Bank of Baroda Various Post Special Recruitment 2025
ವಿಶೇಷ ನೇಮಕಾತಿಯ ಮೂಲಕ ಖಾಲಿ ಇರುವ 125 ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕ್ ಆಫ್ ಬರೋಡಾ (BOB) ಅಧಿಸೂಚನೆಯನ್ನು ಹೊರಡಿಸಿದೆ.
ವಿವಿಧ (ಕಾರ್ಪೊರೇಟ್ ಮತ್ತು ಸಾಂಸ್ಥಿಕ ಸಾಲ, ಅಪಾಯ ನಿರ್ವಹಣೆ, ಭದ್ರತೆ, MSME ಬ್ಯಾಂಕಿಂಗ್ ಮತ್ತು ಹಣಕಾಸು) ವಿಭಾಗಗಳಲ್ಲಿಅಭ್ಯರ್ಥಿಗಳನ್ನು ನಿಯಮಿತ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BOB ಅಧಿಕೃತ ವೆಬ್ ಸೈಟ್ https://www.bankofbaroda.in/career/current-opportunitiesಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಲು ನಿಗದಿತ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆ ಹಾಗೂ ನಿಗದಿ ಅನುಭವ ಹೊಂದಿರಬೇಕು. ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಿ.
CA/CMA/CS/CFA, Post Graduate with Diploma, Graduation in any discipline.
ವಯೋಮಿತಿ:
01-07-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 23 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 42 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
ಶಾರ್ಟ್ ಲಿಸ್ಟಿಂಗ್
ವೈಯಕ್ತಿಕ ಸಂದರ್ಶನ
ಅರ್ಜಿ ಶುಲ್ಕ:
ಒಬಿಸಿ ಅಭ್ಯರ್ಥಿಗಳಿಗೆ – 850 ರೂ.
ಪ.ಜಾತಿ, ಪ.ಪಂಗಡ, ಪಿ ಡಬ್ಲ್ಯೂ ಡಿ, ESM, DESM ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – 175 ರೂ.
How to Apply for Bank of Baroda Various Post Special Recruitment 2025
ಅರ್ಜಿ ಸಲ್ಲಿಸುವ ವಿಧಾನ;
BOB ಅಧಿಕೃತ ವೆಬ್ ಸೈಟ್https://www.bankofbaroda.in/career/current-opportunities ಗೆ ಭೇಟಿ ನೀಡಿ.
ಪ್ರಸ್ತುತ ಅವಕಾಶಗಳು ವಿಭಾಗದಲ್ಲಿ – ಬ್ಯಾಕ್ಲಾಗ್ ಹುದ್ದೆಗಳ ಅಡಿಯಲ್ಲಿ ಮೀಸಲಾತಿ ವರ್ಗಗಳ (SC/ST/OBC) ಅಭ್ಯರ್ಥಿಗಳಿಗೆ ನಿಯಮಿತ ಆಧಾರದ ಮೇಲೆ ವಿಶೇಷ ನೇಮಕಾತಿ ಅಭಿಯಾನ *ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ* ಲಿಂಕ್ ಮೇಲೆ ಕ್ಲಿಕ್ ಮಾಡಿ.
ನೀವು ಅರ್ಜಿ ಸಲ್ಲಿಸಬಯಸುವ ವಿಭಾಗವನ್ನು ಆಯ್ಕೆ ಮಾಡಿ.
ಅರ್ಜಿ ಸಲ್ಲಿಸಲು ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ನೋಂದಾಯಿಸಿ.
ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ, ಶೈಕ್ಷಣಿಕ ದಾಖಲೆ, ಭಾವಚಿತ್ರ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.
ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
ಕೊನೆದಾಗಿ ಅರ್ಜಿಯನ್ನು ಪರೀಶೀಲನೆ ಮಾಡಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
2a