ಭಾರತೀಯ ಸೇನೆಯಲ್ಲಿ ಜಾಗ್ ಎಂಟ್ರಿ ಸ್ಕೀಮ್ JAG 34 ನೇ ಪ್ರವೇಶ ಯೋಜನೆ (ಏಪ್ರಿಲ್ 2025) ಅಡಿಯಲ್ಲಿಷ್ಟ ಖಾಲಿ ಇರುವ ಕಾನೂನು ಪದವೀಧರ (ಪುರುಷ ಮತ್ತು ಮಹಿಳೆಯರು) ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಕಾನೂನು ವೃತ್ತಿಜೀವನ ಮತ್ತು ರಾಷ್ಟ್ರ ಸೇವೆಯನ್ನು ಒಟ್ಟಿಗೆ ಸೇರಿಸುವ ಒಂದು ಅದ್ಭುತ ಅವಕಾಶವನ್ನು ಈ ನೇಮಕತಿಯು ಒದಗಿಸುತ್ತದೆ. ಈ ಶಾಖೆಯ ಅಧಿಕಾರಿಗಳು ಸೇನೆಯ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ, ಶಿಸ್ತು ಕ್ರಮಗಳು, ಒಪ್ಪಂದಗಳು, ಕಾನೂನು ಪ್ರಕರಣಗಳು ನಿರ್ವಹಿಸುತ್ತಾರೆ.\
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಭಾರತೀಯ ಸೇನೆಯ ಅಧಿಕೃತ ವೈಬ್ ಸೈಟ್ ಮೂಲಕ ಆಗಸ್ಟ್ 13ರ ಒಳಗೆ ಅರ್ಜಿ ಸಲ್ಲಿಸಬೇಕು. ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.
Shortview of Army JAG 34th Entry Scheme 2024
Organization Name – Indian Army Course Name – JAG ENTRY SCHEME 34TH COURSE (APR 2025) Post Name – Judge Advocate (General Branch) Total Vacancy – 10 Application Process: Online Job Location – All Over India
Important Dates:
ಅಪ್ಲಿಕೇಶನ್ ಪ್ರಾರಂಭ: 15 ಜುಲೈ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ಆಗಸ್ಟ್ 2024
ಕೋರ್ಸ್ ಪ್ರಾರಂಭ: ಏಪ್ರಿಲ್ 2025
ಅರ್ಹತೆ:
ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರಬೇಕು.
ಕನಿಷ್ಠ 55% ಒಟ್ಟು ಅಂಕಗಳೊಂದಿಗೆ LLB ಪದವಿ ಪಡೆದಿರಬೇಕು.
ಭಾರತೀಯ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಂಡಿರಬೇಕು.
ಉತ್ತಮ ದೈಹಿಕ ಮತ್ತು ಮಾನಸಿಕ ಸ್ಥಿತಿಯಲ್ಲಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು 21 ರಿಂದ 27 ವರ್ಷ ವಯಸ್ಸಿನ ನಡುವೆ ಇರಬೇಕು.
ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳನ್ನು ಭಾರತೀಯ ಸೇನೆಯ ಸೇವಾ ಆಯ್ಕೆ ಮಂಡಳಿ (SSB) ನಡೆಸುವ ಸಂದರ್ಶನಕ್ಕೆ ಕರೆಯಲಾಗುತ್ತದೆ.
SSB ಸಂದರ್ಶನವು ಐದು ದಿನಗಳವರೆಗೆ ಇರುತ್ತದೆ ಮತ್ತು ಇದರಲ್ಲಿ ಗುಂಪು ಚಟುವಟಿಕೆಗಳು, ಮಾನಸಿಕ ಸಾಮರ್ಥ್ಯ ಪರೀಕ್ಷೆಗಳು ಮತ್ತು ವೈಯಕ್ತಿಕ ಸಂದರ್ಶನಗಳು ಸೇರಿವೆ.
SSB ಯಿಂದ ಶಿಫಾರಸು ಮಾಡಲಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕರೆಯಲಾಗುತ್ತದೆ.
ತರಬೇತಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯ ಕಾನೂನು ಕಾಲೇಜಿನಲ್ಲಿ ಒಂದು ವರ್ಷದ ತರಬೇತಿ ನೀಡಲಾಗುತ್ತದೆ.
ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅವರಿಗೆ ಸೇನೆಯಲ್ಲಿ ಲೆಫ್ಟಿನೆಂಟ್ ಎಂಬ ಹುದ್ದೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
How to Apply for Indian Army JAG Entry 34 Course Recruitment 2024
ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.joinindianarmy.nic.in/
“ಆನ್‌ಲೈನ್ ನೋಂದಣಿ” ಕ್ಲಿಕ್ ಮಾಡಿ.
“Indian Army JAG Entry 34 Course Recruitment 2024” ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.