ಕರ್ನಾಟಕ ಟಿಇಟಿ 2025ರ ಫಲಿತಾಂಶ ಪ್ರಕಟ

Published on:

ಪ್ರಸಕ್ತ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆ ಮಂಗಳವಾರ ಪ್ರಕಟಿಸಿದೆ.

ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಡಿ.7ರಂದು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು. ಪತ್ರಿಕೆ-1ಕ್ಕೆ ಒಟ್ಟು 79,394 ಅಭ್ಯರ್ಥಿಗಳು ಹಾಗೂ ಪತ್ರಿಕೆ-2ಕ್ಕೆ ಒಟ್ಟು 2,37,164 ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಸದರಿ ಪರೀಕ್ಷೆಯ ಫಲಿತಾಂಶವನ್ನು ಇಲಾಖೆಯ ಅಧಿಕೃತ ಜಾಲತಾಣ https://sts.karnataka.gov.in/TET/ದಲ್ಲಿ ಬಿಡುಗಡೆಗೊಳಿಸಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್‌ ಮಾಡಿಕೊಳ್ಳಬಹುದು.

ಕರ್ನಾಟಕ ಟಿಇಟಿ 2025 ಫಲಿತಾಂಶ ಪರಿಶೀಲನೆ ಹೇಗೆ ಮಾಡುವುದು?

ಹಂತ-1 ಅಧಿಕೃತ ಜಾಲತಾಣ https://sts.karnataka.gov.in/TET/TET2024RESULT.aspxಕ್ಕೆ ಭೇಟಿ ನೀಡಿ.

Kartet 2025 Result
ಕರ್ನಾಟಕ ಟಿಇಟಿ 2025ರ ಫಲಿತಾಂಶ ಪ್ರಕಟ

Kartet 2025 Result
ಕರ್ನಾಟಕ ಟಿಇಟಿ 2025ರ ಫಲಿತಾಂಶ ಪ್ರಕಟ

ಹಂತ-2 ನಿಮ್ಮ ಲಾಗಿನ್‌ ವಿವರಗಳನ್ನು ಬಳಸಿಕೊಂಡು ಸಲ್ಲಿಸು ಗುಂಡಿ ಒತ್ತುವ ಮೂಲಕ ಕರ್ನಾಟಕ ಟಿಇಟಿ ಫಲಿತಾಂಶ ಪರಿಶೀಲನೆ ಮಾಡಿಕೊಳ್ಳಬಹುದು.

Important Direct Links:

KARTET 2025 Result LinkCheck Now
Official Websiteschooleducation.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

5 thoughts on “ಕರ್ನಾಟಕ ಟಿಇಟಿ 2025ರ ಫಲಿತಾಂಶ ಪ್ರಕಟ”

Leave a Comment