JEE ಮುಖ್ಯ ಪರೀಕ್ಷೆ 2026ರ ಸೆಷನ್-2: ಪ್ರವೇಶ ಪತ್ರ ಬಿಡುಗಡೆ

Published on:

Updated On:

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಜಂಟಿ ಪ್ರವೇಶ ಪರೀಕ್ಷೆ(ಮುಖ್ಯ) 2026 ಸೆಷನ್-2ರ ಪ್ರವೇಶ ಪತ್ರವನ್ನು ಮಾ.29ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಏ.02 ರಿಂದ 08ರವರಿಗೆ ಪರೀಕ್ಷೆ ಜರುಗಲಿವೆ. ಪರೀಕ್ಷೆಯ ಪ್ರವೇಶ ಪತ್ರ, ಸಿಟಿ ಇಂಟೀಮೇಷನ್ ಸ್ಲಿಪ್ ಹಾಗೂ ವೇಳಾಪಟ್ಟಿಯನ್ನು ಜೆಇಇ ಎನ್‌ಟಿಎ ಅಧಿಕೃತ ಜಾಲತಾಣ https://jeemain.nta.nic.in/ದ ಮೂಲಕ ಪರಿಶೀಲಿಸಬಹುದು ಹಾಗೂ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

JEE-2026 ಸೆಷನ್-2 ಪ್ರವೇಶ ಪತ್ರ ಬಿಡುಗಡೆ

ಏ.02 ಮತ್ತು 04 ರಂದು ನಡೆಸಲಾಗುವ ಪರೀಕ್ಷೆಗಳಿಗೆ ಮಾತ್ರ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದ್ದು, ಏ.05, 06, 07 ಮತ್ತು 08 ರಂದು ನಡೆಸಲಾಗುವ ಪರೀಕ್ಷೆಗಳಿಗೆ ಪ್ರವೇಶ ಪತ್ರವನ್ನು ಶೀಘ್ರದಲ್ಲಿಯೇ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಎಲ್ಲಾ ಅಭ್ಯರ್ಥಿಗಳು ಸದರಿ ಪರೀಕ್ಷೆಯ ಮುಂಗಡ ನಗರ ಮಾಹಿತಿ ಅನ್ನು ಡೌನ್ಲೋಡ್ ಮಾಡಿ ಪರೀಕ್ಷಾ ನಗರ ಹಾಗೂ ಪರೀಕ್ಷಾ ದಿನಾಂಕವನ್ನು ಪರಿಶೀಲಿಸಿಕೊಳ್ಳಬಹುದು.

ವೇಳಾಪಟ್ಟಿ

• ಏಪ್ರಿಲ್ 02 ಮತ್ತು 04 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ – ಪತ್ರಿಕೆ1 (ಬಿ.ಇ./ಬಿ. ಟೆಕ್) ಪರೀಕ್ಷೆ ಅನ್ನು ನಡೆಸಲಾಗುತ್ತದೆ.

• ಏಪ್ರಿಲ್ 05, 06, 07 ಮತ್ತು 08 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ – ಪತ್ರಿಕೆ 1 (ಬಿ.ಇ./ಬಿ. ಟೆಕ್), ಪತ್ರಿಕೆ 2ಎ (ಬಿ. ಆರ್ಚ್), ಪತ್ರಿಕೆ 2ಬಿ (ಬಿ. ಪ್ಲಾನಿಂಗ್) ಮತ್ತು ಪತ್ರಿಕೆ 2ಎ & 2ಬಿ (ಬಿ. ಆರ್ಚ್ & ಬಿ. ಪ್ಲಾನಿಂಗ್ ಎರಡೂ) ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಪ್ರವೇಶ ಪತ್ರ ಹಾಗೂ ಸಿಟಿ ಇಂಟೀಮೇಷನ್ ಸ್ಲಿಪ್ ಡೌನ್ಲೋಡ್ ಮಾಡುವ ವಿಧಾನ

• ಅಭ್ಯರ್ಥಿಗಳು ಜೆಇಇ ಎನ್‌ಟಿಎ ಅಧಿಕೃತ ಜಾಲತಾಣ https://jeemain.nta.nic.in/ಕ್ಕೆ ಭೇಟಿ ನೀಡಿ.

• ನಂತರ ಅಭ್ಯರ್ಥಿ ಚಟುವಟಿಕೆ ವಿಭಾಗದ ಕೆಳಗೆ ನೀಡಲಾಗಿರುವ “ಜೆಇಇ(ಮುಖ್ಯ)-2026 ರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ [ಅಧಿವೇಶನ-II]” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಅಥವಾ *ಸಿಟಿ ಇಂಟೀಮೇಷನ್ ಸ್ಲಿಪ್ ಗಾಗಿ* – “ಜೆಇಇ(ಮುಖ್ಯ) – 2026 ಕ್ಕೆ ಮುಂಗಡ ನಗರ ಮಾಹಿತಿ [ಅಧಿವೇಶನ-II]” ಆಯ್ಕೆಯನ್ನು ಆರಿಸಿ.

• ಬಳಿಕ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಪರೀಕ್ಷಾ ಕೇಂದ್ರದ ವಿವರಗಳನ್ನೊಳಗೊಂಡ ಪ್ರವೇಶ ಪತ್ರ & ಸಿಟಿ ಇಂಟೀಮೇಷನ್ ಸ್ಲಿಪ್ ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

Notice PDFDownload
NTA JEE Main 2026 Session 2 Admit Card LinkLogin Now
Official Websitewww.nta.ac.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment