ಗ್ರಾಹಕ ವ್ಯವಹಾರಗಳ ಸಚಿವಾಲಯದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧೀನದ ಪ್ರಯೋಗಾಲಯವಾಗಿರುವ ರಾಷ್ಟ್ರೀಯ ಪರೀಕ್ಷಾ ಭವನ(NTH)ದಲ್ಲಿ ವಿವಿಧ ಯುವ ವೃತ್ತಿಪರರ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ವಿವಿಧ ವೃಂದಗಳಲ್ಲಿ ಹಿರಿಯ ಯುವ ವೃತ್ತಿಪರರು(05) ಹಾಗೂ ಕಿರಿಯ ಯುವ ವೃತ್ತಿಪರರು(20) ಸೇರಿದಂತೆ ಒಟ್ಟು 25 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಪದವೀಧರ ಅಥವಾ ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://nth.gov.in/recruitment-noticesನಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ನಿಗದಿತ ಇ-ಮೇಲ್ ವಿಳಾಸಕ್ಕೆ ಜ.18 ರೊಳಗೆ ಕಳುಹಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ನೇಮಕಾತಿ ಜಾಹೀರಾತು ಪ್ರಕಟಣೆಯ ದಿನಾಂಕ – ಡಿಸೆಂಬರ್ 29, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 18, 2026
ಹುದ್ದೆಗಳ ವಿವರ:
ಹಿರಿಯ ಯುವ ವೃತ್ತಿಪರ(ಟೆಕ್ನಿಕಲ್ ಫುಡ್ ಅನಾಲಿಸ್ಟ್) – 03 ಹುದ್ದೆಗಳು
ಹಿರಿಯ ಯುವ ವೃತ್ತಿಪರ(ಮ್ಯಾನೇಜ್ಮೆಂಟ್) – 02 ಹುದ್ದೆಗಳು
ಕಿರಿಯ ಯುವ ವೃತ್ತಿಪರ(ಮ್ಯಾನೇಜ್ಮೆಂಟ್) – 02 ಹುದ್ದೆಗಳು
ಕಿರಿಯ ಯುವ ವೃತ್ತಿಪರ(ಟೆಕ್ನಿಕಲ್ ಕೆಮಿಕಲ್) – 07 ಹುದ್ದೆಗಳು
ಕಿರಿಯ ಯುವ ವೃತ್ತಿಪರ(ಟೆಕ್ನಿಕಲ್ ಮೆಕ್ಯಾನಿಕಲ್) – 07 ಹುದ್ದೆಗಳು
ಕಿರಿಯ ಯುವ ವೃತ್ತಿಪರ(ಟೆಕ್ನಿಕಲ್ ಸಿವಿಲ್) – 01 ಹುದ್ದೆಗಳು
ಕಿರಿಯ ಯುವ ವೃತ್ತಿಪರ(ಟೆಕ್ನಿಕಲ್ ಸಿವಿಲ್) – 05 ಹುದ್ದೆಗಳು
ಕಿರಿಯ ಯುವ ವೃತ್ತಿಪರ(ಟೆಕ್ನಿಕಲ್ ಎಲೆಕ್ಟ್ರಿಕಲ್) – 05 ಹುದ್ದೆಗಳು
ಕಿರಿಯ ಯುವ ವೃತ್ತಿಪರ(ಟೆಕ್ನಿಕಲ್ ಎಲೆಕ್ಟ್ರಿಕಲ್) – 02 ಹುದ್ದೆಗಳು
ಕಿರಿಯ ಯುವ ವೃತ್ತಿಪರ(ಟೆಕ್ನಿಕಲ್ ಮೈಕ್ರೋ ಬಯಾಲಜಿ) – 01 ಹುದ್ದೆ
ಕಿರಿಯ ಯುವ ವೃತ್ತಿಪರ(ಟೆಕ್ನಿಕಲ್ RPPT) – 02 ಹುದ್ದೆಗಳು
ಒಟ್ಟು – 25 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ, ಬಿ.ಇ/ಬಿ.ಟೆಕ್ ಪದವಿ, ಸ್ನಾತಕೋತ್ತರ ಡಿಪ್ಲೊಮಾ/ಎಂಬಿಎ, ಎಂಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.
ವಿದ್ಯಾರ್ಹತೆ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿರಿ.
ವಯೋಮಿತಿ:
• ಜೂನಿಯರ್ ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
• ಸೀನಿಯರ್ ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 38 ವರ್ಷಗಳು
ಆಯ್ಕೆ ವಿಧಾನ:
ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
ಸಂದರ್ಶನ
ಸಂಬಳ:
ಹಿರಿಯ ಯುವ ವೃತ್ತಿಪರ ಹುದ್ದೆಗಳಿಗೆ – 70,000ರೂ.
ಕಿರಿಯ ಯುವ ವೃತ್ತಿಪರ ಹುದ್ದೆಗಳಿಗೆ – 40,000ರೂ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ.?
• ಮೊದಲಿಗೆ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://nth.gov.in/recruitment-notices ಕ್ಕೆ ಭೇಟಿ ನೀಡಿ.
• ನೇಮಕಾತಿ ಪ್ರಕಟಣೆಗಳು ವಿಭಾಗದಲ್ಲಿ ನೀಡಲಾಗಿರುವ “Advertisement for Young Professionals in various disciplines at various locations of NTH” ಲಿಂಕ್ ಮೇಲೆ ಕ್ಲಿಕ್ ಮಾಡಿ ನೇಮಕಾತಿಯ ಜಾಹೀರಾತು ಹಾಗೂ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ. ಅಥವಾ ನಾವು ಸುದ್ದಿಯ ಕೊನೆಯಲ್ಲಿ ನೀಡಲಾದ ಅರ್ಜಿ ನಮೂನೆ
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ-ವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ, ಅಗತ್ಯ ದಾಖಲಾತಿ ಹಾಗೂ ರೆಸ್ಯೂಮ್ ಅನ್ನು ಲಗತ್ತಿಸಿ.
• ಅಭ್ಯರ್ಥಿಗಳು ಈ ಕೆಳಗೆ ಪ್ರದೇಶವಾರು ನೀಡಲಾಗಿರುವ ಇ-ಮೇಲ್ ವಿಳಾಸಕ್ಕೆ ಜನವರಿ 18ರೊಳಗೆ ಕಳುಹಿಸಬಹುದು.
ಇ-ಮೇಲ್ ವಿಳಾಸಗಳು:
- DGCO ಘಾಜಿಯಾಬಾದ್ – dg-office@nth.gov.in
- NTH ಘಾಜಿಯಾಬಾದ್ – director-gzb@nth.gov.in
- HQ ಕೋಲ್ಕತ್ತಾ – dg-office@nth.gov.in
- NTH ಕೋಲ್ಕತ್ತಾ – director-kol@nth.gov.in
- NTH ಚೆನ್ನೈ – director-chn@nth.gov.in
• NTH ಮುಂಬೈ – director-mum@nth.gov.in - NTH ಜೈಪುರ್ – director-jai@nth.gov.in
- NTH ಗುವಾಹಟಿ – director-guw@nth.gov.in
Important Direct Links:
| Official Notification and Application Form PDF | Download |
| Official Website | nth.gov.in |
| More Updates | KarnatakaHelp.in |