ಆಯುಷ್ ಇಲಾಖೆಯು ಖಾಲಿ ಇರುವ ಲೆಕ್ಕ ವ್ಯವಸ್ಥಾಪಕರ ಹುದ್ದೆಯನ್ನು ನೇಮಕಾತಿಗಾಗಿ ನೇರ ಸಂದರ್ಶನಕ್ಕಾಗಿ ಅಧಿಸೂಚನೆಯನ್ನು ಹೊರಡಿಸಿದೆ.
ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆಯಡಿ-ಖಾಲಿಯಿರುವ ಲೆಕ್ಕ ವ್ಯವಸ್ಥಾಪಕರ ಹುದ್ದೆಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗುವ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಬೆಂಗಳೂರು ಆಯುಷ್ ಇಲಾಖೆಯ ಆಯುಕ್ತ ವಿಪಿನ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ MBA-ಹಣಕಾಸು/M.Com/ICWA (ಇಂಟರ್)/CA(ಇಂಟರ್) ಪೂರ್ಣಗೊಳಿಸಿರಬೇಕು.
ವೃತ್ತಿ ಅನುಭವ:
ಸರ್ಕಾರಿ ಅಥವಾ ಯಾವುದೇ ಇತರ ಪ್ರತಿಷ್ಠಿತ ಸಂಸ್ಥೆಯಲ್ಲಿ ಖಾತೆಗಳ ನಿರ್ವಹಣೆಯಲ್ಲಿ ಕನಿಷ್ಠ 2 ವರ್ಷಗಳ ಅನುಭವ. ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ವಲಯದ ಯೋಜನೆಗಳಲ್ಲಿ ಅನುಭವ ಮತ್ತು ಟ್ಯಾಲಿ ಅಕೌಂಟಿಂಗ್ ಪ್ಯಾಕೇಜ್ ಮತ್ತು MS ಆಫೀಸ್, MS ವರ್ಡ್, MS ಪವರ್ ಪಾಯಿಂಟ್ ಮತ್ತು MS ಎಕ್ಸೆಲ್ ಬಗ್ಗೆ ಜ್ಞಾನವು ಅಪೇಕ್ಷಣೀಯವಾಗಿರುತ್ತದೆ. ಆಯುಷ್ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ವ್ಯಕ್ತಿಗೆ ಆದ್ಯತೆ ನೀಡಲಾಗುವುದು.
ವಯಸ್ಸಿನ ಮಿತಿ:
ಗರಿಷ್ಠ ವಯಸ್ಸಿನ ಮಿತಿ – 45 ವರ್ಷಗಳು
ಆಯ್ಕೆ ವಿಧಾನ:
ಮೆರಿಟ್ ಅನುಭವ
ಟ್ಯಾಲಿ ಪರೀಕ್ಷೆ
ಸಂದರ್ಶನ
ಅರ್ಜಿ ಶುಲ್ಕ:
• ಉಲ್ಲೇಖಿಸಲಾಗಿರುವುದಿಲ್ಲ
How to Apply for Ayush Department Bangalore Recruitment 2025
ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ ಹಾಗೂ ಅಗತ್ಯ (ಎಲ್ಲಾ ವರ್ಷ/ಸೆಮಿಸ್ಟರ್ಗಳ ಮೂಲ ಅಂಕಪಟ್ಟಿಗಳು ಪೂರ್ಣಗೊಂಡ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರದೊಂದಿಗೆ ನಿಗದಿತ ಪ್ರತಿಗಳ ಒಂದು ಸೆಟ್ ಜೆರಾಕ್ಸ್ ಪ್ರತಿ,ಭರ್ತಿ ಮಾಡಿದ ಅರ್ಜಿ ನಮೂನೆ, ಪಾಸ್ಪೋರ್ಟ್ ಗಾತ್ರದ ಫೋಟೋ, ವಿಳಾಸದ ಪುರಾವೆ ಹಾಗೂ ರೆಸ್ಯೂಮ್) ದಾಖಲಾತಿಗಳೊಂದಿಗೆ ಈ ಕೆಳಗೆ ನೀಡಲಾಗಿರುವ ವಿಳಾಸದಲ್ಲಿ ನಡೆಸಲಾಗುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ನೇರ ಸಂದರ್ಶನ ನಡೆಯುವ ದಿನಾಂಕ ಹಾಗೂ ಸ್ಥಳ
ಆಗಸ್ಟ್ 12ರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ *ಆಯುಷ್ ಇಲಾಖೆ, ಧನ್ವಂತರಿ ರಸ್ತೆ ಬೆಂಗಳೂರು-560009* ಇಲ್ಲಿ ನೇರ ಸಂದರ್ಶನ ನಡೆಸಲಾಗುತ್ತದೆ.
I need job
I need a job I am completed mba in 2024 so I am still searching for job