಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಲಾಗಿನ್ ಐಡಿ ರುಜುವತುಗಳನ್ನು ಬಳಸಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಒಟ್ಟು 3058 ವಿವಿಧ ಹುದ್ದೆಗಳ ಭರ್ತಿಗಾಗಿ ಪರೀಕ್ಷೆ

RRB ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿಪೂರ್ವ ಹಂತದ ಹುದ್ದೆಗಳಾದ ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್-394, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್-163, ವಾಣಿಜ್ಯ ಕಮ್ ಟಿಕೆಟ್ ಕ್ಲರ್ಕ್-2424 ಹಾಗೂ ರೈಲು ಗುಮಾಸ್ತ-77 ಸೇರಿದಂತೆ ಒಟ್ಟು 3058 ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ-1 ನಡೆಯುತ್ತಿದೆ.

ಅಭ್ಯರ್ಥಿಗಳ ಗಮನಕ್ಕೆ:

ಪರೀಕ್ಷಾ ಹಾಲ್ ಪ್ರವೇಶಿಸುವ ಮೊದಲು ಅಭ್ಯರ್ಥಿಗಳ ಆಧಾರ್ ಲಿಂಕ್ಡ್ ಬಯೋಮೆಟ್ರಿಕ್ ದೃಢೀಕರಣವನ್ನು ಪರೀಕ್ಷಾ ಕೇಂದ್ರದಲ್ಲಿ ಮಾಡಲಾಗುತ್ತದೆ ಆದ್ದರಿಂದ ಅಭ್ಯರ್ಥಿಗಳು ತಪ್ಪದೇ ತಮ್ಮ ಮೂಲ ಆಧಾರ್ ಕಾರ್ಡ್/ ಇ-ಪರಿಶೀಲಿಸಿದ ಆಧಾರ್‌ನ ಮುದ್ರಣವನ್ನು ಪರೀಕ್ಷಾ ಕೇಂದ್ರಕ್ಕೆ ತರಲು ಸೂಚಿಸಲಾಗಿದೆ.

ಪ್ರವೇಶ ಪತ್ರ ಡೌನ್ಲೋಡ್ ಮಾಡುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು ಆರ್.ಆರ್.ಬಿ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281 ಕ್ಕೆ ಭೇಟಿ ನೀಡಿ.

• ನಂತರ ನಿಮ್ಮ ಸಂಬಂಧಿತ ಅಥವಾ ನೀವು ಅರ್ಜಿ ಸಲ್ಲಿಸಿದ ಆರ್.ಆರ್.ಬಿ ಅಧಿಕೃತ ಜಾಲತಾಣವನ್ನು ಆಯ್ಕೆ ಮಾಡಿ.

• ಬಳಿಕ *ಸಿಇಎನ್ ಸಂಖ್ಯೆ 07/2025* ವಿಭಾಗದಲ್ಲಿ ನೀಡಲಾಗಿರುವ “CBT-I ಗಾಗಿ ಇ-ಕರೆ ಪತ್ರವನ್ನು ಡೌನ್‌ಲೋಡ್ ಮಾಡಿ” ಲಿಂಕ್ ಮೇಲೆ ಕ್ಲಿಕ್ ಮಾಡಿ. (ಅಥವಾ ನೇರವಾಗಿ https://rrb.digialm.com//EForms/configuredHtml/33128/100181/login.htmlಗೆ ಭೇಟಿ ನೀಡಿ)

• ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿ ಮುದ್ರಿಸಿ.

Important Direct Links:

RRB NTPC UG Admit Card 2026 Download Link (Direct Link)Login Now
RRB NTPC UG CEN No. 07/2025 City Intimation Slip Notice PDFDownload
Official WebsiteRRBs
More UpdatesKarnatakahelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment