ESSE 2025: ತಾತ್ಕಾಲಿಕ ಕೀ ಉತ್ತರ ಪ್ರಕಟ; ಆಕ್ಷೇಪಣೆಗೆ ಅವಕಾಶ

ಆಕ್ಷೇಪಣೆಗೆ ಜ.09ರ ಗಡುವು

Published on:

2025ನೇ ಸಾಲಿನ ಏಕಲವ್ಯ ಮಾದರಿ ವಸತಿ ಶಾಲೆಗಳ ಸಿಬ್ಬಂದಿ ಆಯ್ಕೆ ಪರೀಕ್ಷೆ (ESSE)ಗೆ ಸಂಬಂಧಿಸಿದಂತೆ ಡಿ.13, 14, ಮತ್ತು 21ರಂದು ನಡೆದ ಪರೀಕ್ಷೆಗಳ ಅಧಿಕೃತ ತಾತ್ಕಾಲಿಕ ಕೀ ಉತ್ತರಗಳನ್ನು ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸಂಘ (NESTS) ಮಂಗಳವಾರ ಪ್ರಕಟಿಸಿದೆ.

ಡಿ.13 ರಂದು ಪ್ರಾಂಶುಪಾಲ ಮತ್ತು ಲೆಕ್ಕಪತ್ರಾಧಿಕಾರಿ, ಡಿ.14ಕ್ಕೆ ಪಿಜಿಟಿ, ಟಿಜಿಟಿ ಮತ್ತು ಶಿಕ್ಷಕರ ವಿವಿಧ ವರ್ಗಗಳ ಹಾಗೂ ಡಿ.21ರಂದು ಹಾಸ್ಟೆಲ್ ವಾರ್ಡನ್, ಮಹಿಳಾ ಸಿಬ್ಬಂದಿ ನರ್ಸ್, ಜೂ.ಕಾರ್ಯದರ್ಶಿ ಸಹಾಯಕ, ಎಬಿ ಅಟೆಂಡೆಂಟ್ ಹುದ್ದೆಗಳ ಭರ್ತಿಗಾಗಿ ಶ್ರೇಣಿ-1ರ ಪರೀಕ್ಷೆಯ ಜರುಗಿದ್ದವು. ಸದರಿ ಪರೀಕ್ಷೆಗಳ ತಾತ್ಕಾಲಿಕ ಕೀ ಉತ್ತರಗಳನ್ನು ಸಂಘದ ಅಧಿಕೃತ ಜಾಲತಾಣ https://cbseit.in/cbse/2025/emrskeyದಲ್ಲಿ ಪ್ರಚುರಪಡಿಸಲಾಗಿದೆ. ಅಭ್ಯರ್ಥಿಗಳು ತಮ್ಮ ರೋಲ್‌ ನಂಬರ್‌, ಹುಟ್ಟಿದ ದಿನಾಂಕವನ್ನು ಬಳಸಿಕೊಂಡು ಪರಿಶೀಲನೆ ಮಾಡಿಕೊಳ್ಳಬಹುದು.

ಪ್ರಕಟಿತ ಕೀ ಉತ್ತರಗಳಿಗೆ ಜ.09ರೊಳಗೆ ಪ್ರತಿ ಪ್ರಶ್ನೆಗೆ ನಿಗದಿತ ಶುಲ್ಕ ರೂ.1000/- ಪಾವತಿಸುವ ಮೂಲಕ ಆಕ್ಷೇಪಣೆ ಸಲ್ಲಿಸಬಹುದು.

ESSE 2025ರ ಪರೀಕ್ಷೆಯ ಕೀ ಉತ್ತರ ಡೌನ್ಲೋಡ್‌ ಮಾಡುವುದು ಹೇಗೆ.?

ಹಂತ-1 ಅಧಿಕೃತ ಜಾಲತಾಣ https://nests.tribal.gov.in/index.php?lang=1ಕ್ಕೆ ಭೇಟಿ ನೀಡಿ.

ಹಂತ-2 ಮುಖಪುಟದಲ್ಲಿ “What’s New ಅಥವಾ Notification” ವಿಭಾಗದಲ್ಲಿ ನೀಡಲಾದ “ESSE 2025 Tier-I Examination – Provision to download the Scanned Image of OMR Answer Sheet and Answer Keys” ಶಿರ್ಷೀಕೆಯ ಲಿಂಕ್‌ ಮೇಲೆ ಒತ್ತುವ ಮೂಲಕ ಪ್ರಕಟಣೆಯಲ್ಲಿ ನೀಡಲಾದ ಡೌನ್ಲೋಡ್‌ ನೀಡಲಾದ (https://cbseit.in/cbse/2025/emrskey)ಲಿಂಕ್‌ ಮೇಲೆ ಒತ್ತಿ.

ಹಂತ-3 ಮುಂದೆ ಹೊಸಪುಟ ತೆರೆಯುತ್ತದೆ, ಅಲ್ಲಿ ನಿಮ್ಮ ನೋಂದಣಿ ಸಂಖ್ಯೆ, ಪಾಸ್ವರ್ಡ್‌ ಮತ್ತು ಭದ್ರತಾ ಪಿನ್‌ ಬಳಸಿ ಲಾಗಿನ್‌ ಮಾಡಿಕೊಂಡು ಪರೀಕ್ಷೆಯ ಕೀ ಉತ್ತರಗಳನ್ನು ಪರಿಶೀಲನೆ ಮಾಡಿಕೊಳ್ಳಬಹುದು.

Important Direct Links:

ESSE 2025 Tier-i Exam Kay Answer LinkDownload
Official Websitenests.tribal.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment