EMRS 2026: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

Published on:

ಬೆಂಗಳೂರು: 2026ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ಏಕಲವ್ಯ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿ ಸಂಬಂಧಿಸಿದಂತೆ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸೋಮವಾರ(ಮೇ 04) ಪ್ರಕಟಿಸಿದೆ.

ವಿದ್ಯಾರ್ಥಿಗಳು/ಪೋಷಕರು, ಮೊದಲ ಸುತ್ತಿನ ಸೀಟು ಹಂಚಿಕೆಯ ಪಟ್ಟಿಯನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/kreis2026ಗೆ ಭೇಟಿ ನೀಡಿ ಡೌನ್ಲೋಡ್‌ ಮಾಡಿಕೊಳ್ಳಬಹುದು.

ಇಎಮ್‌ಆರ್‌ಎಸ್‌ 1ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ ಪಿಡಿಎಫ್‌ ಲಿಂಕ್‌ಡೌನ್ಲೋಡ್‌ ಮಾಡಿ

ಸೀಟು ಹಂಚಿಕೆ ಪಟ್ಟಿಯನ್ನು ಹೇಗೆ ಡೌನ್ಲೋಡ್‌ ಮಾಡುವುದು?

ಹಂತ-1 ಕೆಇಎ ಅಧಿಕೃತ ಜಾಲ https://cetonline.karnataka.gov.in/kea/ಕ್ಕೆ ಭೇಟಿ

ಹಂತ-2 ನಂತರ ಮೆನುನಲ್ಲಿ “ಪ್ರವೇಶಗಳು” ವಿಭಾಗದಡಿ “ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS)/ ಏಕಲವ್ಯ ಮಾದರಿ ವಸತಿ ಶಾಲೆ (EMRS)) ಪ್ರವೇಶ – 2026“ನ ಉಪವಿಭಾಗದಡಿ ನೀಡಲಾದ “EMRS ಮೊದಲ ಸುತ್ತಿನ ಹಂಚಿಕೆ(04-05-2026)” ಶಿರ್ಷೀಕೆ ಮೇಲೆ ಒತ್ತು ಮೂಲಕ EMRS ಮೊದಲ ಸುತ್ತಿನ ಹಂಚಿಕೆ ಪಟ್ಟಿಯನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

2 thoughts on “EMRS 2026: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ”

Leave a Comment