WhatsApp Channel Join Now
Telegram Group Join Now

PM Kisan 17th installment: ನಾಳೆ ಬಿಡುಗಡೆಯಾಗಲಿದೆ ಪಿಎಂ ಕಿಸನ್ ಯೋಜನೆಯ 17ನೇ ಕಂತಿನ ಹಣ

NDA ಮೈತ್ರಿಕೂಟವು ಮೂರನೇ ಬಾರಿ ಅಧಿಕಾರ ಸ್ವೀಕರಿಸಿದ್ದು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರದ ಗದ್ದುಗೆ ಹೇರಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವ ಯೋಜನೆಯದ ಪಿಎಂ ಕಿಸಾನ್ ಯೋಜನೆಯನ್ನು ಮತ್ತೆ ಮುಂದುವರಿಸಲಿದ್ದು, ರೈತರ ಖಾತೆಗೆ ಯೋಜನೆಯ 17ನೇ ಕಂತಿನ ಹಣವನ್ನು ನಾಳೆ (ಜೂನ್ 18) ರಂದು ಬಿಡುಗಡೆ ಮಾಡಲಿದ್ದಾರೆ.

ಪಿಎಂ ಕಿಸಾನ್ ಯೋಜನೆಯ ಮೂಲಕ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದ್ದು, ಈ ಯೋಜನೆಯನ್ನು ಫೆಬ್ರವರಿ 2019 ರಂದು ಪ್ರಾರಂಭಿಸಲಾಯಿತು. ಇದುವರೆಗೂ ರೈತರ ಖಾತೆಗೆ 16 ಕಂತುಗಳಲ್ಲಿ ಹಣವನ್ನು ವರ್ಗಾವಣೆ ಮಾಡಿದ್ದು, ಪ್ರತಿ‌ ಕಂತಿಗೆ 2,000 ಹಣವನ್ನು ರೈತರ ಖಾತೆಗೆ ನೇರವಾಗಿ ಡಿಟಿಪಿ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ರೈತರಿಗೆ ಬೆಳೆ ಸಹಾಯಧನವಾಗಿ ವರ್ಷಕ್ಕೆ 6 ಸಾವಿರ ರೂಪಾಯಿ ನೀಡುತ್ತದೆ. ಕೇಂದ್ರ ಸರಕಾರವು ವರ್ಷಕ್ಕೆ ಕಂತುಗಳಲ್ಲಿ ರೈತರ ಖಾತೆಗೆ ಜಮಾ ಮಾಡುತ್ತಿದೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್, ಡಿಸೆಂಬರ್-ಮಾರ್ಚ್ ಅವಧಿಯಲ್ಲಿ ಪ್ರತಿ ಕಂತಿನಲ್ಲಿ ಎಕರೆಗೆ 2 ಸಾವಿರದಂತೆ ಈ ಆರ್ಥಿಕ ನೆರವು ನೀಡಲಾಗುತ್ತದೆ.

Pm Kisan 17Th Installment
Pm Kisan 17Th Installment

ಇತ್ತೀಚೆಗೆ ಪಿಎಂ ಕಿಸಾನ್ ನಿಧಿಯ 16 ನೇ ಕಂತು ಬಿಡುಗಡೆ ಮಾಡಿದರು. ಈ ಹಣವನ್ನು ಫೆ.28ರಂದು ರೈತರ ಖಾತೆಗೆ ಜಮಾ ಮಾಡಲಾಗಿತ್ತು. ಈ ಯೋಜನೆಯ ಭಾಗವಾಗಿ ಒಟ್ಟು 9 ಕೋಟಿ ರೈತರು ಪ್ರಯೋಜನವನ್ನು ಪಡೆಯುತ್ತಿದ್ದಾರೆ.ಈ ಬಾರಿಯ 17ನೇ ಕಂತಿನ ಹಣವನ್ನು ಜೂನ್ 18 ರಂದು ಪ್ರಧಾನಿ ಮೋದಿ ಅವರು ಮಾಡಲಿದ್ದಾರೆ ಎಂದು ಇತ್ತೀಚಿಗೆ ಕೃಷಿ ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

How to Download PM Kisan 17th installment Date 2024

ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ..?

  • ಮೊದಲು PM ಕಿಸಾನ್ ವೆಬ್‌ಸೈಟ್ https://pmkisan.gov.in/ ಗೆ ಹೋಗಿ
  • “ಮುಖಪುಟದ ಬಲಭಾಗದಲ್ಲಿರುವ ‘ಫಲಾನುಭವಿಗಳ ಪಟ್ಟಿ’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಡ್ರಾಪ್ ಡೌನ್‌ನಿಂದ ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆಮಾಡಿ. 
  • ನಂತರ ‘Get report’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಕ್ಲಿಕ್ ಮಾಡಿದ ನಂತರ, ಫಲಾನುಭವಿಗಳ ಸಂಪೂರ್ಣ ಪಟ್ಟಿ ನಿಮ್ಮ ಮುಂದೆ ಕಾಣಿಸುತ್ತದೆ.

Important Direct Links:

Links NameIMP Links
PM Kisan Karnataka 17th Installment 2024 Check Online (Soon)Click Here
PM Kisan Beneficiary List 2024Click Here
Official Websitepmkisan.gov.in
More UpdatesKarnatakaHelp.in

Leave a Comment