ಉಚಿತ ಅಣಬೆ ಬೇಸಾಯ ತರಬೇತಿ ಶಿಬಿರ

Published on:

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ತಾಲ್ಲೂಕಿ ಸೊಣ್ಣಹಳ್ಳಿಪುರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ನಿರುದ್ಯೋಗಿ ಪುರುಷ ಮತ್ತು ಮಹಿಳೆಯರಿಗೆ ಉಚಿತ ಅಣಬೆ ಬೇಸಾಯ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಅಂಬರೀಶ ಬಿ.ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರಬೇತಿ ಶಿಬಿರ 2026ರ ಜ.05 ರಿಂದ 10 ದಿನಗಳ ಕಾಲ ಜರುಗಲಿದೆ. ಕನ್ನಡ ಓದಲು, ಬರೆಯಲು ತಿಳಿದಿರುವ ಸ್ವಯಂ ಉದ್ಯೋಗಿಗಳಾಗಲು ಇಚ್ಛಿಸುವ 18 ರಿಂದ 50 ವಯೋಮಾನದ ರಾಜ್ಯದ ಯಾವುದೇ ಜಿಲ್ಲೆಯವರು ಪಾಲ್ಗೊಳ್ಳಬಹುದು. ಗ್ರಾಮೀಣ ಭಾಗದ ಬಿಪಿಎಲ್‌ ಕಾರ್ಡುದಾರರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಊಟ-ವಸತಿ ಸೌಕರ್ಯ ಕಲ್ಪಿಸಲಾಗುತ್ತದೆ. ತರಬೇತಿ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರುತ್ತದೆ.?

ಆಸಕ್ತಿಯುಳ್ಳ ಅಭ್ಯರ್ಥಿಗಳು ಡಿ30ರಂದು ಮಂಗಳವಾರ ಬೆಳಗ್ಗೆ 9.00 ಗಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ) ಈ ವಿಳಾಸದಲ್ಲಿ ನಡೆಯಲಿರುವ ಸಂದರ್ಶನಕ್ಕೆ ನಿಗದಿತ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗಬಹುದು.

ಸಂದರ್ಶನಕ್ಕೆ ಹಾಜರಾಗಲು ಆಗದೇ ಇದ್ದಲ್ಲಿ ಡಿ.30 ರೊಳಗೆ ಸಂಸ್ಥೆಯ ದೂರವಾಣಿ ಸಂಖ್ಯೆ; 8970476050, 9591514154, 9686248369,̳̳6363139123, 9505894247 ಗಳಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Important Direct Links:

Official WebsiteCBRSETI
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment