BELನಲ್ಲಿ ನಾನ್‌-ಎಕ್ಸಿಕ್ಯೂಟಿವ್‌ ಹುದ್ದೆಗಳ ನೇಮಕ; ಅರ್ಜಿ ಸಲ್ಲಿಕೆ ಪ್ರಾರಂಭ

ಎಸ್ಸೆಸ್ಸೆಲ್ಸಿ ಜೊತೆ ಐಟಿಐ, ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಾಸ್‌ | ಅರ್ಜಿ ಸಲ್ಲಿಕೆಗೆ ನ.04 ಕೊನೆ ದಿನ

Published on:

ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ಭಾರತ ಸರ್ಕಾರದ ಉದ್ಯಮವಾಗಿರುವ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ ನಾನ್‌-ಎಕ್ಸಿಕ್ಯೂಟಿವ್‌(ಎಂಜಿನಿಯರಿಂಗ್‌ ಸಹಾಯಕ ಶಿಕ್ಷಣಾರ್ಥಿ ಮತ್ತು ತಂತ್ರಜ್ಞ-ಸಿ) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಎಲೆಕ್ಟ್ರಾನಿಕ್ಸ್‌, ಮೆಕ್ಯಾನಿಕಲ್‌, ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಿಕಲ್‌, ಫಿಟ್ಟರ್‌, ಮೆಶಿನಿಸ್ಟ್‌, ಎಲೆಕ್ಟ್ರಿಶಿಯನ್‌ ಟ್ರೇಡ್‌/ವಿಭಾಗಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ನ.04ರೊಳಗೆ https://jobapply.in/BEL2025BNGEATTech/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಬೆಲ್‌ ಹೊರಡಿಸಿದ ಅಧಿಸೂಚನೆ ತಿಳಿಸಿದೆ.

ಅರ್ಜಿ ಸಲ್ಲಿಕೆಯ ಮುಖ್ಯ ದಿನಾಂಕಗಳು:

  • ಅಧಿಸೂಚನೆ ಮತ್ತು ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಅಕ್ಟೋಬರ್‌ 15
  • ಅರ್ಜಿ ಸಲ್ಲಿಸಲು ಕೊನೆ ದಿನ – ನವೆಂಬರ್‌ 4, 2025

ಶೈಕ್ಷಣಿಕ ಅರ್ಹತೆ:

ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ;

ಎಂಜಿನಿಯರಿಂಗ್‌ ಸಹಾಯಕ ಶಿಕ್ಷಣಾರ್ಥಿ(ಇಎಟಿ) ಹುದ್ದೆಗೆ – ಮೂರು ವರ್ಷದ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ತಂತ್ರಜ್ಞ-ಸಿ ಹುದ್ದೆಗೆ – ಎಸ್ಸೆಸ್ಸೆಲ್ಸಿ + ಐಟಿಐ

**ಸಾಮಾನ್ಯ/ಇಡಬ್ಲ್ಯೂಎಸ್ / ಒಬಿಸಿ (ಎನ್‌ಸಿಎಲ್) ಶೇ.60ರಷ್ಟು, ಪ.ಜಾತಿ/ಪ.ಪಂ/ಪಿಡಬ್ಲ್ಯೂಬಿಡಿ ಶೇ.50 ರಷ್ಟು ಅಂಕ ಪಡೆದು ತೇರ್ಗಡೆ ಹೊಂದಿರಬೇಕು.

ವಯೋಮಿತಿ:

1.10.2025ರಂತೆ;

  • ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
  • ಗರಿಷ್ಠ ವಯಸ್ಸಿನ ಮಿತಿ – 28 ವರ್ಷಗಳು

ಆಯ್ಕೆ ಪ್ರಕ್ರಿಯೆ:

ಅರ್ಜಿಗಳ ಶಾರ್ಟ್‌ ಲಿಸ್ಟ್‌
ಕಂಪ್ಯೂಟರ್‌ ಆಧಾರಿತ ಪರೀಕ್ಷೆ
ದಾಖಲಾತಿ ಪರಿಶೀಲನೆ

ಸಂಬಳ:

ಇಎಟಿ ಹುದ್ದೆಗೆ – ವೇತನ ಶ್ರೇಣಿ – ರೂ.24,500 ರಿಂದ ರೂ.90,000/-
ತಂತ್ರಜ್ಞ-ಸಿ ಹುದ್ದೆಗೆ – ವೇತನ ಶ್ರೇಣಿ – ರೂ.21,500/- ರಿಂದ ರೂ.82,000/-

ಅರ್ಜಿ ಶುಲ್ಕ:

ಸಾಮಾನ್ಯ/ಒಬಿಸಿ(ಎನ್‌ಸಿಎಲ್)/ಇಡಬ್ಲ್ಯೂಎಸ್ ವರ್ಗದವರು 500+18% ಜಿಎಸ್‌ಟಿ ಅಂದರೆ 590/- ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪ.ಜಾತಿ/ಪ.ಪಂ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ..?

  • ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
  • ನಂತರ “Home » Careers » Job Notifications” ಮೇಲೆ ಕ್ಲಿಕ್‌ ಮಾಡಿ.
  • ಮುಂದೆ “Click here to Apply Online for the post of Non-Executives for Bangalore Complex (Application Form)” ಲಿಂಕ್‌ ಒತ್ತಿ, ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ, ಹೊಸ ಅಭ್ಯರ್ಥಿಗಳಾಗಿದ್ದಲ್ಲಿ ನೋಂದಣಿ ಮಾಡಿ.
Bel Non Executive Online Form 2025-26
Bel Non Executive Online Form 2025-26
  • ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಯನ್ನು ಸರಿಯಾಗಿ ತುಂಬಿರಿ.
  • ಕೊನೆಗೆ “Link for online payment of Application fee” ಲಿಂಕ್‌ ಒತ್ತಿ ಅರ್ಜಿ ಶುಲ್ಕ ಪಾವತಿಸಿ.
  • ಈ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Important Direct Links:

Official Notification PDFDownload
Online Application Form LinkApply Now
Online Application Fee LinkPay Now
Official Websitehttps://bel-india.in/
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

16 thoughts on “BELನಲ್ಲಿ ನಾನ್‌-ಎಕ್ಸಿಕ್ಯೂಟಿವ್‌ ಹುದ್ದೆಗಳ ನೇಮಕ; ಅರ್ಜಿ ಸಲ್ಲಿಕೆ ಪ್ರಾರಂಭ”

Leave a Comment