ಕೆಇಎ: ಜ.10, 11ರ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ

Published on:

ವಿವಿಧ ಇಲಾಖೆಯ ಮೂಲ ಉಳಿಕೆ ವೃಂದದ ವಿವಿಧ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜ.10 ಮತ್ತು 11ರಂದು ನಡೆಸಲಿರುವ ಪರೀಕ್ಷೆಗಳ ಪ್ರವೇಶ ಪತ್ರವನ್ನು ಸೋಮವಾರ ಬಿಡುಗಡೆಗೊಳಿಸಿದೆ.

ಜ.10ರಂದು ಮಧ್ಯಾಹ್ನ 3 ರಿಂದ 5ರವೆರೆಗೆ ಕಿರಿಯ ಅಧಿಕಾರಿ (ಗುಣ ಮತ್ತು ಆಶ್ವಾಸನೆ), ಕಿರಿಯ ಅಭಿಯಂತರ(ಸಿವಿಲ್), ಕಿರಿಯ ಅಭಿಯಂತರ (ಮೆಕ್ಯಾನಿಕಲ್), ಕಿರಿಯ ಅಭಿಯಂತರ(ಎಲೆಕ್ಟ್ರಿಕಲ್) ಹುದ್ದೆಗಳ ನಿರ್ದಿಷ್ಟ ಪರೀಕ್ಷೆ ಹಾಗೂ ಜ.11ಕ್ಕೆ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30ರವೆರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2:30 ರಿಂದ 4:30ರವೆರೆಗೆ ಕನ್ನಡ, ಇಂಗ್ಲೀಷ್‌ ಮತ್ತು ಕಂಪ್ಯೂಟರ್‌ ಜ್ಞಾನ ವಿಷಯಕ್ಕೆ ಸಂಬಂಧಿಸಿದ ಪರೀಕ್ಷೆ ಜರುಗಲಿವೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಲಿಂಕ್‌ https://cetonline.karnataka.gov.in/KEA_EXAM_PORTAL/Forms/Candidates/Loginಗೆ ಭೇಟಿ ತಮ್ಮ ಅರ್ಜಿ ಸಂಖ್ಯೆ ಮತ್ತು ಹೆಸರು ನಮೂದಿಸುವ ಮೂಲಕ ಪ್ರವೇಶ ಪತ್ರ ಪಡೆದುಕೊಳ್ಳಬಹುದು.

ಕೆಇಎ ಜ.10, 11ರ ಪರೀಕ್ಷೆಯ ಹಾಲ್‌ ಟಿಕೆಟ್‌ ಡೌನ್ಲೋಡ್‌ ಮಾಡುವುದು ಹೇಗೆ?

ಹಂತ-1 ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/ಕ್ಕೆ ಭೇಟಿ ನೀಡಿ. ಈ ಕೆಳಗಿನ ಹಂತಗಳನ್ನು ಅನುಸರಿಸಿ;

ಮುಖಪುಟ → ನೇಮಕಾತಿ ವಿಭಾಗ → ವಿವಿಧ ಇಲಾಖೆಗಳ ನೇಮಕಾತಿ(NON-HK)-2025 → “ನಿರ್ದಿಷ್ಟ ಪತ್ರಿಕೆ-ಕಿರಿಯ ಅಧಿಕಾರಿ (ಗುಣ ಮತ್ತು ಆಶ್ವಾಸನೆ), ಜೆಇ- ಸಿವಿಲ್, ಜೆಇ -ಮೆಕ್ಯಾನಿಕಲ್, ಜೆಇ- ಎಲೆಕ್ಟ್ರಿಕಲ್ ಮತ್ತು ಪತ್ರಿಕೆ-1 ಜಿಕೆ, ಪತ್ರಿಕೆ-2 ಕೆಇಸಿ ಗ್ರೂಪ್-ಸಿ ಪರೀಕ್ಷೆಗಳ ಪ್ರವೇಶ ಟಿಕೆಟ್ ಡೌನ್‌ಲೋಡ್ ಲಿಂಕ್-05.01.2026” ಲಿಂಕ್‌ ಮೇಲೆ ಒತ್ತುವ ಮೂಲಕ ಹಾಲ್‌ ಟಿಕೆಟ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು.

Important Direct Links:

KEA January 10, 11 Exam Hall Ticket 2026 LinkDownload
Official Websitecetonline.karnataka.gov.in/kea
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment