ಪ್ರಯಾಗ್ರಾಜ್/ಉತ್ತರಪ್ರದೇಶ: ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‌ಎಎಲ್)ನ ಅಂಗಸಂಸ್ಥೆ ನೈನಿ ಏರೋಸ್ಪೇಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಒಟ್ಟು 28 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದೆ.
ವಿವಿಧ ವಿಭಾಗಗಳಿಗೆ 19-ಆಪರೇಟರ್ ಮತ್ತು 09-ಜೂನಿಯರ್ ಅಸಿಸ್ಟೆಂಟ್ ಸೇರಿದಂತೆ ಒಟ್ಟು 28 ಅಭ್ಯರ್ಥಿಗಳು ನೇಮಕಗೊಳ್ಳಲಿದ್ದಾರೆ. ಸದರಿ ಹುದ್ದೆಗಳ ಅರ್ಹತೆಗಳನ್ನು ಪೂರೈಸುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಲು ಸಂಸ್ಥೆಯ ಅಧಿಕೃತ ಜಾಲತಾಣ https://nael.reg.org.in/index ಕ್ಕೆ ಭೇಟಿ ನೀಡಿ.
ನೇಮಕಾತಿಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ -ಜೂನ್ 27, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 17, 2026
- ಲಿಖಿತ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ದಿನಾಂಕ – ಜುಲೈ 31, 2026
- ಲಿಖಿತ ಪರೀಕ್ಷೆಯ ದಿನಾಂಕ – ಆಗಸ್ಟ್ 23, 2026
ಖಾಲಿ ಇರುವ ಹುದ್ದೆಗಳ ವಿವರ:
ಆಪರೇಟರ್(ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್) 08
ಆಪರೇಟರ್(ಫಿಟ್ಟರ್) 05
ಆಪರೇಟರ್(ಎಲೆಕ್ಟ್ರಿಷಿಯನ್) 06
ಜೂನಿಯರ್ ಅಸಿಸ್ಟೆಂಟ್(IMM) 03
ಜೂನಿಯರ್ ಅಸಿಸ್ಟೆಂಟ್(HR) 02
ಜೂನಿಯರ್ ಅಸಿಸ್ಟೆಂಟ್(FIN) 02
ಜೂನಿಯರ್ ಅಸಿಸ್ಟೆಂಟ್(IT) 02
ಶೈಕ್ಷಣಿಕ ಅರ್ಹತೆ:
ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣ/ಸಂಬಂಧಿತ ಟ್ರೇಡ್ ನಲ್ಲಿ ಐಟಿಐ/ಬಿ.ಕಾಂ/ಬಿ.ಎಸ್ಸಿ/ಬಿಸಿಎ/ಬಿಎ/ಬಿಬಿಎ/ಬಿಎಸ್‌ಡಬ್ಲ್ಯೂ ಪದವಿ ಪೂರ್ಣಗೊಳಿಸಿರಬೇಕು.
• ಆಪರೇಟರ್(ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್), ಆಪರೇಟರ್(ಫಿಟ್ಟರ್),ಆಪರೇಟರ್(ಎಲೆಕ್ಟ್ರಿಷಿಯನ್) ಹುದ್ದೆಗೆ; ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ
• ಜೂನಿಯರ್ ಅಸಿಸ್ಟೆಂಟ್(IMM) ಹುದ್ದೆಗೆ; ಬಿ.ಕಾಂ/ಬಿ.ಎಸ್ಸಿ ಅಥವಾ ಬಿಸಿಎ ಅರ್ಹತೆ.
• ಜೂನಿಯರ್ ಅಸಿಸ್ಟೆಂಟ್(HR); ಬಿಎ ಬಿ.ಎಸ್ಸಿ/ಬಿಬಿಎ/ಬಿಎಸ್‌ಡಬ್ಲ್ಯೂ ಅರ್ಹತೆ
• ಜೂನಿಯರ್ ಅಸಿಸ್ಟೆಂಟ್(FIN); ಬಿ.ಕಾಂ/ಬಿಬಿಎ ಅರ್ಹತೆ
• ಜೂನಿಯರ್ ಅಸಿಸ್ಟೆಂಟ್(IT); ಬಿಸಿಎ ಕಂಪ್ಯೂಟರ್/ಐಟಿ ವಿಷಯದಲ್ಲಿ ಬಿ.ಎಸ್ಸಿ
ಜೊತೆಗೆ ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದಂತೆ ಕನಿಷ್ಠ 6 ತಿಂಗಳ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ:
31-05-2026 ರಂತೆ;
ಗರಿಷ್ಠ ವಯಸ್ಸಿನ ಮಿತಿ – 28 ವರ್ಷಗಳು
ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷಗಳು
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಸಂದರ್ಶನ
- ದಾಖಲೆ ಪರಿಶೀಲನೆ
ವೇತನ:
ಆಪರೇಟರ್ ಹುದ್ದೆಗಳಿಗೆ ರೂ.19,790
ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ರೂ.21,769
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.200
ಎಸ್‌ಸಿ, ಎಸ್‌ಟಿ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ಸುಲಭ ವಿಧಾನ ಇಲ್ಲಿದೆ
• ಮೊದಲಿಗೆ ಅಭ್ಯರ್ಥಿಗಳು NAeL ಅಧಿಕೃತ ಜಾಲತಾಣ https://nael.reg.org.in/index ಕ್ಕೆ ಭೇಟಿ ನೀಡಿ.
• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಈಗಾಗಲೇ ನೋಂದಾಯಿಸಿದ್ದಲ್ಲಿ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.
• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | www.nael.co.in |
| More Updates | KarnatakaHelp.in |
Please send me
Shwetha
From HARIHARA
BA completed
Job HR
Ok
Hello, Good evening.
I am Anjana , Tq: Kundgol, Dist: Dharwad.
I have completed my Master of Social Work from Karnataka University.
I have 1.5 years of experience working as a Counsellor.