BMRCL Recruitment 2025: ರೈಲು ನಿರ್ವಾಹಕ ಹುದ್ದೆಗಳ ನೇಮಕಾತಿ, ಅರ್ಜಿ ಆಹ್ವಾನ

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

BMRCL Train Operator Recruitment 2025
BMRCL Train Operator Recruitment 2025

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಇರುವ 50 ಟ್ರೈನ್ ಆಪರೇಟರ್ ಹುದ್ದೆಗಳ ನೇಮಕಾತಿ(BMRCL Train Operator Recruitment 2025)ಗಾಗಿ ನಿಗಮವು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಕೆಗೆ bmrc.co.inಗೆ ಭೇಟಿ ನೀಡಬಹುದಾಗಿದೆ. ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

Shortview of BMRCL Train Operator Recruitment 2025

Organization Name – Bangalore Metro Rail Corporation Limited
Post Name – Train Operator (TO)
Total Vacancy – 50
Application Process – Online
Job Location – Bengaluru

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆಯು ಮಾರ್ಚ್ 12 ರಿಂದ ಪ್ರಾರಂಭವಾಗಿ, ಏಪ್ರಿಲ್ 04, 2025 ರಂದು ಕೊನೆಗೊಳ್ಳಲಿದೆ.

ಶಿಕ್ಷಣದ ಅರ್ಹತೆ:

ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ(3 ವರ್ಷಗಳ)ವನ್ನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ / ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ / ದೂರಸಂಪರ್ಕ / ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ / ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ಸ್ / ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ / ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿಷಯಗಳಲ್ಲಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

12/03/2025 ರಂತೆ ಗರಿಷ್ಠ 38 ವರ್ಷಗಳು ವಯೋಮಾನದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆಯ್ಕೆ ಪ್ರಕ್ರಿಯೆ:

  • ವೈಯಕ್ತಿಕ ಸಂದರ್ಶನ
  • ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ಕೌಶಲ್ಯ ಪರೀಕ್ಷೆ

ಅರ್ಜಿ ಶುಲ್ಕ:

ಅರ್ಜಿ ಶುಲ್ಕ ಇರುವುದಿಲ್ಲ

How to Apply for BMRCL Recruitment 2025

ಮೊದಲು ಅಭ್ಯರ್ಥಿಗಳು projectrecruit.bmrc.co.inನ ಮೂಲಕ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, ನಂತರ ಸಲ್ಲಿಸಿದ ಅರ್ಜಿ ಫಾರಂ ಪ್ರತಿಯೊಂದಿಗೆ ನಿಗದಿತ ದಾಖಲಾತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕೊನೆ ದಿನಾಂಕದ ಮೊದಲು ತಲುಪುವಂತೆ ಕಳುಹಿಸಿ ಕೊಡಬೇಕು.

ವಿಳಾಸ – ಜನರಲ್ ಮ್ಯಾನೇಜರ್ (HR),
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ,
III ಮಹಡಿ, BMTC ಕಾಂಪ್ಲೆಕ್ಸ್, K.H ರಸ್ತೆ, ಶಾಂತಿನಗರ, ಬೆಂಗಳೂರು -560027

ನಿಗದಿತ ದಾಖಲಾತಿಗಳು ಈ ಕೆಳಗಿನಂತಿವೆ;

  • ಸಲ್ಲಿಸಿದ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಮೂಲ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರವನ್ನು ಅಂಟಿಸಿ
  • ವಯಸ್ಸಿನ ಪುರಾವೆ – ಜನನ ಪ್ರಮಾಣಪತ್ರದ ಪ್ರತಿ / 10 ನೇ ತರಗತಿ ಪ್ರಮಾಣಪತ್ರ
  • ಶೈಕ್ಷಣಿಕ ಅರ್ಹತೆಗಳು, ಅನುಭವ, ಸಾಮರ್ಥ್ಯ ಪ್ರಮಾಣಪತ್ರ
  • ವಿವರವಾದ ರೆಸ್ಯೂಮ್ / ಬಯೋಡೇಟಾ / ಸಿವಿ ಪ್ರತಿ
  • ಯಾವುದೇ ಇತರ ಸಂಬಂಧಿತ ಪ್ರಮಾಣಪತ್ರಗಳು (ಯಾವುದಾದರೂ ಇದ್ದರೆ)

Important Direct Links:

ಅಧಿಕೃತ ಅಧಿಸೂಚನೆ PDFPdf File That Opens In New Window. To Know How To Open Pdf File Refer Help Section Located At Bottom Of The Site.ಡೌನ್ಲೋಡ್
ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಲಿಂಕ್ಅರ್ಜಿ ಸಲ್ಲಿಸಿ
ಅಧಿಕೃತ ವೆಬ್‌ಸೈಟ್bmrc.co.in
ಹೆಚ್ಚಿನ ಮಾಹಿತಿಗಾಗಿKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment