ಗೃಹ ವ್ಯವಹಾರಗಳ ಸಚಿವಾಲಯದ ಗಡಿ ಭದ್ರತಾ ಪಡೆಯು 2025ನೇ ಸಾಲಿಗೆ ಕ್ರೀಡಾ ಕೋಟಾದಡಿಯಲ್ಲಿ ಕಾನ್ಸ್ಟೆಬಲ್ (G.D) ಹುದ್ದೆಗಳ ನೇಮಕಾತಿಗಾಗಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 391 ಕಾನ್ಸ್ಟೆಬಲ್ (ಜನರಲ್ ಡ್ಯೂಟಿ) ಗ್ರೂಪ್ ಸಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಅರ್ಹ ಕ್ರೀಡಾ ಅಭ್ಯರ್ಥಿಗಳು BSF ಅಧಿಕೃತ ವೆಬ್ಸೈಟ್ https://www.bsf.gov.in/ ಗೆ ಭೇಟಿ ನೀಡಿ. ನವೆಂಬರ್ 4ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅಕ್ಟೋಬರ್ 16, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 04, 2025
ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – ನವೆಂಬರ್ 04, 2025
ಶೈಕ್ಷಣಿಕ ಅರ್ಹತೆ:
BSF ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ (10 ನೇ ತರಗತಿ) ಅಥವಾತತ್ಸಮಾನ ಅರ್ಹತೆಹೊಂದಿರಬೇಕು. ಜೊತೆಗೆ ನಿಗದಿತ ಕ್ರೀಡೆಯಲ್ಲಿ ಸಾಧನೆ.
ನೇಮಕಾತಿಯ ಅಧಿಸೂಚನೆಯ ಮುಕ್ತಾಯ ದಿನಾಂಕದಿಂದ ಕಳೆದ ಎರಡು ವರ್ಷಗಳಲ್ಲಿ ಅಧಿಸೂಚನೆಯ ಪ್ಯಾರಾ 4(ಬಿ) ನಲ್ಲಿ ನೀಡಲಾದ ಸ್ಪರ್ಧೆಯ ಮಟ್ಟದಲ್ಲಿ ಭಾಗವಹಿಸಿದ ಅಥವಾ ಪದಕ(ಗಳು) ಗೆದ್ದ ಆಟಗಾರರನ್ನು ಮಾತ್ರ ಅರ್ಜಿ ಸಲ್ಲಿಕೆಗೆ ಅರ್ಹರು. (ತಪ್ಪದೇ ಅಧಿಕೃತ ಅಧಿಸೂಚನೆ ಓದಿ)
ವಯೋಮಿತಿ:
ಆಗಸ್ಟ್ 01, 2025ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 23 ವರ್ಷಗಳು
ಸರ್ಕಾರಿ ನೇಮಕಾತಿ ನಿಯಮಗಳ ಪ್ರಕಾರ ವರ್ಗವಾರು ವಯಸ್ಸಿನ ಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ವಿಧಾನ:
→ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ → ದಾಖಲೆ ಪರಿಶೀಲನೆ → ದೈಹಿಕ ಗುಣಮಟ್ಟ ಪರೀಕ್ಷೆ (PST) → ವಿವರವಾದ ವೈದ್ಯಕೀಯ ಪರೀಕ್ಷೆ (DME) → ಅಭ್ಯರ್ಥಿಗಳ ಅಂತಿಮ ಅರ್ಹತೆಯ ಪಟ್ಟಿ
ಸಂಬಳ:
ಅಭ್ಯರ್ಥಿಗಳಿಗೆ ತಿಂಗಳಿಗೆ 21,700ರೂ.ಗಳಿಂದ 69,100ರೂ.ವರೆಗೆ ವೇತನ ಜೊತೆಗೆ HRA, TA, DA ಮತ್ತು ಇತರ ಭತ್ಯೆಗಳನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ – 159ರೂ. ಪ.ಜಾತಿ, ಪ.ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ಸುಲಭ ವಿಧಾನ:
• BSF ಅಧಿಕೃತ ವೆಬ್ಸೈಟ್ https://rectt.bsf.gov.in/ ಗೆ ಭೇಟಿ ನೀಡಿ.
• ನೋಂದಾಯಿತ ಮೊಬೈಲ್ ಸಂಖ್ಯೆ/ ಇ-ಮೇಲ್ ಐಡಿ ಹಾಗೂ ಓಟಿಪಿ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
Bsf Recruitment Online Form 2025-26
• “391 ಹುದ್ದೆಗಳಿಗೆ ಕ್ರೀಡಾ ಕೋಟಾ (ಹಂತ 2) -2025 ರ ಅಡಿಯಲ್ಲಿ ಕಾನ್ಸ್ಟೇಬಲ್ (ಸಾಮಾನ್ಯ ಕರ್ತವ್ಯ) ಹುದ್ದೆಗೆ ಅರ್ಹ ಕ್ರೀಡಾ ವ್ಯಕ್ತಿಗಳ ನೇಮಕಾತಿ” ಅರ್ಜಿ ನಮೂನೆ ಆಯ್ಕೆ ಮಾಡಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ. ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
Hi diploma in alternative energy technology renawable energy related job for freasher…please