ಬ್ಯಾಂಕ್ ಆಫ್ ಬರೋಡಾ(BOB)ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು(MSME) ಬ್ಯಾಂಕಿಂಗ್ ಇಲಾಖೆಯಲ್ಲಿ ಅಸಿಸ್ಟಂಟ್ ವೈಸ್ ಪ್ರೆಸಿಡೆಂಟ್ ಸೇರಿದಂತೆ ವಿವಿಧ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಫೆ.26 ರೊಳಗೆ ಅರ್ಜಿಸಲ್ಲಿಸಲು ಅವಕಾಶವಿದೆ.
ಇಲಾಖೆಯ ಕ್ರೇಡಿಟ್ ಅನಾಲಿಸಿಸ್ಟ್, ಸಂಬಂಧ, ಮಾರಾಟ ವಿಭಾಗಗಳಿಗೆ ನಿಯಮಿತ ಆಧಾರದ ಮೇಲೆ 166 ಸ್ಥಾನಗಳು ಹಾಗೂ ಗುತ್ತಿಗೆ ಆಧಾರದ ಮೇಲೆ 253 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಬ್ಯಾಂಕಿನ ಅಧಿಕೃತ ವೆಬ್ಸೈಟ್ https://bankofbaroda.bank.in/career/current-opportunitiesಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – ಫೆಬ್ರವರಿ 26, 2026
ಹುದ್ದೆಗಳ ವಿವರ:
ಸೀನಿಯರ್ ಮ್ಯಾನೇಜರ್ (MSME ಸಂಬಂಧ ವಿಭಾಗ) – 113 ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಅನಾಲಿಸಿಸ್ಟ್) – 19 ಮ್ಯಾನೇಜರ್(ಕ್ರೆಡಿಟ್ ಅನಾಲಿಸಿಸ್ಟ್) – 34 ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ (MSME ಸಂಬಂಧ ವಿಭಾಗ) – 14 ಡೆಪ್ಯೂಟಿ ಮ್ಯಾನೇಜರ್ (MSME ಸಂಬಂಧ ವಿಭಾಗ) – 62 ಅಸಿಸ್ಟೆಂಟ್ ಮ್ಯಾನೇಜರ್ (MSME ಮಾರಾಟ ವಿಭಾಗ) – 177
ಒಟ್ಟು 419 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
• CA/CFA/CMA ಅಥವಾ ಸೇಲ್ಸ್/ಬ್ಯಾಂಕಿಂಗ್/ಮಾರ್ಕೆಟಿಂಗ್/ಫೈನಾನ್ಸ್ ನಲ್ಲಿ MBA/PGDM ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ವಯೋಮಿತಿ:
ಸೀನಿಯರ್ ಮ್ಯಾನೇಜರ್ (MSME ಸಂಬಂಧ ವಿಭಾಗ) ಹುದ್ದೆಗಳಿಗೆ – 30-40 ವರ್ಷಗಳು ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಅನಾಲಿಸಿಸ್ಟ್) ಹುದ್ದೆಗಳಿಗೆ – 29-37 ವರ್ಷಗಳು ಮ್ಯಾನೇಜರ್ (ಕ್ರೆಡಿಟ್ ಅನಾಲಿಸಿಸ್ಟ್) ಹುದ್ದೆಗಳಿಗೆ – 25-34 ವರ್ಷಗಳು ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ (MSME ಸಂಬಂಧ ವಿಭಾಗ) ಹುದ್ದೆಗಳಿಗೆ – 26-36 ವರ್ಷಗಳು ಡೆಪ್ಯೂಟಿ ಮ್ಯಾನೇಜರ್ (MSME ಸಂಬಂಧ ವಿಭಾಗ) ಹುದ್ದೆಗಳಿಗೆ -24-34 ವರ್ಷಗಳು ಅಸಿಸ್ಟೆಂಟ್ ಮ್ಯಾನೇಜರ್ (MSME ಮಾರಾಟ ವಿಭಾಗ) ಹುದ್ದೆಗಳಿಗೆ – 22-32 ವರ್ಷಗಳು
ವಯೋಮಿತಿ ಸಡಿಲಿಕೆ; ಹಿಂದುಳಿದ ವರ್ಗಗಳ (ಎನ್.ಸಿ.ಎಲ್) ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10-15ವರ್ಷಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 05-10 ವರ್ಷಗಳು.
ಸಂಬಳ:
✓ ನಿಯಮಿತ ಆಧಾರದ ಹುದ್ದೆಗಳಿಗೆ;
ಮ್ಯಾನೇಜರ್ ಹುದ್ದೆಗಳಿಗೆ – ₹64,820 ರಿಂದ 93,960/- ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ – ₹85,920 ರಿಂದ 1,05,280/-
✓ ಗುತ್ತಿಗೆ ಆಧಾರದ ಹುದ್ದೆಗಳಿಗೆ;
• ಬ್ಯಾಂಕ್ ಆಫ್ ಬರೋಡ ನಿಯಮಗಳ ಅನುಸಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಆನ್ಲೈನ್ ಪರೀಕ್ಷೆ
ಸಂದರ್ಶನ
ದಾಖಲಾತಿ ಪರಿಶೀಲನೆ
ಅರ್ಜಿ ಶುಲ್ಕ:
ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ – ₹850 ಪ.ಜಾತಿ, ಪ.ಪಂಗಡ, ಪಿ.ಡಬ್ಲ್ಯೂ.ಡಿ, ಮಾಜಿ ಸೈನಿಕ, ಡಿಇಎಸ್ಎಂ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ₹175
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೀಗೆ…
• BOB ಅಧಿಕೃತ ವೆಬ್ ಸೈಟ್https://bankofbaroda.bank.in/career/current-opportunities ಗೆ ಭೇಟಿ ನೀಡಿ.
Recruitment of professionals on contractual basis for MSME Banking Department – BOB/HRM/REC/ADVT/2026/06
ಅಥವಾ
Recruitment of professionals on Regular basis for MSME Banking Department – BOB/HRM/REC/ADVT/2026/7
• ನಂತರ ನೀವು ಅರ್ಜಿ ಸಲ್ಲಿಸಬೇಕು ಎಂದು ಕೊಂಡಿರುವ ಹುದ್ದೆಯ ವಿಭಾಗದ ಕೆಳಗೆ ನೀಡಲಾಗಿರುವ “ಈಗಲೇ ಅನ್ವಯಿಸಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಬಳಿಕ ಅರ್ಜಿ ಸಲ್ಲಿಸಲು ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಅರ್ಜಿದಾರರಾಗಿದ್ದಲ್ಲಿ ನೋಂದಾಯಿಸಿ.
• ಮುಂದಿನ ಹಂತದಲ್ಲಿ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
• ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ, ಶೈಕ್ಷಣಿಕ ದಾಖಲೆ, ಭಾವಚಿತ್ರ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆದಾಗಿ ಅರ್ಜಿಯನ್ನು ಮತ್ತೊಮ್ಮೆ ಪರೀಶೀಲನೆ ಮಾಡಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.