BBMP Recruitment 2024: ಬೆಂಗಳೂರು ಮಹಾನಗರ ಪಾಲಿಕೆ ನಮ್ಮ ಕ್ಲಿನಿಕ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

Follow Us:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಆರೋಗ್ಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳ ನೇಮಕಾತಿ(BBMP Recruitment 2024)ಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಮ್ಮ ಕ್ಲಿನಿಕ್ ಗಳಲ್ಲಿ ಖಾಲಿ ಇರುವ ವೈಜ್ಞಾನಿಕರಿಗಳು, ಶುಶ್ರೂಷಕಿ/ ಶುಶ್ರೂಷಕರು ಮತ್ತು ಪ್ರಯೋಗ ಶಾಲಾ ತಜ್ಞರು ಹುದ್ದೆಗಳಿಗೆ ಒಂದು ವರ್ಷದ ಅವರಿಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಸಾರ್ವಜನಿಕ ಆರೋಗ್ಯ ಕಚೇರಿಯಲ್ಲಿ ಅರ್ಜಿಗಳನ್ನು ಖುದ್ದಾಗಿ ವಿಳಾಸಕ್ಕೆ ಸಲ್ಲಿಸಬೇಕು. ಯಾರು ಮೊದಲು ಬರುತ್ತಾರೋ ಅವರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಖಾಲಿ ಇರುವ ಹುದ್ದೆಗಳಿಗೆ ಭರ್ತಿಯಾಗುವವರೆಗೂ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಮತ್ತು ಖಾಲಿ ಇರುವ ಒಟ್ಟು ಸಂಖ್ಯೆಗೆ ಮಾತ್ರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಮುಖ್ಯ ಆರೋಗ್ಯ ಅಧಿಕಾರಿಗಳು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Bbmp Recruitment 2024
Bbmp Recruitment 2024

Shortview of BBMP Namma Clinic Recruitment 2024

Organization Name – Bruhat Bengaluru Mahanagara Palike
Post Name – Medical Officer, Nurse/Nurses, Laboratory Technician
Total Vacancy – Not Disclosed
Application Process: Offline
Job Location – Bengaluru

ವಿದ್ಯಾರ್ಹತೆ:

ವೈದ್ಯಾಧಿಕಾರಿಗಳ ಹುದ್ದೆಗೆ – ಎಂಬಿಬಿಎಸ್ ಪದವಿಯೊಂದಿಗೆ ಕೆ.ಎಂ.ಸಿ ನೋಂದಣಿ ಕಡ್ಡಾಯವಾಗಿರಬೇಕು.

ಶುಶ್ರೂಷಕಿ/ ಶುಶ್ರೂಷಕ ಹುದ್ದೆಗೆ – ಬಿ. ಎಸ್.ಸಿ/ ಡಿಪ್ಲೋಮೋ ಇನ್ ನರ್ಸಿಂಗ್ ವಿದ್ಯಾರ್ಹತೆಯೊಂದಿಗೆ ಮತ್ತು ಕೆ.ಎನ್.ಸಿ ಕೌನ್ಸಿಲ್ ನೊಂದಣಿ ಹೊಂದಿರಬೇಕು.

ಪ್ರಯೋಗಶಾಲಾ ತಂತ್ರಜ್ಞ ಹುದ್ದೆಗೆ – ಡಿಪ್ಲೊಮಾ ಇನ್ ಪ್ರಯೋಗಶಾಲಾ ತಂತ್ರಜ್ಞಾನ (ಡಿ.ಎಂ.ಎಲ್.ಟಿ)/ ಬಿ.ಎಸ್ಸಿ ಲ್ಯಾಬ್ ಟೆಕ್ನಿಷಿಯನ್ ನೊಂದಿಗೆ ಕರ್ನಾಟಕ ಪ್ಯಾರಾ ಮೆಡಿಕಲ್ ಮಂಡಳಿಯ ನೋಂದಣಿ ಹೊಂದಿರಬೇಕು.

ವಯೋಮಿತಿ:

  • ವೈದ್ಯಾಧಿಕಾರಿಗಳ – 65 ವರ್ಷ ಮೀರಿರಬಾರದು.
  • ಶುಶ್ರೂಷಕಿ/ ಶುಶ್ರೂಷಕ – 45 ವರ್ಷ ಮೀರಿರಬಾರದು.
  • ಪ್ರಯೋಗಶಾಲಾ ತಂತ್ರಜ್ಞರು – 60 ವರ್ಷ ಮೀರಿರಬಾರದು.

ವೇತನ:

47,250 ರಿಂದ 18,465 ವಾರ್ಷಿಕ ವೇತನ ಪಾವತಿ ಮಾಡಲಾಗುತ್ತದೆ.

How to Apply BBMP Recruitment 2024

ಅಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ವಿದ್ಯಾರ್ಹತೆಯ ಮೂಲ ದಾಖಲೆಗಳೊಂದಿಗೆ ಮತ್ತು ಅದರ ಒಂದು ಜೆರಾಕ್ಸ್ ಪ್ರತಿ ಟೀಚನ ಭಾವಚಿತ್ರದೊಂದಿಗೆ ಮುಖ್ಯ ಆರೋಗ್ಯ ಅಧಿಕಾರಿಗಳ ಸಾರ್ವಜನಿಕ ಆರೋಗ್ಯ ಕಚೇರಿಗೆ ಖುದ್ದಾಗಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಕಚೇರಿಯ ವಿಳಾಸ

ಸಾರ್ವಜನಿಕ ಆರೋಗ್ಯ ಕಚೇರಿ,344, ಅನೆಕ್ಸ್-3 ಕಟ್ಟಡ, ಮೂರನೇ ಮಹಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ಎನ್.ಆರ್ ಚೌಕ ಬೆಂಗಳೂರು-560002

Important Direct Links:

Official Notification PDFDownload
Official Websitebbmp.gov.in
More UpdatesKarnatakaHelp.in

Leave a Comment