ನೀಟ್‌(ಪಿಜಿ) 2026ರ ನೋಂದಣಿ ಪ್ರಾರಂಭ: ಇಲ್ಲಿದೆ ಪ್ರಮುಖ ಮಾಹಿತಿ

Published on:

ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷಾ ಮಂಡಳಿ(ಎನ್‌ಬಿಎಂಎಸ್‌)ಯು 2026-27ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಹಂತದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌-ಪಿಜಿ)ಯ ನೋಂದಣಿಗಾಗಿ ಅಧಿಸೂಚನೆ ಹೊರಡಿಸಿದೆ.

ಆಸಕ್ತ ಅಭ್ಯರ್ಥಿಗಳು ಜು.21ರೊಳಗೆ ನೋಂದಣಿ ಮಾಡಲು ಮಂಡಳಿಯ ಅಧಿಕೃತ ವೆಬ್‌ಸೈಟ್ https://cdn3.digialm.com//EForms/configuredHtml/1815/94357/Index.htmlಗೆ ಭೇಟಿ ನೀಡಿ.

ಭಾರತದಲ್ಲಿನ ವಿವಿಧ ವೈದ್ಯಕೀಯ ಎಂಡಿ/ಎಂಎಸ್/ಪಿಜಿ ಡಿಪ್ಲೊಮಾ/ಎಂಬಿಬಿಎಸ್ ನಂತರದ ಡಿಎನ್‌ಬಿ/ಡಾ.ಎನ್‌.ಬಿ ಹಾಗೂ ಎನ್.ಬಿ.ಇ.ಎಂ.ಎಸ್ ಡಿಪ್ಲೊಮಾ ಕೋರ್ಸುಗಳ ಪ್ರವೇಶಾತಿಗಾಗಿ ಪರೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ – ಜುಲೈ 01, 2026
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ – ಜುಲೈ 21, 2026
  • ಆನ್‌ಲೈನ್‌ನಲ್ಲಿ ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜುಲೈ 21, 2026
  • ಪರೀಕ್ಷೆಯ ದಿನಾಂಕ – ಆಗಸ್ಟ್ 30, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ MBBS ಪದವಿ ಅಥವಾ ತಾತ್ಕಾಲಿಕ MBBS ಉತ್ತೀರ್ಣ ಪ್ರಮಾಣಪತ್ರವನ್ನು ಹೊಂದಿರಬೇಕು. ಜೊತೆಗೆ ಸಂಬಂಧಿತ ಮಂಡಳಿಯಲ್ಲಿ ಖಾಯಂ ಅಥವಾ ತಾತ್ಕಾಲಿಕವಾಗಿ ನೋಂದಣಿಯಾಗಿರಬೇಕು.

ಆಯ್ಕೆ ವಿಧಾನ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ಪರೀಕ್ಷೆಯ ಅರ್ಹತೆಯ ಆಧಾರದ ಮೇಲೆ ಮೆರಿಟ್ ಲಿಸ್ಟ್
  • ಕೌನ್ಸಿಲಿಂಗ್
  • ದಾಖಲೆ ಪರಿಶೀಲನೆ
  • ಪ್ರವೇಶಾತಿ

ಪರೀಕ್ಷಾ ಶುಲ್ಕ:

  • ಸಾಮಾನ್ಯ, ಇಡಬ್ಲ್ಯೂಎಸ್ ಹಾಗೂ ಒಬಿಸಿ-ಎನ್‌ಸಿಎಲ್ ಅಭ್ಯರ್ಥಿಗಳಿಗೆ ರೂ.3500
  • ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ರೂ.2500

ಅರ್ಜಿ ಸಲ್ಲಿಕೆಯ ವಿಧಾನ

• ಮೊದಲಿಗೆ ಅಭ್ಯರ್ಥಿಗಳು NBEMS ಅಧಿಕೃತ ವೆಬ್‌ಸೈಟ್ https://cdn3.digialm.com//EForms/configuredHtml/1815/94357/Index.html ಗೆ ಭೇಟಿ ನೀಡಿ..

• ನಂತರ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಅಪ್ಲಿಕೇಶನ್ ಸಂಖ್ಯೆ, ಪಾಸ್ವರ್ಡ್ ಹಾಗೂ ಕ್ಯಾಪ್ಚ ನಮೂದಿಸಿ ಲಾಗಿನ್ ಆಗಿ.

• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಇತ್ತೀಚಿನ ಛಾಯಾಚಿತ್ರ ಮತ್ತು ಸಹಿ ಅಪ್‌ಲೋಡ್ ಮಾಡಿ.

• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ನಂತರ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Important Direct Links:

Information Bulletin PDFDownload
Online Application Form LinkApply Now
Official Websitenatboard.edu.in
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment