Caste certificate Apply online: ನಮಸ್ಕಾರ ಬಂಧುಗಳೇ, ಇಂದು ನಾವು “ಜಾತಿ ಪ್ರಮಾಣ ಪತ್ರ”ವನ್ನು ಆನ್ಲೈನ್ ಮೂಲಕ ಪಡೆದುಕೊಳ್ಳುವುದು ಹೇಗೆ ಎಂಬುದರ ಕುರಿತು ನಿಮಗೆ ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ.
ಸರ್ಕಾರಿ ಉದ್ಯೋಗ ಬಯಸುವವರು ಮತ್ತು ವಿದ್ಯಾರ್ಥಿಗಳು ಇತರ ಯಾವುದೇ ಯೋಜನೆಗಳು ಎಲ್ಲಾದಕ್ಕೂ ಇತ್ತೀಚಿನ ದಿನಗಳಲ್ಲಿ ಜಾತಿ ಪ್ರಮಾಣ ಪತ್ರವೂ ಅತಿ ಅವಶ್ಯಕವಾಗಿದೆ. ಈ ದಾಖಲೆಯನ್ನು ಪಡೆಯಲು ವಾರಗಟ್ಟಲೆ ಕಚೇರಿಯನ್ನು ಅಲೆದಾಡಬೇಕಿತ್ತು ಆದರೆ ತಂತ್ರಜ್ಞಾನ ಮುಂದುವರೆದಂತೆ ಸರ್ಕಾರವು ಅಗತ್ಯ ದಾಖಲೆಗಳನ್ನು ಅಧಿಕೃತ ವೆಬ್ ಸೈಟ್ ಗಳ ಮೂಲಕ ದಾಖಲೆಗಳನ್ನು ಪಡೆದುಕೊಳ್ಳುವಂತೆ ಸರ್ಕಾರವು ಮಾಡಿದೆ ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಜಾತಿ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಕರ್ನಾಟಕದಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಸೇವಾಸಿಂಧು ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. ಆದಾಯ ಪ್ರಮಾಣಪತ್ರದೊಂದಿಗೆ ಸೇರಿ ಜಾತಿ ಪ್ರಮಾಣಪತ್ರವನ್ನು ಒಂದೇ ಅರ್ಜಿಯಲ್ಲಿ ನೀವು ಪಡೆಯಬಹುದು ಇದಕ್ಕಾಗಿ ನಿಮ್ಮ ಹತ್ತಿರದ ನಾಡಕಚೇರಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಆನ್ ಲೈನ್ ಮೂಲಕ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಇಚ್ಚಿಸುವವರು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ನಾಡಕಚೇರಿ ಗೆ ಭೇಟಿ ನೀಡಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಮತ್ತು ಶುಲ್ಕ ಪಾವತಿ ಮಾಡಿ ಪಡೆದುಕೊಳ್ಳಬಹುದಾಗಿದೆ ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
Caste Certificate Apply Online
How to Apply Online Caste certificate
ಆನ್ ಲೈನ್ ಮೂಲಕ ಜಾತಿ ಪ್ರಮಾಣ ಪತ್ರವನ್ನು ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಮೊದಲಿಗೆ ನಾಡಕಚೇರಿ https://nadakacheri.karnataka.gov.in/ajsk ವೆಬ್‌ಸೈಟ್‌ಗೆ ಭೇಟಿ ನೀಡಿ: [ನಾಡಕಚೇರಿ]
“ಆನ್‌ಲೈನ್ ಅಪ್ಲಿಕೇಶನ್” ಕ್ಲಿಕ್ ಮಾಡಿ
“New Request” ಆಯ್ಕೆಯನ್ನು ಆರಿಸಿ
ನಿಮ್ಮ ಆಧಾರ್ ಸಂಖ್ಯೆ ಅಥವಾ ರೇಷನ್ ಕಾರ್ಡ್ ಸಂಖ್ಯೆಯನ್ನು ಬಳಸಿ ಲಾಗಿನ್ ಆಗಿ
ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮವನ್ನು ಆಯ್ಕೆಮಾಡಿ
“Income & Caste Certificate” ಆಯ್ಕೆಯನ್ನು ಆರಿಸಿ
ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ (ಹೆಸರು, ತಂದೆಯ ಹೆಸರು, ಜಾತಿ, ಉದ್ದೇಶ ) ಇತ್ಯಾದಿ ವಿವರಗಳನ್ನು ನಮೂದಿಸಿ
ಅಲ್ಲಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ನಂತರ ಸಲ್ಲಿಸು ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಶುಲ್ಕ ಪಾವತಿಯ ಪರದೆ ನಿಮಗೆ ಕಾಣುತ್ತದೆ ನಿಮ್ಮ debit Card, Credit Card ಅಥವಾ UPI ನ ಮೂಲಕ ಶುಲ್ಕವನ್ನು ಪಾವತಿ ಮಾಡಿ.
ಕೊನೆಯದಾಗಿ ನಿಮಗೆ ನಿಮ್ಮ ಅರ್ಜಿ ಸಂಖ್ಯೆಯು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ ಅದನ್ನು ಭವಿಷ್ಯದ ಉದ್ದೇಶಕ್ಕಾಗಿ ಉಳಿಸಿಕೊಳ್ಳಿ.
ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.