ವಿವಿಧ ಇಲಾಖೆ/ಸಂಸ್ಥೆ/ಮಂಡಳಿಗಳ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಡಿ.28ರಂದು ನಡೆಸಿದ್ದ ಕಡ್ಡಾಯ ಕನ್ನಡ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.
ಜ.01ರಂದು ತಾತ್ಕಾಲಿಕ ಅಂಕಪಟ್ಟಿ ಬಿಡುಗಡೆಗೊಳಿಸಿ, ಜ.02ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ಅಂಕಪಟ್ಟಿಯನ್ನು ಪ್ರಾಧಿಕಾರದ ಅಧಿಕೃತ ಜಾಲತಾಣhttps://cetonline.karnataka.gov.in/kea/ದಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಡೌನ್ಲೋಡ್ ಮಾಡಕೊಳ್ಳಬಹುದುದಾಗಿದೆ. ಸದರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ, ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಕೈಬಿಡಲಾಗುವುದು ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಇಎ ವಿವಿಧ ಇಲಾಖೆಗಳ ಕಡ್ಡಾಯ ಕನ್ನಡ ಪರೀಕ್ಷೆಯ ಅಂತಿಮ ಅಂಕಪಟ್ಟಿ ಹೇಗೆ ಡೌನ್ಲೋಡ್ ಮಾಡುವುದು?
ಹಂತ-1 ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/indexnew.aspxಕ್ಕೆ ಭೇಟಿ ನೀಡಿ.
ಹಂತ-2 ಮುಖಪುಟದಲ್ಲಿ “ಇತ್ತೀಚಿನ ಪ್ರಕಟಣೆಗಳು” ವಿಭಾಗದಡಿ ನೀಡಲಾದ “05-01 ವಿವಿಧ ಇಲಾಖೆಗಳ ಹುದ್ದೆಗಳು ಕಡ್ಡಾಯ ಕನ್ನಡ ಪರೀಕ್ಷೆಯ ಅಂತಿಮ ಅಂಕ ಪಟ್ಟಿ 05-01-2026“ನ ಶಿರ್ಷೀಕೆಯ ಮೇಲೆ ಒತ್ತುವ ಮೂಲಕ ಅಂಕಪಟ್ಟಿ ಪಡೆದುಕೊಳ್ಳಬಹುದು.
ಅಥವಾ
ಮುಖಪುಟ → ನೇಮಕಾತಿ → ವಿವಿಧ ಇಲಾಖೆಗಳ ನೇಮಕಾತಿ (HK) – 2025→ “ವಿವಿಧ ಇಲಾಖೆಗಳ ಹುದ್ದೆಗಳು ಕಡ್ಡಾಯ ಕನ್ನಡ ಪರೀಕ್ಷೆಯ ಅಂತಿಮ ಅಂಕ ಪಟ್ಟಿ 05-01-2026“
Important Direct Links:
| KEA Compulsory Kannada Exam Final Score List Notice PDF | Download |
| KEA Various Department Posts Compulsory Kannada Examination 2025 Final Score List PDF | Download |
| Official Website | cetonline.karnataka.gov.in/kea |
| More Updates | KarnatakaHelp.in |