ಬೆಂಗಳೂರು ವಿಶ್ವವಿದ್ಯಾನಿಲಯ(ಜ್ಞಾನಭಾರತಿ)ದಲ್ಲಿ ವಿವಿಧ ವಿಭಾಗಗಳಲ್ಲಿ ಪೂರ್ಣಾವಧಿ/ಅರೆಕಾಲಿಕ ಅತಿಥಿ ಅಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾದೆ.
ಕಲಾ,ವಿಜ್ಞಾನ, ವಾಣಿಜ್ಯ ಹಾಗೂ ಶಿಕ್ಷಣ ವಿಭಾಗಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯ ಅಧಿಕೃತ ವೆಬ್ಸೈಟ್ https://bangaloreuniversity.karnataka.gov.in/ಗೆ ಭೇಟಿ ನೀಡಿ. ಸೆ.19ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವೆ ಶಾಂತಲಾ ಕೆ.ಟಿ ಅವರು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇಮಕಾತಿಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 06, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ – 19, 2025
- ಅರ್ಜಿ ಸಲ್ಲಿಸಿದ ಪ್ರತಿಯನ್ನು ಸಂಬಂಧಪಟ್ಟ ವಿಭಾಗಕ್ಕೆ ನಿಗದಿ ದಾಖಲೆಗಳೊಂದಿಗೆ ಸಲ್ಲಿಸಲು ಕೊನೆ ದಿನಾಂಕ – ಸೆಪ್ಟೆಂಬರ್ – 20, 2025
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಯುಜಿಸಿ ನಿಯಮಗಳ ಪ್ರಕಾರ ನೆಟ್/ಸ್ಲೇಟ್/ಪಿ.ಹೆಚ್.ಡಿ (NET/SLET/PhD) ಪೂರ್ಣಗೊಳಿಸಿರಬೇಕು.
NET/SLET/PhD ಅರ್ಹತೆ ಹೊಂದಿಲ್ಲದ ಅಭ್ಯರ್ಥಿಗಳಿಗೂ ಅವಕಾಶವಿದೆ. (ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿರಿ.
ವಯೋಮಿತಿ:
ಬೆಂಗಳೂರು ವಿಶ್ವವಿದ್ಯಾಲಯ ಮಾನದಂಡಗಳ ಪ್ರಕಾರ ವಯೋಮಿತಿ ಹೊಂದಿರಬೇಕು.
ಸಂಬಳ:
NET/SLET/ Ph.D ಅರ್ಹತೆ ಹೊಂದಿರುವ ಪೂರ್ಣ ಸಮಯದ ಅತಿಥಿ ಅಧ್ಯಾಪಕರು (ವಾರಕ್ಕೆ ಗರಿಷ್ಠ 16 ಗಂಟೆಗಳು/ತಿಂಗಳುವರೆಗೆ) – ತಿಂಗಳಿಗೆ ರೂ.50000/-
NET/SLET/Ph.D ಅರ್ಹತೆ ಹೊಂದಿರುವ ಅರೆಕಾಲಿಕ ಅತಿಥಿ ಅಧ್ಯಾಪಕರು (ವಾರಕ್ಕೆ ಕನಿಷ್ಠ 8 ಗಂಟೆಗಳು) – ಗಂಟೆಗೆ ರೂ.780/-
NET/SLET/Ph.D ಅರ್ಹತೆ ಇಲ್ಲದ ಅರೆಕಾಲಿಕ ಅತಿಥಿ ಅಧ್ಯಾಪಕರು- ಗಂಟೆಗೆ ರೂ.680/-
ಆಯ್ಕೆ ವಿಧಾನ:
- ಮೆರಿಟ್ ಲಿಸ್ಟ್
- ಸಂದರ್ಶನ
- ದಾಖಲೆ ಪರಿಶೀಲನೆ
ಅರ್ಜಿ ಶುಲ್ಕ:
- ಇತರೆ ಎಲ್ಲಾ ಅಭ್ಯರ್ಥಿಗಳಿಗೆ – 200ರೂ.
- ಪ.ಜಾತಿ, ಪ.ಪಂಗಡ ಹಾಗೂ CAT-I ಅಭ್ಯರ್ಥಿಗಳಿಗೆ – 100ರೂ.
How to Apply for Bangalore University Guest Faculty Recruitment 2025-26
ಅರ್ಜಿ ಸಲ್ಲಿಸುವ ವಿಧಾನ;
- ಬೆಂಗಳೂರು ವಿಶ್ವವಿದ್ಯಾಲಯ ಅಧಿಕೃತ ವೆಬ್ಸೈಟ್ https://bangaloreuniversity.karnataka.gov.in/ ಗೆ ಭೇಟಿ ನೀಡಿ.
- ನಂತರ ಸ್ನಾತಕೋತ್ತರ ಪ್ರವೇಶಗಳು 2025-26 ವಿಭಾಗದ ಕೆಳಗೆ ನೀಡಲಾಗಿರುವ “ಅತಿಥಿ ಅಧ್ಯಾಪಕರ ಹುದ್ದೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮನ್ನು ಮತ್ತೊಂದು ಹೊಸ ಮುಖಪುಟಕ್ಕೆ ಮರು ನಿರ್ದೇಶಿಸಲಾಗುತ್ತದೆ.
- ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ನೊಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
- ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
- ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ ಕೊನೆಯಲ್ಲಿ ಅರ್ಜಿಯನ್ನು ಪರಿಶೀಲಿಸಿ ಮತ್ತೊಮ್ಮೆ ಸಲ್ಲಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
Important Direct Links:
| Official Notification PDF | Download |
| Online Application Form Link | Apply Now |
| Official Website | bangaloreuniversity.gov.in |
| More Updates | KarnatakaHelp.in |
Ms, kollesha S S L C II PuC Completing ms kollesha
MA bed