ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯದಡಿ ಬರುವ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS)ದಲ್ಲಿ ಗ್ರೂಪ್ ‘ಎ’, ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಲಾಗಿದೆ.
ಉಪ ನಿರ್ದೇಶಕ, ಕಾನೂನು ಅಧಿಕಾರಿ, ಸಹಾಯಕ ನಿರ್ದೇಶಕ, ಹಿರಿಯ ವಾಯುಯಾನ ಭದ್ರತಾ ಅಧಿಕಾರಿ, ಹಿರಿಯ ವಾಯುಯಾನ ಭದ್ರತಾ ಸಹಾಯಕ, ಸಿಬ್ಬಂದಿ ಕಾರು ಚಾಲಕ ಸೇರಿದಂತೆ ಒಟ್ಟು 43 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿಯೋಗ ಹಾಗೂ ಅಲ್ಪಾವಧಿಯ ಆಧಾರದ ಮೇಲೆ ಭರ್ತಿ ಮಾಡಕೊಳ್ಳಲಿದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://bcasindia.gov.in/ಕ್ಕೆ ಬೇಟಿ ನೀಡಿ, ನಿಗದಿತ ನಮೂನೆಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ, ಫೆ.12ರೊಳಗೆ ತಲುಪುವಂತೆ ‘ಉಪ ನಿರ್ದೇಶಕರು (Pers), ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ, ಕೊಠಡಿ ಸಂಖ್ಯೆ SA 03, 2 ನೇ ಮಹಡಿ, A ಬ್ಲಾಕ್, ಉಡಾನ್ ಭವನ, ಸಫ್ದರ್ಜಂಗ್ ವಿಮಾನ ನಿಲ್ದಾಣ, ನವದೆಹಲಿ -110003’ಗೆ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – (ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 60 ದಿನಗಳ ಒಳಗೆ) ಅಂದರೆ ಫೆಬ್ರವರಿ 12, 2026
ಹುದ್ದೆಗಳ ವಿವರ:
ಉಪ ನಿರ್ದೇಶಕರು (ಗುಪ್ತಚರ) – 01 ಹುದ್ದೆ ಕಾನೂನು ಅಧಿಕಾರಿ – 01 ಹುದ್ದೆ ಸಹಾಯಕ ನಿರ್ದೇಶಕ (AD) – 07 ಹುದ್ದೆಗಳು ಹಿರಿಯ ವಾಯುಯಾನ ಭದ್ರತಾ ಅಧಿಕಾರಿ (SASO) – 22 ಹುದ್ದೆಗಳು ಹಿರಿಯ ವಾಯುಯಾನ ಭದ್ರತಾ ಸಹಾಯಕ (SASA) – 07 ಹುದ್ದೆ ಸಿಬ್ಬಂದಿ ಕಾರು ಚಾಲಕ (ಗ್ರೇಡ್-I) – 03 ಹುದ್ದೆಗಳು ಸಿಬ್ಬಂದಿ ಕಾರು ಚಾಲಕ (ಗ್ರೇಡ್-II) – 01 ಹುದ್ದೆ ಡಿಸ್ಪ್ಯಾಚ್ ರೈಡರ್ (DR) – 01 ಹುದ್ದೆ
ಒಟ್ಟು – 43 ಹುದ್ದೆಗಳು
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಕೇಂದ್ರ ಸರ್ಕಾರ/ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶ/ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ/ಸಾರ್ವಜನಿಕ ವಲಯದ ಉದ್ಯಮಗಳು/ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆಗಳು/ವಿಶ್ವವಿದ್ಯಾಲಯಗಳು/ಅರೆ ಸರ್ಕಾರಿ/ಶಾಸನಬದ್ಧ/ಸ್ವಾಯತ್ತ ಸಂಸ್ಥೆಗಳ ಅಡಿಯಲ್ಲಿ ಡೆಪ್ಯುಟೇಶನ್ (ಅಲ್ಪಾವಧಿಯ ಒಪ್ಪಂದ ಸೇರಿದಂತೆ) ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಜೊತೆಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ/ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
• ಸಹಾಯಕ ನಿರ್ದೇಶಕರು ಹಾಗೂ ಡಿಸ್ಪ್ಯಾಚ್ ರೈಡರ್ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 52 ವರ್ಷಗಳು • ಉಳಿದ ಎಲ್ಲಾ ಹುದ್ದೆಗಳಿಗೂ ಗರಿಷ್ಠ ವಯಸ್ಸಿನ ಮಿತಿ – 56 ವರ್ಷಗಳು
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋದ ನಿಯಮಗಳನ್ವಯ ಆಯ್ಕೆ ಮಾಡಲಾಗುತ್ತದೆ.
ಸಂಬಳ:
ಸದರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಸರ್ಕಾರಿ ನಿಯಮಗಳ ಪ್ರಕಾರ (ಪೇ ಮ್ಯಾಟ್ರಿಕ್ಸ್ ಲೆವೆಲ್ L-2 ರಿಂದ L-12) ಅನುಸಾರ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಕೆ ಹೇಗೆ.?
• ಅಭ್ಯರ್ಥಿಗಳು, ನಾವು ಕೆಳಗೆ ನೀಡಿರುವ ಅರ್ಜಿ ನಮೂನೆ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ, ಮುದ್ರಣ ತೆಗೆದುಕೊಂಡು.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ-ವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ, ಅಗತ್ಯ ದಾಖಲಾತಿ ಹಾಗೂ ಬಯೋ-ಡೇಟಾ ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.
ವಿಳಾಸ: “ಉಪ ನಿರ್ದೇಶಕರು (Pers), ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ, ಕೊಠಡಿ ಸಂಖ್ಯೆ SA 03, 2 ನೇ ಮಹಡಿ, ‘A’ ಬ್ಲಾಕ್, ಉಡಾನ್ ಭವನ, ಸಫ್ದರ್ಜಂಗ್ ವಿಮಾನ ನಿಲ್ದಾಣ, ನವದೆಹಲಿ -110003”
Nice helpful information to all in kannada thanks
Bcom capacity