Bank of Baroda 417 Vacancies Recruitment 2025 Notification
ಬ್ಯಾಂಕಿನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕ್ ಆಫ್ ಬರೋಡಾ ಬುಧವಾರ(ಜು.6)ದಂದು ಅಧಿಸೂಚನೆಯನ್ನು ಹೊರಡಿಸಿ, ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಚಿಲ್ಲರೆ ಹೊಣೆಗಾರಿಕೆಗಳು ಮತ್ತು ಗ್ರಾಮೀಣ ಮತ್ತು ಕೃಷಿ ಬ್ಯಾಂಕಿಂಗ್ ಇಲಾಖೆಗಳಲ್ಲಿ ಮಾರಾಟ – ವ್ಯವಸ್ಥಾಪಕ, ಕೃಷಿ ಮಾರಾಟ ಅಧಿಕಾರಿ ಹಾಗೂ ಕೃಷಿ ಮಾರಾಟ ವ್ಯವಸ್ಥಾಪಕ ಒಟ್ಟು 417 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನಿಯಮಿತ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BOB ಅಧಿಕೃತ ವೆಬ್ಸೈಟ್ https://www.bankofbaroda.in/career/current-opportunitiesಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಮಾರಾಟ – ವ್ಯವಸ್ಥಾಪಕ ಹುದ್ದೆಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
ಕೃಷಿ ಮಾರಾಟ ಅಧಿಕಾರಿ ಹಾಗೂ ಕೃಷಿ ಮಾರಾಟ ವ್ಯವಸ್ಥಾಪಕ ಹುದ್ದೆಗಳಿಗೆ – ಕೃಷಿ/ತೋಟಗಾರಿಕೆ/ಪಶುಸಂಗೋಪನೆ/ಪಶುವೈದ್ಯಕೀಯ ವಿಜ್ಞಾನ/ಡೈರಿ ವಿಜ್ಞಾನ/ಮೀನುಗಾರಿಕೆ ವಿಜ್ಞಾನ/ಮೀನು ಕೃಷಿ/ಕೃಷಿ. ಮಾರ್ಕೆಟಿಂಗ್ ಮತ್ತು ಸಹಕಾರ/ಸಹಕಾರ ಮತ್ತು ಬ್ಯಾಂಕಿಂಗ್/ಕೃಷಿ-ಅರಣ್ಯ/ಅರಣ್ಯ/ಕೃಷಿ ಜೈವಿಕ ತಂತ್ರಜ್ಞಾನ/ಬಿ.ಟೆಕ್ ಜೈವಿಕ ತಂತ್ರಜ್ಞಾನ/ಆಹಾರ ವಿಜ್ಞಾನ/ಕೃಷಿ ವ್ಯವಹಾರ ನಿರ್ವಹಣೆ/ಆಹಾರ ತಂತ್ರಜ್ಞಾನ/ಡೈರಿ ತಂತ್ರಜ್ಞಾನ/ಕೃಷಿ ಎಂಜಿನಿಯರಿಂಗ್/ರೇಷ್ಮೆ ಕೃಷಿ/ಮೀನುಗಾರಿಕೆ ಎಂಜಿನಿಯರಿಂಗ್ನಲ್ಲಿ 4 ವರ್ಷಗಳ ಪದವಿ ಪೂರ್ಣಗೊಳಿಸಿರಬೇಕು.
ಗಮನಿಸಿ: ಮತ್ತಷ್ಟು ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿರಿ.
ವಯೋಮಿತಿ:
01-08-2025 ರಂತೆ;
ಕನಿಷ್ಠ ಮಿತಿ – 24 ರಿಂದ 26 ವರ್ಷಗಳು
ಗರಿಷ್ಠ ಮಿತಿ – 34 ರಿಂದ 42 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 48,480 – 93,960 ರೂ. ವರೆಗೆ ನೀಡಲಾಗುತ್ತದೆ.
ಆಯ್ಕೆ ವಿಧಾನ:
ಆನ್ಲೈನ್ ಪರೀಕ್ಷೆ
ಮನೋಮಾಪನ ಪರೀಕ್ಷೆ
ಗುಂಪು ಚರ್ಚೆ
ಸಂದರ್ಶನ
ಅರ್ಜಿ ಶುಲ್ಕ:
ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ – 850 ರೂ.
ಪ.ಜಾತಿ, ಪ.ಪಂಗಡ, ಪಿ ಡಬ್ಲ್ಯೂ ಡಿ, ಮಾಜಿ ಸೈನಿಕ, ಅಂಗವಿಕಲ ಮಾಜಿ ಸೈನಿಕ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – 175 ರೂ.
How to Apply for Bank of Baroda 417 Vacancies Recruitment 2025
ಅರ್ಜಿ ಸಲ್ಲಿಸುವ ವಿಧಾನ;
ಬ್ಯಾಂಕ್ ಆಫ್ ಬರೋಡಾ ಅಧಿಕೃತ ವೆಬ್ಸೈಟ್ ನಲ್ಲಿ https://www.bankofbaroda.in/career/current-opportunitiesಗೆ ಭೇಟಿ ನೀಡಿ.
ಚಿಲ್ಲರೆ ಹೊಣೆಗಾರಿಕೆಗಳು ಮತ್ತು ಗ್ರಾಮೀಣ ಮತ್ತು ಕೃಷಿ ಬ್ಯಾಂಕಿಂಗ್ ಇಲಾಖೆಗಳಿಗೆ ನಿಯಮಿತ ಆಧಾರದ ಮೇಲೆ ಮಾನವ ಸಂಪನ್ಮೂಲ ನೇಮಕಾತಿ ಜಾಹೀರಾತು. ಸಂಖ್ಯೆ BOB/HRM/REC/ADVT/2025/11 – ವಿಭಾಗದ ಕೆಳಗೆ *ಈಗಲೇ ಅನ್ವಯಿಸು* ಲಿಂಕ್ ಮೇಲೆ ಕ್ಲಿಕ್ ಮಾಡಿ.
ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯ ವಿಭಾಗವನ್ನು ಆಯ್ಕೆ ಮಾಡಿ.
ಅರ್ಜಿ ಸಲ್ಲಿಸಲು ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ನೋಂದಾಯಿಸಿ.
ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ, ಶೈಕ್ಷಣಿಕ ದಾಖಲೆ, ಭಾವಚಿತ್ರ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.
ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
ಕೊನೆದಾಗಿ ಅರ್ಜಿಯನ್ನು ಪರೀಶೀಲನೆ ಮಾಡಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Ok