ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಖಾಲಿ ಇರುವ ಎರಡು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅರ್ಜಿ ಸ್ವೀಕಾರ ಈಗಾಗಲೇ ಪ್ರಾರಂಭವಾಗಿದೆ.
(ಮಧ್ಯಮ ಆಡಳತ ಪರ್ಗ-1) ಉಪ ಪ್ರಧಾನ ವ್ಯವಸ್ಥಾಪಕ[ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO)] ಮತ್ತು (ಕಿರಿಯ ಆಡಳತ ವರ್ಗ-1) ಶಾಖಾ ವ್ಯವಸ್ಥಾಪಕ[ಮಾಹಿತಿ ತಂತ್ರಜ್ಞಾನ ವ್ಯವಸ್ಥಾಪಕ (IT)] ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BDCC ಅಧಿಕೃತ ಜಾಲತಾಣ https://virtualofficeerp.com/bdccb2025/instructionಕ್ಕೆ ಭೇಟಿ ನೀಡಿ. ಅಕ್ಟೋಬರ್ 02ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 17, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 02, 2025
ಆನ್ಲೈನ್ ನಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – ಅಕ್ಟೋಬರ್ 02, 2025
ಶೈಕ್ಷಣಿಕ ಅರ್ಹತೆ:
✓ ಉಪ ಪ್ರಧಾನ ವ್ಯವಸ್ಥಾಪಕರು (CISO) ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಸಿ.ಎ/ಎಂ.ಎಸ್ಸಿ/ಕಂಪ್ಯೂಟರ್ ಸೈನ್ಸ್ /ಎಂ.ಸಿ.ಎಸ್/ಸಿಸ್ಟಮ್ಸ್ ವಿಶೇಷತೆಯೊಂದಿಗೆ ಎಂಬಿಎ ಅಥವಾ ಸಂಬಂಧಿತ ವಿಭಾಗದಲ್ಲಿ ಬಿ.ಇ ಹಾಗೂ ಎಂ.ಟೆಕ್/ ಎಂ.ಇ/ಎಂಬಿಎ ಪೂರ್ಣಗೊಳಿಸಿರಬೇಕು ಹಾಗೂ ಕನಿಷ್ಠ 5 ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕು.
✓ ಶಾಖಾ ವ್ಯವಸ್ಥಾಪಕರು (IT Manager) ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಬಿಇ / ಬಿ.ಟೆಕ್ ಅಥವಾ ಎಂ.ಸಿ.ಎ/ಎಂ.ಎಸ್ಸಿ/ಕಂಪ್ಯೂಟರ್ ಸೈನ್ಸ್ / ಎಂ.ಸಿ.ಎಸ್ ಅಥವಾ ಸಿಎ/ಎಂ.ಕಾಂ ಜೊತೆಗೆ ಪ್ರತಿಷ್ಠಿತ ಸಂಸ್ಥೆಯಿಂದ ಕನಿಷ್ಠ ಆರು ತಿಂಗಳ ಅವಧಿಯ ಕಂಪ್ಯೂಟರ್ಗಳಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಹಾಗೂ ಕನಿಷ್ಠ 5 ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕು.
ಅಭ್ಯರ್ಥಿಗಳ ಗಮನಕ್ಕೆ; ಅಭ್ಯರ್ಥಿಗಳು ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆಗೆ ಕನ್ನಡದ ಜ್ಞಾನ, ಬರೆಯುವಿಕೆ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳುವ ಅರ್ಹತೆ ಹೊಂದಿರಬೇಕು.
ವಯೋಮಿತಿ:
02-10-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ – 38 ವರ್ಷಗಳು
ಪ.ಜಾತಿ, ಪ.ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ
ಸಂದರ್ಶನ
ದಾಖಲೆ ಪರಿಶೀಲನೆ
ಅಂತಿಮ ಆಯ್ಕೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ 65950ರೂ. – 134200ರೂ. ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – 2000ರೂ.
ಅರ್ಜಿ ಸಲ್ಲಿಸುವ ವಿಧಾನ
• BDCC ಅಧಿಕೃತ ಜಾಲತಾಣ https://virtualofficeerp.com/bdccb2025/instruction ಕ್ಕೆ ಭೇಟಿ ನೀಡಿ.
• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ನೋಂದಣಿ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
• ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಕೊನೆಯಲ್ಲಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣವನ್ನು ತೆಗೆದುಕೊಳ್ಳಿ.