ಭಾರತೀಯ ಸೇನೆಯು ಅಗ್ನಿವೀರ್ ಸಾಮಾನ್ಯ ಪ್ರವೇಶ ಪರೀಕ್ಷೆ 2024 ರ ಫಲಿತಾಂಶಗಳನ್ನು(Army Agniveer Result 2024) ಈಗಾಗಲೇ ಪ್ರಕಟಿಸಿದೆ. ಫಲಿತಾಂಶಗಳನ್ನು 2024 ರ ಮೇ 28 ರಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಯಿತು. ಫೆಬ್ರವರಿ 13 ರಿಂದ ಮಾರ್ಚ್ 22 ರವರೆಗೆ ಅರ್ಜಿ ಸಲ್ಲಿಸಿದ ಮತ್ತು ಏಪ್ರಿಲ್ 22 ರಿಂದ ಮೇ 3 ರವರೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (ಸಿಬಿಟಿ) ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್ ಮೂಲಕ ಫಲಿತಾಂಶವನ್ನು ಪ್ರಕಟಿಸಲಾಗಿದೆ.ಅಗ್ನಿವೀರ್ ಯೋಜನೆಯು ಭಾರತೀಯ ಸೇನೆಯಲ್ಲಿ 4 ವರ್ಷಗಳ ಅಲ್ಪಾವಧಿಯ ಸೇವೆಗೆ ಅವಕಾಶ ನೀಡುವ ಹೊಸ ನೇಮಕಾತಿ ಯೋಜನೆಯಾಗಿದೆ. ಯೋಜನೆಯು ಯುವಕರಿಗೆ ದೇಶಕ್ಕೆ ಸೇವೆ ಸಲ್ಲಿಸುವ ಮತ್ತು ರಕ್ಷಣಾ ಪಡೆಗಳಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸುವ ಅವಕಾಶವನ್ನು ಒದಗಿಸುತ್ತದೆ.
ಪರೀಕ್ಷೆಗೆ ಹಾಜರದ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ತಮ್ಮ ಫಲಿತಾಂಶಗಳನ್ನು ಪಡೆದುಕೊಳ್ಳಬಹುದು. ನಾವು ಈ ಲೇಖನದಲ್ಲಿ ಆನ್ಲೈನ್ ಮೂಲಕ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ ಎಂಬುವುದರ ಕುರಿತು ಮಾಹಿತಿಯನ್ನು ನೀಡಲಾಗಿದೆ.
ಫಲಿತಾಂಶವನ್ನು ಪರಿಶೀಲಿಸಲು ಅಥವಾ ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಅಧಿಕೃತ ವೆಬ್‌ಸೈಟ್ https://www.joinindianarmy.nic.in/ ಗೆ ಭೇಟಿ ನೀಡಿ.
“ಫಲಿತಾಂಶಗಳು” ವಿಭಾಗಕ್ಕೆ ಹೋಗಿ ಮತ್ತು “ಅಗ್ನಿವೀರ್ ಸಿಇಇ 2024” ಗೆ ನಿರ್ದಿಷ್ಟ ಲಿಂಕ್ ಅನ್ನು ಹುಡುಕಿ.
Army Agniveer Result 2024
ಫಲಿತಾಂಶದ ಪ್ರತಿಯನ್ನು ಡೌನ್‌ಲೋಡ್ ಮಾಡಲು ಅಲ್ಲಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಫಲಿತಾಂಶದ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ..
ಫಲಿತಾಂಶಗಳನ್ನು ಘೋಷಿಸಿದ ನಂತರ, ಅರ್ಹ ಅಭ್ಯರ್ಥಿಗಳು ಶರೀರ ಸಾಮರ್ಥ್ಯ ಪರೀಕ್ಷೆಗಳು, ವೈದ್ಯಕೀಯ ಪರೀಕ್ಷೆಗಳು ಮತ್ತು ದಾಖಲೆ ಪರಿಶೀಲನೆಯ ಮುಂದಿನ ಸುತ್ತಿಗೆ ಒಳಗಾಗುತ್ತಾರೆ. ಅಂತಿಮ ಆಯ್ಕೆಯು ಅರ್ಹತಾ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಸಾಮರ್ಥ್ಯದ ಆಧಾರದ ಮೇಲೆ ಮಾಡಲಾಗುತ್ತದೆ.
ಅಗ್ನಿವೀರ್ 2024 ಫಲಿತಾಂಶಗಳ ಬಗ್ಗೆ ಕೆಲವು ಪ್ರಮುಖ ಅಂಶಗಳು:
ಫಲಿತಾಂಶಗಳನ್ನು ಈಗಾಗಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಅಥವಾ ನೋಂದಣಿ ಐಡಿಯನ್ನು ಬಳಸಿಕೊಂಡು ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
ಅಗ್ನಿವೀರ್ ಯೋಜನೆಯು 4 ವರ್ಷಗಳ ಅಲ್ಪಾವಧಿಯ ಸೇವೆಗೆ ಅವಕಾಶ ನೀಡುತ್ತದೆ.
ಶರೀರಕಾ ಸಾಮರ್ಥ್ಯ ಪರೀಕ್ಷೆ (ಪಿಎಫ್‌ಟಿ): ಅಗ್ನಿವೀರ್ ಭರ್ತಿಯಲ್ಲಿ ಶಾರೀರಿಕ ಸಾಮರ್ಥ್ಯ ಪರೀಕ್ಷೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಸಿಟ್-ಅಪ್‌ಗಳು ಮುಂತಾದ ವ್ಯಾಯಾಮಗಳನ್ನು ಅಭ್ಯಾಸ ಮಾಡುವ ಮೂಲಕ ಪರೀಕ್ಷೆಗಳಿಗೆ ತಯಾರಿ ನಡೆಸಿ.
ವೈದ್ಯಕೀಯ ಪರೀಕ್ಷೆ: ವೈದ್ಯಕೀಯ ಪರೀಕ್ಷೆಯಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲವೇ ಎಂದು ಪರಿಶೀಲಿಸಲಾಗುತ್ತದೆ. ವೈದ್ಯಕೀಯ ಪರೀಕ್ಷೆಗೆ (ಪಿಎಂಇ) ಹೋಗಿ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಮುಂಚಿತವಾಗಿ ಗುರುತಿಸಿ ಚಿಕಿತ್ಸೆ ಪಡೆಯಿರಿ.
ದಾಖಲೆ ಪರಿಶೀಲನೆ: ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ದಾಖಲೆಗಳಾದ ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳು ಜನ್ಮ ದಿನಾಂಕ ಪ್ರಮಾಣ ಪತ್ರ, ಗುರುತಿನ ರುಜುಗಳು ಮತ್ತು ಇತರ ಅಗತ್ಯವಿರುವ ದಾಖಲಾತಿಗಳನ್ನು ಒಟ್ಟುಗೂಡಿಸಿ.
ಅಗ್ನಿವೀರ್ ಯೋಜನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಥವಾ ಆಯ್ಕೆ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ಗೆ https://www.joinindianarmy.nic.in/ ಭೇಟಿ ನೀಡಿ.