ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯ ಮನೋವಿಜ್ಞಾನ ಸಂಶೋಧನಾ ರಕ್ಷಣಾ ಸಂಸ್ಥೆ(DIPR)ಯು ಜೂನಿಯರ್ ರಿಸರ್ಚ್ ಫೆಲೋಶಿಪ್(JRF), ರಿಸರ್ಚ್ ಅಸೋಸಿಯೇಟ್(RA) ಫೆಲೋಶಿಪ್‌ಗಳಿಗೆ ಅರ್ಜಿ ಆಹ್ವಾನಿಸಿದೆ.
ಫೆಲೋಶಿಪ್ ಆರಂಭದಲ್ಲಿ ಎರಡು ವರ್ಷದ ಅವಧಿವರೆಗೆ ಇರುತ್ತದೆ, ನಿಯಮಗಳ ಪ್ರಕಾರ ಅವಧಿ ವಿಸ್ತರಿಸಬಹುದಾಗಿದೆ. ಜೆಆರ್‌ಎಫ್‌ಗಾಗಿ ಮನೋವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ನೇಟ್/ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ರಿಸರ್ಚ್ ಅಸೋಸಿಯೇಟ್ ಫೆಲೋಶಿಪ್‌ಗಾಗಿ ಮನೋವಿಜ್ಞಾನದಲ್ಲಿ ಪಿಎಚ್.ಡಿ ಹೊಂದಿರುವವರು ಅರ್ಜಿ ಸಲ್ಲಿಕೆಗೆ ಅರ್ಹರು. ಅಧಿಕೃತ ವೆಬ್‌ಸೈಟ್https://www.drdo.gov.in/drdoನಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ನಿರ್ದೇಶಕರು ಡಿಐಪಿಆರ್, ಲಕ್ನೋ ರಸ್ತೆ, ತಿಮಾರ್ಪುರ್, ದೆಹಲಿ-110054ಗೆ ಜ.23ರೊಳಗೆ ತಲುಪಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ನವೆಂಬರ್ 20, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನೆವರಿ 23, 2026
ವಯೋಮಿತಿ:
ಜೆಆರ್‌ಎಫ್ – ಕನಿಷ್ಠ 28 ವರ್ಷಗಳು
ರಿಸರ್ಚ್ ಅಸೋಸಿಯೇಟ್ – 35 ವರ್ಷಗಳು
ಭಾರತ ಸರ್ಕಾರದ ನಿಯಮಾವಳಿಯಂತೆ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಸ್ಟೈಪೆಂಡ್:
ಜೆಆರ್‌ಎಫ್ – ಮೊದಲ ಎರಡು ವರ್ಷ= ₹37,000*, ಮೂರನೇ ವರ್ಷ = ₹42,000*
ರಿಸರ್ಚ್ ಅಸೋಸಿಯೇಟ್ – ಎರಡು ವರ್ಷ= ₹67,000*
*ಪ್ರತಿ ತಿಂಗಳು
ಅರ್ಜಿ ಸಲ್ಲಿಕೆ ಹೇಗೆ.?
ಅಭ್ಯರ್ಥಿಗಳು, ನಾವು ಕೆಳಗೆ ನೀಡಿರುವ ಅರ್ಜಿ ನಮೂನೆ ಪಡೆದು ತಮ್ಮ ಸಂಪೂರ್ಣ ಮಾಹಿತಿಯನ್ನು ತುಂಬಿ ಜೊತೆಗೆ ಪಾಸ್‌ಪೋರ್ಟ್ ಗಾತ್ರದ ಪೋಟೋ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
ವಿಳಾಸ: ನಿರ್ದೇಶಕರು ಡಿಐಪಿಆರ್, ಲಕ್ನೋ ರಸ್ತೆ, ತಿಮಾರ್ಪುರ್, ದೆಹಲಿ-110054
Important Direct Links:
| Official Notification and Application Form PDF | Download |
| Official Website | www.drdo.gov.in |
| More Updates | KarnatakaHelp.in |