WhatsApp Channel Join Now
Telegram Group Join Now

Birth, Death Certificate 2024: ಜನನ ಮತ್ತು ಮರಣ ಪ್ರಮಾಣ ಪತ್ರಗಳ ನೋಂದಣಿಗೆ ಹೊಸ ನಿಯಮ ಜಾರಿ

Birth, Death Certificate Registration New Rules 2024: ಕರ್ನಾಟಕ ಸರ್ಕಾರವು ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ.

ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳು ಇನ್ನು ಮುಂದೆ ಜನನ – ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಕುರಿತು ಜನನ – ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಜನನ – ಮರಣಗಳಾದ 21 ದಿನಗಳ ಒಳಗೆ ನೋಂದಣಿ ಮಾಡಿಕೊಂಡು ಉಚಿತವಾಗಿ ಪ್ರಮಾಣ ಪತ್ರ ವಿತರಿಸಬೇಕು. 21 ದಿನಗಳ ನಂತರ ಮಾಹಿತಿ ನೀಡುವ ಪ್ರಕರಣಗಳಲ್ಲಿ ₹2 ಶುಲ್ಕ ಪಡೆದು ನೋಂದಣಿ ಮಾಡಬೇಕು. 30 ದಿನಗಳ ತರುವಾಯ ಕಾರ್ಯದರ್ಶಿಗಳು ನೋಂದಣಿ ಮಾಡಬಾರದು ಎಂದು ಸರ್ಕಾರವು ಅಧಿಸೂಚನೆ ಮೂಲಕ ತಿಳಿಸಿದೆ.

Birth, Death Certificate Registration New Rules 2024
Birth, Death Certificate Registration New Rules 2024

ಜನನ- ಮರಣಗಳು ನಡೆದು 30 ದಿನಗಳ ತರುವಾಯ ಮಾಹಿತಿ ನೀಡುವ ಜನನ-ಮರಣಗಳ ನೋಂದಣಿ ಅಧಿಕಾರವನ್ನು ಆಯಾ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಗೆ ನೀಡಲಾಗಿದೆ. ಜನರು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬೇಕು. ತಹಶೀಲ್ದಾರ್‌ ಅವರ ಲಿಖಿತ ಅನುಮತಿ ಪಡೆದು ನೋಂದಣಿ ಮಾಡಬಹುದು ಎಂದು ನೂತನ ನಿಯಮಯನ್ನು ಜಾರಿಗೆ ತರಲಾಗಿದೆ.

New Registration Fees Details of Birth, Death Certificate 2024

ಜನನ ಮರಣ ಪತ್ರದ ನೋಂದಣಿ ಶುಲ್ಕದ ವಿವರಗಳು:

  • 21-30 ದಿನಗಳ ನಂತರ ನೋಂದಣಿ: ₹2 ಶುಲ್ಕ
  • 30 ದಿನಗಳ ನಂತರ ನೋಂದಣಿ: ₹5 ಶುಲ್ಕ
  • ಒಂದು ವರ್ಷದ ನಂತರ ನೋಂದಣಿ: ₹10 ಶುಲ್ಕ

ಈ ಕ್ರಮದ ಪ್ರಾಮುಖ್ಯತೆ:

  • ಸಕಾಲದಲ್ಲಿ ಜನನ ಮತ್ತು ಮರಣ ದಾಖಲೆಗಳ ನೋಂದಣಿಯನ್ನು ಖಚಿತಪಡಿಸಿಕೊಳ್ಳಲು
  • ಜನಸಂಖ್ಯಾ ದತ್ತಾಂಶವನ್ನು ಉತ್ತಮವಾಗಿ ನಿರ್ವಹಿಸಲು
  • ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳಿಗೆ ಅರ್ಹತೆ ಪಡೆಯಲು ನಾಗರಿಕರಿಗೆ ಸಹಾಯ ಮಾಡಲು

ಹೆಚ್ಚಿನ ಮಾಹಿತಿಗಾಗಿ:

  • ನಿಮ್ಮ ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿ
  • ಗ್ರಾಮಾಂತರ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

Important Direct Links

More UpdatesKarnataka Help.in

Leave a Comment