IBPS PO 2026: ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿ

ಯಾವುದೇ ಪದವಿ ಅರ್ಹತೆ

Published on:

Updated On:

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು(ಐಬಿಪಿಎಸ್‌) ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಖಾಲಿ ಇರುವ ಪ್ರೊಬೇಷನರಿ ಆಫೀಸರ್/ಮ್ಯಾನೇಜ್‌ಮೆಂಟ್‌ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ನಾನಾ ಬ್ಯಾಂಕಿನಲ್ಲಿ ಒಟ್ಟು 7365 ಸ್ಥಾನಗಳ ಭರ್ತಿಗಾಗಿ ಸಂಸ್ಥೆಯು ಆನ್‌ಲೈನ್‌ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯನ್ನು ನಡೆಸಲಿದೆ. ಯಾವುದೇ ಪದವೀಧರ ಅಭ್ಯರ್ಥಿಗಳು ಜು.01ರಿಂದ 26ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಐಬಿಪಿಎಸ್‌ ಅಧಿಕೃತ ಜಾಲತಾಣ https://ibpsreg.ibps.in/crppoxvijun26/ ಕ್ಕೆ ಭೇಟಿ ನೀಡಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜುಲೈ 01, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 26, 2026(ವಿಸ್ತರಣೆ)
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜುಲೈ 26, 2026(ವಿಸ್ತರಣೆ)
  • ಪೂರ್ವಭಾವಿ ಪರೀಕ್ಷೆಯ ದಿನಾಂಕ – ಆಗಸ್ಟ್, 2026
  • ಮುಖ್ಯ ಪರೀಕ್ಷೆಯ ದಿನಾಂಕ – ಅಕ್ಟೋಬರ್, 2026

ಸದರಿ ಪರೀಕ್ಷೆಯ ಮೂಲಕ ಭರ್ತಿಯಾಗಲಿರುವ ಬ್ಯಾಂಕಿನ ಹುದ್ದೆಗಳ ವಿವರ:

20.07.2026ರಂತೆ ಪರಿಷ್ಕೃತ ಹುದ್ದೆಗಳ ಸಂಖ್ಯೆ;

ಬ್ಯಾಂಕ್ ಆಫ್ ಬರೋಡಾ – 1900
ಬ್ಯಾಂಕ್ ಆಫ್ ಇಂಡಿಯಾ – 500
ಬ್ಯಾಂಕ್ ಆಫ್ ಮಹಾರಾಷ್ಟ್ರ – 1100
ಕೆನರಾ ಬ್ಯಾಂಕ್ – 1500
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ – 500
ಇಂಡಿಯನ್ ಬ್ಯಾಂಕ್ – 650
ಭಾರತೀಯ ಓವರ್ಸೀಸ್‌ ಬಾಂಕ್‌ – 550
ಪಂಜಾಬ್ ರಾಷ್ಟ್ರೀಯ ಬ್ಯಾಂಕ್ – 504
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ – 161
ಯುಕೋ ಬ್ಯಾಂಕ್ – NR
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ – NR

ಶೈಕ್ಷಣಿಕ ಅರ್ಹತೆ:

IBPS ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ/ಯಾವುದೇ ಸಮಾನ ಅರ್ಹತೆಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ:

01-07-2026 ರಂತೆ;

ಕನಿಷ್ಠ ವಯಸ್ಸಿನ ಮಿತಿ 20 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳು

ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10ವರ್ಷಗಳು.

ಆಯ್ಕೆ ವಿಧಾನ:

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ವ್ಯಕ್ತಿತ್ವ ಪರೀಕ್ಷೆ
  • ಸಂದರ್ಶನ
  • ದಾಖಲಾತಿ ಪರಿಶೀಲನೆ

ವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.48,480-85,920ವರೆಗೆ ಮಾಸಿಕ ವೇತನ ಹಾಗೂ ಬ್ಯಾಂಕುಗಳ ನಿಯಮಗಳ ಅನುಸಾರ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 850ರೂ.
ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 175ರೂ.

ಇದನ್ನೂ ಓದಿ: IBPS SO 2026: ಐಟಿ, ಕಾನೂನು, ಮಾರ್ಕೆಟಿಂಗ್, ಕೃಷಿ ಕ್ಷೇತ್ರ ಅಧಿಕಾರಿ ಹುದ್ದೆಗಳ ನೇಮಕಾತಿ

ಅರ್ಜಿ ಸಲ್ಲಿಸುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು IBPS ಅಧಿಕೃತ ಜಾಲತಾಣ https://ibpsreg.ibps.in/crppoxvijun26/ ಕ್ಕೆ ಭೇಟಿ ನೀಡಿ.

• ಹೊಸ ಬಳಕೆದಾರರಾಗಿದ್ದಲ್ಲಿ ಹೊಸದಾಗಿ ನೋಂದಾಯಿಸಿ ಅಥವಾ ನೊಂದಣಿ ಸಂಖ್ಯೆ, ಪಾಸ್ವರ್ಡ್ ಮತ್ತು ಭದ್ರತಾ ಕೋಡ್ ನಮೂದಿಸಿ ಲಾಗಿನ್ ಆಗಿ.

Ibps Po 2026
Ibps Po Mt 2026 ಆನ್‌ಲೈನ್‌ ಅರ್ಜಿ ನಮೂನೆ ಲಾಗಿನ್‌/ನೋಂದಣಿ ವಿಂಡೋ

• ಬಳಿಕ ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Online Form Last Date Extension Notice PDFDownload
IBPS PO Updated Vacancy Details PDF Dated on 20/7/206Download
Official Notification PDFDownload
Online Application Form LinkApply Now
Official Websitewww.ibps.in
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

8 thoughts on “IBPS PO 2026: ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿ”

Leave a Comment