ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಅಕ್ಕ ಕೆಫೆ ನಿರ್ವಹಿಸಲು ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯರನ್ನು ಸ್ವಸಹಾಯ ಗುಂಪುಗಳಡಿ ಸಂಘಟಿಸಿ, ಅವರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ನಡೆಸಲು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವು ರಾಷ್ಟ್ರೀಯ ಜೀವನೋಪಾಯ ಅಭಿಯಾನ (ಗ್ರಾಮೀಣ ಮತ್ತು ನಗರ) ದಡಿ ಮುಳಬಾಗಿಲು ತಾಲೂಕಿನಲ್ಲಿ ಎನ್.ಆರ್.ಎಲ್.ಎಮ್ ಯೋಜನೆಯ ಅಡಿಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಅಕ್ಕ ಕೆಫೆ ನಿರ್ವಹಿಸಲು ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಸ್ವ ಸಹಾಯ ಗುಂಪುಗಳ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಸದರಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 20, 2025
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
• ಕೆಫೆಯಲ್ಲಿ ತೊಡಗಿಸಿಕೊಳ್ಳುವವರು ಕಡ್ಡಾಯವಾಗಿ ಎನ್.ಆರ್. ಎಲ್.ಎಂ/ಎನ್.ಯು.ಎಲ್.ಎಮ್ ಸ್ವ-ಸಹಾಯ ಗುಂಪಿನವರಾಗಿರಬೇಕು.
• ಪಾಕ ಪರಿಣಿತಿಯಲ್ಲಿ ಆಸಕ್ತಿವುಳ್ಳವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
• ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು/ ಪ್ರದೇಶ ಮಟ್ಟದ ಒಕ್ಕೂಟಗಳಡಿ ಅರ್ಹ ಮತ್ತು ಬಂಡವಾಳವನ್ನು ಹೂಡುವ ಸ್ತ್ರ ಸಹಾಯ ಗುಂಪುಗಳಿಗೆ ಆದ್ಯತೆ ನೀಡಲಾಗುತ್ತದೆ.
• ಯಾವುದೇ ಒಕ್ಕೂಟ/ ಹಣಕಾಸು ಸಂಸ್ಥೆಯ ಸಾಲ ಬಾಕಿದಾರರಾಗಿರಬಾರದು.
• ಅಕ್ಕ ಕೆಫೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲ ಕಾಲಕ್ಕೆ, ಹೊರಡಿಸುವ ಆದೇಶ ಸುತ್ತೋಲೆಗಳನ್ನು ಪಾಲನೆಮಾಡಲು ಬದ್ಧರಾಗಿರಬೇಕು.
• ರಾಜ್ಯ/ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ತರಬೇತಿ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಲು ಸಿದ್ಧರಿರಬೇಕು.
• ಅಕ್ಕ ಕೆಫೆಯಲ್ಲಿ ತೊಡಗಿಸಿಕೊಳ್ಳುವ ಸ್ವ-ಸಹಾಯ ಗುಂಪಿನಲ್ಲಿ ಕನಿಷ್ಠ 5 ರಿಂದ ಗರಿಷ್ಠ 10 ಮಹಿಳೆಯರು ಇರಬೇಕು.
ಅರ್ಜಿ ಸಲ್ಲಿಸುವ ವಿಧಾನ;
ಆಸಕ್ತ ಸ್ವ-ಸಹಾಯ ಗುಂಪಿನ ಮಹಿಳಾ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ ಪಡೆದು, ಅರ್ಜಿಯನ್ನು ಭರ್ತಿ ಮಾಡಿ. ಅಗತ್ಯವಿರುವ ಸೂಕ್ತ ದಾಖಲಾತಿಗಳನ್ನು ಲಗತ್ತಿಸಿ, ಕಡ್ಡಾಯವಾಗಿ ಗೆಜೆಟೆಡ್ ಅಧಿಕಾರಿಗಳ ದೃಢೀಕರಣದೊಂದಿಗೆ ಈ ಕೆಳಗಿನ ವಿಳಾಸಕ್ಕೆ ಆಗಸ್ಟ್ 20 ರೊಳಗೆ ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು.
ವಿಳಾಸ: *ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕ, ಎನ್.ಆರ್.ಎಲ್.ಎಂ. ಶಾಖೆ, ತಾಲ್ಲೂಕು ಪಂಚಾಯಿತಿ, ಮುಳಬಾಗಿಲು, ಕೋಲಾರ ಜಿಲ್ಲೆ*
ಹೆಚ್ಚಿನ ಮಾಹಿತಿಗಾಗಿ: ಮೊಬೈಲ್ ಸಂಖ್ಯೆ 9886415098, 8861634042, 9742232762, 8277399989 ಅನ್ನು ಸಂಪರ್ಕಿಸಬಹುದು.
ಮತ್ತಷ್ಟು ಸುದ್ದಿಗಳಿಗಾಗಿ KarnatakaHelp.inಗೆ ಭೇಟಿ ನೀಡಿ.
Bangalore