ಬ್ಯಾಂಕ್ ಆಫ್ ಬರೋಡಾ ದೇಶದ ವಿವಿಧ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಶಾಖೆಗಳಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ ಅಪ್ರೆಂಟಿಸ್ಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 2700 ಅಪ್ರೆಂಟಿಸ್ ತರಬೇತಿಗೆ ಪದವೀಧರ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ತರಬೇತಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BOB ಅಧಿಕೃತ ವೆಬ್ ಸೈಟ್ https://bankofbaroda.bank.in/career/current-opportunities ಗೆ ಭೇಟಿ ನೀಡಿ. ಡಿ.01ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ನವೆಂಬರ್ 11, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 01, 2025
ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ವಿವರ
ಆಂಧ್ರಪ್ರದೇಶ – 38 ಹುದ್ದೆಗಳು
ಅಸ್ಸಾಂ – 21 ಹುದ್ದೆಗಳು
ಬಿಹಾರ – 47 ಹುದ್ದೆಗಳು
ಚಂಡಿಗಡ – 12 ಹುದ್ದೆಗಳು
ಛತ್ತೀಸ್ಗಡ – 48 ಹುದ್ದೆಗಳು
ದಾದ್ರಾ ಮತ್ತು ನಗರ ಹವೇಲಿ – 05 ಹುದ್ದೆಗಳು
ದೆಹಲಿ -119 ಹುದ್ದೆಗಳು
ಗೋವಾ – 10 ಹುದ್ದೆಗಳು
ಗುಜರಾತ್ – 400 ಹುದ್ದೆಗಳು
ಹರಿಯಾಣ – 36 ಹುದ್ದೆಗಳು
ಜಮ್ಮು ಮತ್ತು ಕಾಶ್ಮೀರ – 05 ಹುದ್ದೆಗಳು
ಜಾರ್ಖಂಡ್- 15 ಹುದ್ದೆಗಳು
ಕರ್ನಾಟಕ – 440 ಹುದ್ದೆಗಳು
ಕೇರಳ – 52 ಹುದ್ದೆಗಳು
ಮಧ್ಯ ಪ್ರದೇಶ – 56 ಹುದ್ದೆಗಳು
ಮಹಾರಾಷ್ಟ್ರ – 297 ಹುದ್ದೆಗಳು
ಮಣಿಪುರ – 02 ಹುದ್ದೆಗಳು
ಮಿಜೋರಾಮ್ – 05 ಹುದ್ದೆಗಳು
ಒಡಿಶಾ – 29 ಹುದ್ದೆಗಳು
ಪುದುಚೇರಿ – 06 ಹುದ್ದೆಗಳು
ಪಂಜಾಬ್ – 96 ಹುದ್ದೆಗಳು
ರಾಜಸ್ಥಾನ್ – 215 ಹುದ್ದೆಗಳು
ತಮಿಳುನಾಡು – 159 ಹುದ್ದೆಗಳು
ತೆಲಂಗಾಣ – 154 ಹುದ್ದೆಗಳು
ಉತ್ತರ ಪ್ರದೇಶ- 307 ಹುದ್ದೆಗಳು
ಉತ್ತರಖಂಡ್ – 22 ಹುದ್ದೆಗಳು
ಪಶ್ಚಿಮ ಬಂಗಾಳ – 104 ಹುದ್ದೆಗಳು
ಒಟ್ಟು – 2700 ಅಪ್ರೆಂಟಿಸ್ ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಮಾನ ಅರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
01-11-2025 ರಂತೆ
- ಕನಿಷ್ಠ ವಯಸ್ಸಿನ ಮಿತಿ – 20 ವರ್ಷಗಳು
- ಗರಿಷ್ಠ ವಯಸ್ಸಿನ ಮಿತಿ – 28 ವರ್ಷಗಳು
ವಯೋಮಿತಿ ಸಡಿಲಿಕೆ: ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ -10 ರಿಂದ 15 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಆನ್ಲೈನ್ ಪರೀಕ್ಷೆ
ದಾಖಲೆ ಪರಿಶೀಲನೆ
ಸ್ಥಳೀಯ ಭಾಷಾ ಪರೀಕ್ಷೆ
ಶಿಷ್ಯವೇತನ/ತರಬೇತಿ ವೇತನ:
ಅಭ್ಯರ್ಥಿಗೆ ಮಾಸಿಕ 15,000ರೂ. ವರೆಗೆ ಮಾಹೆಯಾನ ಸ್ಟೈಫಂಡ್ ಅನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ – 800ರೂ.
ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 400 ರೂ.
ಪ.ಜಾತಿ ಹಾಗೂ ಪ. ಪಂಗಡದ ಅಭ್ಯರ್ಥಿಗಳಿಗೆ – ಶುಲ್ಕ ವಿನಯತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
• BOB ಅಧಿಕೃತ ವೆಬ್ ಸೈಟ್ https://bankofbaroda.bank.in/career/current-opportunities ಗೆ ಭೇಟಿ ನೀಡಿ.
• ಪ್ರಸ್ತುತ ಅವಕಾಶಗಳು ವಿಭಾಗದ ಕೆಳಗೆ ನೀಡಲಾಗಿರುವ “1961 ರ ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ ಅಪ್ರೆಂಟಿಸ್ಗಳ ನೇಮಕಾತಿ” ಈಗಲೇ ಅನ್ವಯಿಸಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ NATS ಅಧಿಕೃತ ಜಾಲತಾಣ https://nats.education.gov.in/student_type.php ಕ್ಕೆ ನಿಮ್ಮನ್ನು ಮರುನಿರ್ದೇಶಸಲಾಗುತ್ತದೆ. ನಂತರ https://www.apprenticeshipindia.gov.in/apprenticeship/opportunityಗೆ ಭೇಟಿ ನೀಡಿ.
• ನಂತರ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• “ಬ್ಯಾಂಕ್ ಆಫ್ ಬರೋಡಾದಲ್ಲಿ ಅಪ್ರೆಂಟಿಸ್ಗಳ ನೇಮಕಾತಿ BOB/HRM/ಅಪ್ರೆಂಟಿಸ್/ADVT/2025/02” – ಅಪ್ರೆಂಟಿಸ್ಶಿಪ್ ಅವಕಾಶ ಜಾಹೀರಾತು ಹುಡುಕಿ *ಅನ್ವಯಿಸು* ಲಿಂಕ ಮೇಲೆ ಕ್ಲಿಕ್ ಮಾಡಿ.
• ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು BFSI SSC (info@bfsissc.com) ನಿಂದ ಇಮೇಲ್ ಸ್ವೀಕರಿಸುತ್ತಾರೆ.
• ಇಮೇಲ್ ಸ್ವೀಕರಿಸಿದ ಅಭ್ಯರ್ಥಿಗಳು ಜಾತಿ, ವರ್ಗ, ತರಬೇತಿಗಾಗಿ ಸ್ಥಳಗಳು/ಕೇಂದ್ರಗಳ ಆಯ್ಕೆ ಇತ್ಯಾದಿಗಳ ಬಗ್ಗೆ ಅಗತ್ಯ ವಿವರ ಹಾಗೂ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
• ನಂತರ ಅಭ್ಯರ್ಥಿಗಳು ತಮ್ಮ ಭಾವಚಿತ್ರ, ಸಹಿ ಮತ್ತು ದಾಖಲೆಗಳನ್ನು ಆಯಾ ಅಪ್ರೆಂಟಿಸ್ಶಿಪ್ ಪೋರ್ಟಲ್ಗಳ ಮಾರ್ಗಸೂಚಿಗಳ ಅಡಿಯಲ್ಲಿ ವಿವರಿಸಿದಂತೆ ಸ್ಕ್ಯಾನ್ ಮಾಡಿ ಸಲ್ಲಿಸಬೇಕು.
• ಕೊನೆಯಲ್ಲಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿ ಹಾಗೂ ಅರ್ಜಿ ಶುಲ್ಕ ಪಾವತಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
| Official Notification PDF | Download |
| Online Registation Form Link | nats.education.gov.in |
| Online Application Form Link | www.apprenticeshipindia.gov.in/ |
| Official Website | bankofbaroda.bank.in |
| More Updates | KarnatakaHelp.in |


