ಬ್ಯಾಂಕ್ ಆಫ್ ಬರೋಡಾ (BOB)ದ ಕಾರ್ಪೊರೇಟ್ ಮತ್ತು ಸಾಂಸ್ಥಿಕ ಕ್ರೆಡಿಟ್ ಸಿ & ಐಸಿ ಇಲಾಖೆಯಲ್ಲಿ ವಿವಿಧ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ವಿಭಾಗಗಳಲ್ಲಿ ಖಾಲಿ ಇರುವ ಮ್ಯಾನೇಜರ್, ಹಿರಿಯ ವ್ಯವಸ್ಥಾಪಕ ಹಾಗೂ ಮುಖ್ಯ ವ್ಯವಸ್ಥಾಪಕ ಸೇರಿದಂತೆ ಒಟ್ಟು 50 ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನಿಯಮಿತ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BOB ಅಧಿಕೃತ ವೆಬ್ ಸೈಟ್ https://www.bankofbaroda.in/career/current-opportunitiesಮೂಲಕ ಅ.30ರೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – ಅಕ್ಟೋಬರ್ 30, 2025
ಹುದ್ದೆಗಳ ವಿವರಗಳು:
ಮ್ಯಾನೇಜರ್-ಕ್ರೆಡಿಟ್ ವಿಶ್ಲೇಷಕ – 01 ಹುದ್ದೆ
ಸೀನಿಯರ್ ಮ್ಯಾನೇಜರ್ ಕ್ರೆಡಿಟ್ ವಿಶ್ಲೇಷಕ – 25 ಹುದ್ದೆಗಳು
ಚೀಫ್ ಮ್ಯಾನೇಜರ್ ಕ್ರೆಡಿಟ್ ವಿಶ್ಲೇಷಕ – 02 ಹುದ್ದೆಗಳು
ಸೀನಿಯರ್ ಮ್ಯಾನೇಜರ್ – C & IC ರಿಲೇಷನ್ಶಿಪ್ ಮ್ಯಾನೇಜರ್ – 16 ಹುದ್ದೆಗಳು
ಚೀಫ್ ಮ್ಯಾನೇಜರ್ – C & IC ರಿಲೇಷನ್ಶಿಪ್ ಮ್ಯಾನೇಜರ್ – 06 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಮತ್ತು ಫೈನಾನ್ಸ್ ವಿಷಯದಲ್ಲಿ ವಿಶೇಷತೆಯೊಂದಿಗೆ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಅಥವಾ ಸಿಎ/ಸಿಎಂಎ/ಸಿಎಸ್/ಸಿಎಫ್ಎ ಪದವಿಯನ್ನು ಹೊಂದಿರಬೇಕು.
ವಯೋಮಿತಿ:
01-10-2025 ರಂತೆ;
✓ ಮ್ಯಾನೇಜರ್-ಕ್ರೆಡಿಟ್ ವಿಶ್ಲೇಷಕ ಹುದ್ದೆಗೆ;
ಕನಿಷ್ಠ ವಯಸ್ಸಿನ ಮಿತಿ – 25 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
✓ ಸೀನಿಯರ್ ಮ್ಯಾನೇಜರ್ ಕ್ರೆಡಿಟ್ ವಿಶ್ಲೇಷಕ ಹುದ್ದೆಗೆ;
ಕನಿಷ್ಠ ವಯಸ್ಸಿನ ಮಿತಿ – 28 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
✓ ಚೀಫ್ ಮ್ಯಾನೇಜರ್ ಕ್ರೆಡಿಟ್ ವಿಶ್ಲೇಷಕ ಹುದ್ದೆಗೆ;
ಕನಿಷ್ಠ ವಯಸ್ಸಿನ ಮಿತಿ – 32 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 42 ವರ್ಷಗಳು
✓ ಸೀನಿಯರ್ ಮ್ಯಾನೇಜರ್ – C & IC ರಿಲೇಷನ್ಶಿಪ್ ಮ್ಯಾನೇಜರ್ ಹುದ್ದೆಗೆ;
ಕನಿಷ್ಠ ವಯಸ್ಸಿನ ಮಿತಿ – 28 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
✓ ಚೀಫ್ ಮ್ಯಾನೇಜರ್ – C & IC ರಿಲೇಷನ್ಶಿಪ್ ಮ್ಯಾನೇಜರ್ ಹುದ್ದೆಗೆ;
ಕನಿಷ್ಠ ವಯಸ್ಸಿನ ಮಿತಿ – 32 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 42 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ವರ್ಗವಾರು ವಯೋಮಿತಿ ಸಡಿಲಿಕೆ ಇರಲಿದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಮಾಹೆಯಾನ 64,820 ರಿಂದ 1,20,940 ರೂ. ವರೆಗೆ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಆನ್ಲೈನ್ ಪರೀಕ್ಷೆ
ಸೈಕೋಮೆಟ್ರಿಕ್ ಪರೀಕ್ಷೆ
ಗುಂಪು ಚರ್ಚೆ
ಸಂದರ್ಶನ
ಅರ್ಜಿ ಶುಲ್ಕ:
ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ – 850ರೂ.
ಪ.ಜಾತಿ, ಪ.ಪಂಗಡ, ಪಿ ಡಬ್ಲ್ಯೂ ಡಿ, ಮಾಜಿ ಸೈನಿಕ, ಡಿಇಎಸ್ಎಂ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – 175ರೂ.
ಅರ್ಜಿ ಸಲ್ಲಿಸುವುದು ಹೇಗೆ.??
ಬ್ಯಾಂಕ್ ಆಫ್ ಬರೋಡ ಅಧಿಕೃತ ವೆಬ್ಸೈಟ್ https://www.bankofbaroda.in/career/current-opportunities ಗೆ ಭೇಟಿ ನೀಡಿ.
ಕಾರ್ಪೊರೇಟ್ ಮತ್ತು ಸಾಂಸ್ಥಿಕ ಕ್ರೆಡಿಟ್ (ಸಿ & ಐಸಿ) ವಿಭಾಗಕ್ಕೆ ನಿಯಮಿತ ಆಧಾರದ ಮೇಲೆ ಮಾನವ ಸಂಪನ್ಮೂಲ ನೇಮಕಾತಿ_ ಅಡ್ವಟ್. ಸಂಖ್ಯೆ BOB/HRM/REC/ADVT/2025/14 – ವಿಭಾಗದ ಕೆಳಗೆ “ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸು” ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಅರ್ಜಿದಾರರಾಗಿದ್ದಲ್ಲಿ ನೋಂದಾಯಿಸಿ.
Bank Of Baroda Manager Application Form 2025
ಬಳಿಕ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ, ಶೈಕ್ಷಣಿಕ ದಾಖಲೆ, ಭಾವಚಿತ್ರ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.
ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
ಕೊನೆದಾಗಿ ಅರ್ಜಿಯನ್ನು ಪರೀಶೀಲನೆ ಮಾಡಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.