IBPS SO 2026: ಐಟಿ, ಕಾನೂನು, ಮಾರ್ಕೆಟಿಂಗ್, ಕೃಷಿ ಕ್ಷೇತ್ರ ಅಧಿಕಾರಿ ಹುದ್ದೆಗಳ ನೇಮಕಾತಿ

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Published on:

Updated On:

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ಪ್ರಸ್ತುತ 2027-28ನೇ ಸಾಲಿಗೆ ಖಾಲಿ ಇರುವ ನಾನಾ ವಿಶೇಷ ಅಧಿಕಾರಿ(ಸ್ಪೇಷಲಿಸ್ಟ್‌ ಆಫೀಸರ್‌) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಪ್ರಕಟಿಸಿದೆ.

ಐಟಿ ಅಧಿಕಾರಿ, ಕೃಷಿ ಕ್ಷೇತ್ರ ಅಧಿಕಾರಿ, ರಾಜ್‌ಭಾಷಾ ಅಧಿಕಾರಿ, ಕಾನೂನು ಅಧಿಕಾರಿ, ಹೆಚ್‌ಆರ್‌/ಸಿಬ್ಬಂದಿ ಅಧಿಕಾರಿ ಮತ್ತು ಮಾರ್ಕೆಟಿಂಗ್ ಅಧಿಕಾರಿ ಸೇರಿದಂತೆ ಒಟ್ಟು 1035 ಹುದ್ದೆಗಳ ಭರ್ತಿ ನಡೆಯಲಿದ್ದು, ಆಸಕ್ತ ಅರ್ಜಿದಾರರು ಜು.26ರೊಳಗೆ IBPS ಅಧಿಕೃತ ಜಾಲತಾಣ https://ibpsreg.ibps.in/crpspxvimy26/ಕ್ಕೆ ಭೇಟಿ ನೀಡಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜುಲೈ 01, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 26, 2026(ವಿಸ್ತರಣೆ)
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜುಲೈ 26, 2026(ವಿಸ್ತರಣೆ)
  • ಪೂರ್ವಭಾವಿ ಪರೀಕ್ಷೆಯ ದಿನಾಂಕ – ಆಗಸ್ಟ್, 2026
  • ಮುಖ್ಯ ಪರೀಕ್ಷೆಯ ದಿನಾಂಕ – ನವೆಂಬರ್, 2026

ಹುದ್ದೆಗಳ ವಿವರ:

20.07.2026ರಂತೆ ಪರಿಷ್ಕೃತ ಹುದ್ದೆಗಳ ಸಂಖ್ಯೆ;

ಐಟಿ ಅಧಿಕಾರಿ – 376
ಕೃಷಿ ಕ್ಷೇತ್ರ ಅಧಿಕಾರಿ – 370
ರಾಜ್ ಭಾಷಾ ಅಧಿಕಾರಿ – 94
ಕಾನೂನು ಅಧಿಕಾರಿ – 125
HR/ಸಿಬ್ಬಂದಿ ಅಧಿಕಾರಿ – 60
ಮಾರ್ಕೆಟಿಂಗ್ ಅಧಿಕಾರಿ – 10

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಆಯಾ ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಿತ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ/ಬಿ.ಇ ಅಥವಾ ಬಿ.ಟೆಕ್/ಎಂ.ಇ ಅಥವಾ ಎಂ.ಟೆಕ್/ಎಲ್.ಎಲ್.ಬಿ/ಎಂಎಂಎಸ್/ಎಂಬಿಎ ಪದವಿಯಂತಹ ಇತರೆ ತತ್ಸಮಾನ ಅರ್ಹತೆಗಳನ್ನು ಪೂರ್ಣಗೊಳಿಸಿರಬೇಕು.

ಐಟಿ ಅಧಿಕಾರಿ ಹುದ್ದೆಗೆ; ಸಂಬಂಧಿತ ವಿಷಯದಲ್ಲಿ ನಾಲ್ಕು ವರ್ಷದ ಇಂಜಿನಿಯರಿಂಗ್‌ ಅಥವಾ ಟೆಕ್ನೊಲಾಜಿ ಪದವಿ.

ಕೃಷಿ ಕ್ಷೇತ್ರ ಅಧಿಕಾರಿ ಹುದ್ದೆಗೆ; ಸಂಬಂಧಿತ ವಿಷಯದಲ್ಲಿ ನಾಲ್ಕು ವರ್ಷದ ಪದವಿ.

ರಾಜ್ ಭಾಷಾ ಅಧಿಕಾರಿ ಹುದ್ದೆಗೆ; ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಪದವಿ ಮಟ್ಟದಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿಟ್ಟುಕೊಂಡು ಅಭ್ಯಸಿಸಿರಬೇಕು. ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಪದವಿ ಹಂತದಲ್ಲಿ ಹಿಂದಿ ಮತ್ತು ಇಂಗ್ಲೀಷ್‌ ವಿಷಯಗಳಾಗಿ ಅಧ್ಯಯನ ಮಾಡಿರಬೇಕು.

ಕಾನೂನು ಅಧಿಕಾರಿ ಹುದ್ದೆಗೆ; ಎಲ್‌ಎಲ್‌ಬಿ

ಹೆಚ್‌ಆರ್‌/ಸಿಬ್ಬಂದಿ ಅಧಿಕಾರಿ ಹುದ್ದೆಗೆ; ಪದವಿ ಅಥವಾ ಎರಡು ವರ್ಷದ ಸ್ನಾತಕೋತ್ತರ ಪದವಿ ಅಥವಾ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ.

ಮಾರ್ಕೆಟಿಂಗ್ ಅಧಿಕಾರಿ ಹುದ್ದೆಗೆ; ಪದವಿ ಅಥವಾ ಎಮ್‌ಎಮ್‌ಎಸ್‌(ಮಾರ್ಕೆಟಿಂಗ್‌) ಅಥವಾ ಎರಡು ವರ್ಷದ ಎಂಬಿಎ ಅಥವಾ ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಪಿಎಂ/ಪಿಜಿಡಿಎಂ(ಮಾರ್ಕೆಟಿಂಗ್‌).

ವಯೋಮಿತಿ:

ಕನಿಷ್ಠ ವಯಸ್ಸಿನ ಮಿತಿ – 20 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು

ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10ವರ್ಷಗಳು.

ಆಯ್ಕೆ ವಿಧಾನ:

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ಸಂದರ್ಶನ
  • ದಾಖಲಾತಿ ಪರಿಶೀಲನೆ

ಸಂಬಳ:

ಮಾಸಿಕ ವೇತನ ರೂ.48,480-85,920ವರೆಗೆ ಹಾಗೂ ಬ್ಯಾಂಕುಗಳ ನಿಯಮಗಳ ಅನುಸಾರ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.850
ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.175

ಅರ್ಜಿ ಸಲ್ಲಿಸುವುದು ಹೇಗೆ..?

• IBPS ಅಧಿಕೃತ ಜಾಲತಾಣ https://ibpsreg.ibps.in/crpspxvimy26/ ಕ್ಕೆ ಭೇಟಿ ನೀಡಿ.

• ಹೊಸ ಬಳಕೆದಾರರಾಗಿದ್ದಲ್ಲಿ ಹೊಸದಾಗಿ ನೋಂದಾಯಿಸಿ ಅಥವಾ ನೊಂದಣಿ ಸಂಖ್ಯೆ, ಪಾಸ್ವರ್ಡ್ ಮತ್ತು ಭದ್ರತಾ ಕೋಡ್ ನಮೂದಿಸಿ ಲಾಗಿನ್ ಆಗಿ.

Ibps So 2026 Online Form
Ibps So 2026 Online Form

• ಬಳಿಕ ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Online Form Last Date Extension Notice PDFDownload
Updated Vacancy Detailed PDF Dated on 20/7/206Download
Official Notification PDFDownload
Online Application Form LinkApply Now
Official Websitewww.ibps.in
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

1 thought on “IBPS SO 2026: ಐಟಿ, ಕಾನೂನು, ಮಾರ್ಕೆಟಿಂಗ್, ಕೃಷಿ ಕ್ಷೇತ್ರ ಅಧಿಕಾರಿ ಹುದ್ದೆಗಳ ನೇಮಕಾತಿ”

Leave a Comment