ಬ್ಯಾಂಕ್ ಆಫ್ ಬರೋಡದಲ್ಲಿ ಪದವೀಧರರಿಗೆ ಅಪ್ರೆಂಟಿಸ್ ತರಬೇತಿ ನೀಡಲು ಅರ್ಜಿ ಆಹ್ವಾನ

1 ವರ್ಷದ ತರಬೇತಿ

Published on:

ಬ್ಯಾಂಕ್ ಆಫ್ ಬರೋಡ 2026-27ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ 5000 ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿಗಾಗಿ ಅಧಿಸೂಚನೆ ಹೊರಡಿಸಿದೆ.

ಭಾರತದಾದ್ಯಂತ ವಿವಿಧ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ತನ್ನ ಶಾಖೆಗಳಿಗೆ ಪದವೀಧರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಸದರಿ ತರಬೇತಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ಜೂ.08ರೊಳಗೆ ಅಧಿಕೃತ ಜಾಲತಾಣ https://nats.education.gov.in/ ಅಥವಾ https://www.apprenticeshipindia.gov.in/ಗೆ ಭೇಟಿ ನೀಡಿ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಅಧಿಸೂಚನೆಯ ದಿನಾಂಕ – ಮೇ 19, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 08, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜೂನ್ 08, 2026

ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ವಿವರ:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು – 01
ಆಂಧ್ರಪ್ರದೇಶ – 118
ಅರುಣಾಚಲ ಪ್ರದೇಶ – 04
ಅಸ್ಸಾಂ – 29
ಬಿಹಾರ – 179
ಚಂಡಿಗಡ – 04
ಛತ್ತೀಸ್ಗಡ – 122
ದಾದ್ರಾ ಮತ್ತು ನಗರ ಹವೇಲಿ & ದಮನ್ ಮತ್ತು ಡಿಯು – 07
ದೆಹಲಿ – 91
ಗೋವಾ – 29
ಗುಜರಾತ್ – 960
ಹರಿಯಾಣ – 84
ಹಿಮಾಚಲ ಪ್ರದೇಶ – 08
ಜಮ್ಮು ಮತ್ತು ಕಾಶ್ಮೀರ – 02
ಜಾರ್ಖಂಡ್ – 64
ಕರ್ನಾಟಕ – 483
ಕೇರಳ – 111
ಲಡಾಕಾ – 02
ಮಧ್ಯ ಪ್ರದೇಶ – 136
ಮಹಾರಾಷ್ಟ್ರ – 580
ಮಣಿಪುರ – 01
ಮೇಘಾಲಯ – 04
ಮಿಜೋರಾಮ್ – 02
ನಾಗಾಲ್ಯಾಂಡ್ – 03
ಒಡಿಶಾ – 92
ಪುದುಚೇರಿ – 04
ಪಂಜಾಬ್ – 78
ರಾಜಸ್ಥಾನ್ – 412
ಸಿಕ್ಕಿಂ – 01
ತಮಿಳುನಾಡು – 199
ತೆಲಂಗಾಣ – 83
ತ್ರಿಪುರ – 03
ಉತ್ತರ ಪ್ರದೇಶ – 764
ಉತ್ತರಖಂಡ್ – 76
ಪಶ್ಚಿಮ ಬಂಗಾಳ – 194

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಮಾನ ಅರ್ಹತೆಯನ್ನು ಹೊಂದಿರಬೇಕು.

ವಯೋಮಿತಿ:

01-05-2026 ರಂತೆ;

ಕನಿಷ್ಠ ವಯಸ್ಸಿನ ಮಿತಿ 20 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ 28 ವರ್ಷಗಳು

ವಯೋಮಿತಿ ಸಿಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳು, ಪಿಡಬ್ಲ್ಯೂಬಿಡಿ ಒಬಿಸಿ ಅಭ್ಯರ್ಥಿಗಳಿಗೆ 13 ವರ್ಷಗಳು, ಪಿಡಬ್ಲ್ಯೂಬಿಡಿ ಪ.ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 15 ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಆನ್ಲೈನ್ ಪರೀಕ್ಷೆ
  • ದಾಖಲೆ ಪರಿಶೀಲನೆ
  • ಸ್ಥಳೀಯ ಭಾಷಾ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ
  • ಅಂತಿಮ ಆಯ್ಕೆ

ಸ್ಟೈಫಂಡ್:

ಮಾಹೆಯಾನ ₹15,000ವರೆಗೆ ಸ್ಟೈಫಂಡ್ ಅನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ (ಪುರುಷ) ಅಭ್ಯರ್ಥಿಗಳಿಗೆ -₹800
ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್, ಲಿಂಗತ್ವ ಅಲ್ಪಸಂಖ್ಯಾತ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ₹600
ಪ.ಜಾತಿ, ಪ. ಪಂಗಡ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ₹200

ಅರ್ಜಿ ಸಲ್ಲಿಸುವ ವಿಧಾನ ಹೇಗೆ..?

• ಮೊದಲಿಗೆ ಅರ್ಜಿದಾರರು BOB ಅಧಿಕೃತ ವೆಬ್ ಸೈಟ್ https://bankofbaroda.bank.in/career/current-opportunities ಗೆ ಭೇಟಿ ನೀಡಿ.

• ಪ್ರಸ್ತುತ ಅವಕಾಶಗಳು ವಿಭಾಗದ ಕೆಳಗೆ ನೀಡಲಾಗಿರುವ “1961 ರ ಅಪ್ರೆಂಟಿಸ್‌ ಕಾಯ್ದೆಯಡಿಯಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿ” ಈಗಲೇ ಅನ್ವಯಿಸಿ ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ NATS ಅಧಿಕೃತ ಜಾಲತಾಣ https://nats.education.gov.in/student_type.php ಕ್ಕೆ ಭೇಟಿ ನೀಡಿ.

ಅಥವಾ

• NAPS ಅಧಿಕೃತ ಜಾಲತಾಣ https://www.apprenticeshipindia.gov.in/apprenticeship/opportunity ಕ್ಕೆ ಭೇಟಿ ನೀಡಿ.

• ನಂತರ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• “ಬ್ಯಾಂಕ್ ಆಫ್ ಬರೋಡಾದಲ್ಲಿ ಅಪ್ರೆಂಟಿಸಸ್ ಕಾಯ್ದೆ, 1961 ರ BOB/HRM/APPRENTICE/ADVT/2026/01 ಅಡಿಯಲ್ಲಿ ಅಪ್ರೆಂಟಿಸ್‌ಗಳ ನಿಯೋಜನೆ ಜಾಹೀರಾತು ಹುಡುಕಿ *ಅನ್ವಯಿಸು* ಲಿಂಕ್ ಮೇಲೆ ಕ್ಲಿಕ್ ಮಾಡಿ.

• NATS/NAPS ನಲ್ಲಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು BFSI SSC (info@bfsissc.com) ನಿಂದ ಇಮೇಲ್ ಸ್ವೀಕರಿಸುತ್ತಾರೆ.

• ಇಮೇಲ್ ಸ್ವೀಕರಿಸಿದ ಅಭ್ಯರ್ಥಿಗಳು ಜಾತಿ, ವರ್ಗ, ತರಬೇತಿಗಾಗಿ ಸ್ಥಳಗಳು/ಕೇಂದ್ರಗಳ ಆಯ್ಕೆ ಇತ್ಯಾದಿಗಳ ಬಗ್ಗೆ ಅಗತ್ಯ ವಿವರ ಹಾಗೂ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

• ನಂತರ ಅಭ್ಯರ್ಥಿಗಳು ತಮ್ಮ ಭಾವಚಿತ್ರ, ಸಹಿ ಮತ್ತು ದಾಖಲೆಗಳನ್ನು ಆಯಾ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗಳ ಮಾರ್ಗಸೂಚಿಗಳ ಅಡಿಯಲ್ಲಿ ವಿವರಿಸಿದಂತೆ ಸ್ಕ್ಯಾನ್ ಮಾಡಿ ಸಲ್ಲಿಸಬೇಕು.

• ಕೊನೆಯಲ್ಲಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿ ಹಾಗೂ ಅರ್ಜಿ ಶುಲ್ಕ ಪಾವತಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

Official Notification PDFDownload
Online Application Form Link-1Apply Now
Online Application Form Link-2Apply Now
Official Websitebankofbaroda.bank.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment