ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋನಲ್ಲಿ ಗ್ರೂಪ್ ‘ಎ’ ಹುದ್ದೆಗಳು ಖಾಲಿ…

Published on:

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯ(ಎಂಒಸಿಎ)ದ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ(ಬಿಸಿಎಎಸ್‌) ನಾನಾ ಗ್ರೂಪ್ ‘ಎ’ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

01 ಉಪ ನಿರ್ದೇಶಕ, 01 ಉಪ ನಿರ್ದೇಶಕ(ಗುಪ್ತಚರ), 06 ಸಹಾಯಕ ನಿರ್ದೇಶಕ ಹಾಗೂ 01 ಕಾನೂನು ಅಧಿಕಾರಿ ಸೇರಿದಂತೆ ಒಟ್ಟು 09 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಡೆಪ್ಯುಟೇಷನ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಿದ್ದು, ಸದರಿ ಹುದ್ದೆಗಳ ಅರ್ಹತೆಗಳನ್ನು ಪೂರೈಸುವ ಆಸಕ್ತ ಉದ್ಯೋಗಾಕಾಂಕ್ಷಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ, ‘ಉಪ ನಿರ್ದೇಶಕರು(Pers), ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ, ಕೊಠಡಿ ಸಂಖ್ಯೆ ಎಸ್‌ಎ 03, 2ನೇ ಮಹಡಿ, ‘ಎ’ ಬ್ಲಾಕ್, ಉಡಾನ್ ಭವನ, ಸಫ್ದರ್ಜಂಗ್ ವಿಮಾನ ನಿಲ್ದಾಣ, ನವದೆಹಲಿ -110003’ ವಿಳಾಸಕ್ಕೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ನೇಮಕಾತಿಯ ಪ್ರಮುಖ ದಿನಾಂಕಗಳು:

  • ನೇಮಕಾತಿ ಪ್ರಕಟಣೆಯ ದಿನಾಂಕ – ಜೂನ್ 10, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – (ಉದ್ಯೋಗ ಸುದ್ದಿಯಲ್ಲಿ ಈ ಸುತ್ತೋಲೆ ಪ್ರಕಟವಾದ ದಿನಾಂಕದಿಂದ 60 ದಿನಗಳ ಒಳಗೆ)

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:

ಅಭ್ಯರ್ಥಿಗಳು ಮಾತೃವೃಂದ ಅಥವಾ ಇಲಾಖೆಯಲ್ಲಿ ನಿಯಮಿತವಾಗಿ ಇದೇ ರೀತಿಯ ಹುದ್ದೆಯನ್ನು ಹೊಂದಿರಬೇಕು ಹಾಗೂ ಕನಿಷ್ಠ 03 ರಿಂದ 05 ವರ್ಷಗಳ ವೃತ್ತಿ ಅನುಭವದೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

  • ಸಹಾಯಕ ನಿರ್ದೇಶಕರು ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ 52 ವರ್ಷಗಳು
  • ಉಳಿದ ಎಲ್ಲಾ ಹುದ್ದೆಗಳಿಗೂ ಗರಿಷ್ಠ ವಯಸ್ಸಿನ ಮಿತಿ 56 ವರ್ಷಗಳು

ಆಯ್ಕೆ ವಿಧಾನ:

ಮೇಲಿನ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅರ್ಹತೆ ಹಾಗೂ ಅನುಭವದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಪೇ ಲೆವೆಲ್ 10 ಮತ್ತು 11ರ ನಿಯಮಗಳ ಅನುಸಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಉಲ್ಲೇಖಿಸಲಾಗಿರುವುದಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ.?

• ಮೊದಲಿಗೆ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು.

• ಉದ್ಯೋಗ ಅದಿಸೂಚನೆ ಹಾಗೂ ಅರ್ಜಿ ಡೌನ್ಲೋಡ್ ಮಾಡುವ ನೇರ ಲಿಂಕ್ – https://karnatakahelp.in/wp-content/uploads/2026/06/Bureau-of-Civil-Aviation-SecurityBCAS-Various-Group-A-posts-Recruitment-2026-Detailed-Notification.pdf

• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ, ಅಗತ್ಯ ದಾಖಲಾತಿ ಹಾಗೂ ಬಯೋ-ಡೇಟಾ ಲಗತ್ತಿಸಿ.

• ಈ ಕೆಳಗಿನ ವಿಳಾಸಕ್ಕೆ *ಉದ್ಯೋಗ ಜಾಹೀರಾತಿನಲ್ಲಿ* ಈ ಸುತ್ತೋಲೆ ಪ್ರಕಟವಾದ 60 ದಿನಗಳ ಒಳಗೆ ತಲುಪುವಂತೆ ಕಳುಹಿಸಬಹುದು.

ವಿಳಾಸ: “ಉಪ ನಿರ್ದೇಶಕರು (Pers), ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ, ಕೊಠಡಿ ಸಂಖ್ಯೆ SA 03, 2ನೇ ಮಹಡಿ, ‘A’ ಬ್ಲಾಕ್, ಉಡಾನ್ ಭವನ, ಸಫ್ದರ್ಜಂಗ್ ವಿಮಾನ ನಿಲ್ದಾಣ, ನವದೆಹಲಿ -110003”

Important Direct Links:

Official Notification and Application Form PDFDownload
Official Websitebcasindia.gov.in
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment