ಹಿಂದುಳಿದ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ ವತಿಯಿಂದ ಬ್ಯಾಂಕಿಂಗ್, ಗ್ರೂಪ್-ಸಿ, ಎಸ್.ಎಸ್.ಸಿ ಮತ್ತು ಆರ್.ಆರ್.ಬಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿ ನೀಡುವ ಸಂಬಂಧ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ಪ್ರವೇಶ ಪ್ರರೀಕ್ಷೆಯು ಜು.19 ನಡೆಯಲಿದ್ದು, ಸದರಿ ಪರೀಕ್ಷೆಯ ಹಾಲ್ ಟಿಕೆಟ್ಅನ್ನು ಕೆಇಎ ಇಂದು ಬಿಡುಗಡೆಗೊಳಿಸಿದೆ.
ಜು.19 ರಂದು ಸಾಮಾನ್ಯ ಅಧ್ಯಯನ ಪರೀಕ್ಷೆಯು ಮಧ್ಯಾಹ್ನ 2.30 ರಿಂದ 4.30ರವರೆಗೆ ನಡೆಯಲಿದೆ. ಒಟ್ಟು 100 ಅಂಕಗಳ ಪರೀಕ್ಷೆ ಇದಾಗಿದೆ. ಪ್ರವೇಶ ಪತ್ರವನ್ನು ಅಧಿಕೃತ ಜಾಲತಾಣ https://cetonline.karnataka.gov.in/ನ ಮೂಲಕ ಜು.11ರಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ವಸ್ತ್ರಸಂಹಿತೆ ಕುರಿತು ಮಾಹಿತಿಯನ್ನು ಜಾಲತಾಣದಲ್ಲಿ ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Not open my haltiket
Thank for giving free exam practice rrb group d
Sir I apply for Free coaching for
UPSC
Banking
But I can’t download hall ticket
What is problem on it ?