ಬಿಜಾಪುರ ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆಗಳು.. ಹೀಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆಗೆ ಜ.16ರ ಗಡುವು

Published on:

ರಕ್ಷಣಾ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಜಂಟಿ ಉದ್ಯಮ ಸಂಸ್ಥೆಯಾಗಿರುವ ಬಿಜಾಪುರದ ಸೈನಿಕ ಶಾಲೆಯು ವಿವಿಧ ವೃಂದದ ಸಿಬ್ಬಂದಿಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.

ಪಿಜಿಟಿ(02), ಟಿಜಿಟಿ(07), ಸಂಗೀತ ಶಿಕ್ಷಕ(01), ಕೌನ್ಸಿಲರ್(01), ಕ್ರಾಫ್ಟ್ ಇನ್ಸ್ಟ್ರಕ್ಟರ್(01) ಹಾಗೂ ವಾರ್ಡ್ ಬಾಯ್ಸ್(04), ಪಿಇಎಂ/ಪಿಟಿಐ ಕಮ್-ಮ್ಯಾಟ್ರಾನ್ (ಮಹಿಳೆ 01), ನರ್ಸಿಂಗ್ ಸಿಸ್ಟರ್(01) ಸೇರಿ ಒಟ್ಟು 18 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್‌ https://ssbj.in/ನಲ್ಲಿ ನಿಗದಿತ ನಮೂನೆ ಪಡದು ಅರ್ಜಿ ಭರ್ತಿ ಮಾಡಿ, ಪ್ರಾಂಶುಪಾಲರು, ಸೈನಿಕ್ ಶಾಲೆ, ಬಿಜಾಪುರ – 586108 ವಿಳಾಸಕ್ಕೆ ಜ.16ರ ಮೊದಲು ತಲುಪುವಂತೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಡಿಸೆಂಬರ್ 28, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 16, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ದ್ವಿತೀಯ ಪಿಯುಸಿ, ಸಂಬಂಧಿತ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಬಿ.ಎಡ್/ಬಿಎಸ್ಸಿ ಎಡ್‌, ಎಂ.ಎಡ್/ಎಂ.ಎಸ್ಸಿ ಎಡ್ / (ಬಿ.ಪಿ.ಇ.ಡಿ) ಪೂರ್ಣಗೊಳಿಸಿರಬೇಕು.

ಪಿಜಿಟಿ ಹುದ್ದೆಗೆ – ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ
ಟಿಜಿಟಿ ಹುದ್ದೆಗೆ- ಸಂಬಂಧಿಸಿದ ವಿಷಯದಲ್ಲಿ ಪದವಿ
ಸಂಗೀತ ಶಿಕ್ಷಕ ಹುದ್ದೆಗೆ – ಸಂಗೀತದಲ್ಲಿ ಪದವಿ
ಕೌನ್ಸಿಲರ್ ಹುದ್ದೆಗೆ- ಸೈಕೋಲಾಜಿಯಲ್ಲಿ ಪದವಿ/ಸ್ನಾತಕೋತ್ತರ ಪದವಿ ಅಥವಾ ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮಾ
ಕ್ರಾಫ್ಟ್ ಇನ್ಸ್ಟ್ರಕ್ಟರ್ ಹುದ್ದೆಗೆ- ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮಾ
ವಾರ್ಡ್ ಬಾಯ್ಸ್, ಪಿಇಎಂ/ಪಿಟಿಐ ಕಮ್-ಮ್ಯಾಟ್ರಾನ್ (ಮಹಿಳೆ) ಹುದ್ದೆಗೆ – ಎಸ್ಸೆಸ್ಸೆಲ್ಸಿ ಪಾಸ್‌
ನರ್ಸಿಂಗ್ ಸಿಸ್ಟರ್ ಹುದ್ದೆಗೆ – ಬಿ.ಎಸ್ಸಿ

ವಯೋಮಿತಿ:

01-04-2026 ರಂತೆ;

✓ ಪಿಜಿಟಿ ಹುದ್ದೆಗಳಿಗೆ; ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು.

✓ ಟಿಜಿಟಿ, ಸಂಗೀತ ಶಿಕ್ಷಕ, ಕೌನ್ಸಿಲರ್ಹಾಗೂ ಕ್ರಾಫ್ಟ್ ಇನ್ಸ್ಟ್ರಕ್ಟರ್ ಹುದ್ದೆಗಳಿಗೆ; ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು.

✓ ವಾರ್ಡ್ ಬಾಯ್ಸ್, PEM/PTI ಕಮ್-ಮ್ಯಾಟ್ರಾನ್ ಹಾಗೂ ನರ್ಸಿಂಗ್ ಸಿಸ್ಟರ್ ಹುದ್ದೆಗಳಿಗೆ; ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ – 50 ವರ್ಷಗಳು.

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ಪ್ರಾಯೋಗಿಕ ಪರೀಕ್ಷೆ
  • ಸಂದರ್ಶನ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ಏಕೀಕೃತ ವೇತನವನ್ನು ಬಿಜಾಪುರ ಸೈನಿಕ ಶಾಲೆಯ ನಿಯಮಗಳ ಅನುಸಾರ ಪಾವತಿಸಲಾಗುತ್ತದೆ.

ಅರ್ಜಿ ಶುಲ್ಕ:

ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ – 500ರೂ.

ಅರ್ಜಿ ಶುಲ್ಕದ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೈನಿಕ್ ಸ್ಕೂಲ್ ಕ್ಯಾಂಪಸ್ ಬಿಜಾಪುರ ಶಾಖೆಯಲ್ಲಿ (ಕೋಡ್ 3163) – “ಸೈನಿಕ್ ಶಾಲೆ ಬಿಜಾಪುರದ ಹೆಸರಿನಲ್ಲಿ” ಪಾವತಿಸಬೇಕು.

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

• ಮೊದಲಿಗೆ ಅಭ್ಯರ್ಥಿಗಳು ಬಿಜಾಪುರ ಸೈನಿಕ ಶಾಲೆಯ ಅಧಿಕೃತ ಜಾಲತಾಣ https://ssbj.in/ಕ್ಕೆ ಭೇಟಿ ನೀಡಿ.

• ನಂತರ ಇತ್ತೀಚಿನದು ವಿಭಾಗದಲ್ಲಿ ನೀಡಲಾಗಿರುವ “ಒಪ್ಪಂದದ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಹುದ್ದೆಯ ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ-ವಿವರ, ಸಹಿ, ಭಾವಚಿತ್ರ, ಡಿಮ್ಯಾಂಡ್ ಡ್ರಾಫ್ಟ್, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.

• 55ರೂ. ಮೌಲ್ಯದ ಅಂಚೆ ಚೀಟಿಗಳನ್ನು ಹೊಂದಿರುವ ಸ್ವಯಂ ವಿಳಾಸವಿರುವ ಲಕೋಟೆಯನ್ನು ಈ ಕೆಳಗಿನ ವಿಳಾಸಕ್ಕೆ ಜನವರಿ 16 ರೊಳಗೆ ತಲುಪುವಂತೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.

ವಿಳಾಸ: “ಪ್ರಾಂಶುಪಾಲರು, ಸೈನಿಕ್ ಶಾಲೆ, ಬಿಜಾಪುರ – 586108 (ಕರ್ನಾಟಕ)”

Important Direct Links:

Official Notification and Application PDF Download
Official Websitessbj.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

2 thoughts on “ಬಿಜಾಪುರ ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆಗಳು.. ಹೀಗೆ ಅರ್ಜಿ ಸಲ್ಲಿಸಿ”

Leave a Comment