CBSE Single Girl Child Scholarship Application 2025
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ವತಿಯಿಂದ 2024-25ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿಗಳಿಗೆ ಮೆರಿಟ್ ವಿದ್ಯಾರ್ಥಿವೇತನ ಯೋಜನೆಯಡಿ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಒಬ್ಬಳೇ ಹೆಣ್ಣು ಮಗಳನ್ನು ಹೊಂದಿರುವ ಪೋಷಕರು ಅರ್ಜಿ ಸಲ್ಲಿಸಲು ಅರ್ಹರು. 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿಬಿಎಸ್ಇ ಸಂಯೋಜಿತ ಕಾಲೇಜಿನಲ್ಲಿ 11ನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಂದ ಹೊಸ ಅರ್ಜಿ ಸಲ್ಲಿಕೆ ಹಾಗೂ 2024ರಲ್ಲಿ ಸಲ್ಲಿಸಿದ್ದ ಅರ್ಜಿಗಳ ನವೀಕರಣಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಅ.23 ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿನಿಯರು CBSE ವಿದ್ಯಾರ್ಥಿ ವೇತನ ಶಾಖೆಯ ಅಧಿಕೃತ ಜಾಲತಾಣ https://www.cbse.gov.in/cbsenew/scholar.htmlಕ್ಕೆ ಭೇಟಿ ನೀಡಿ ಅರ್ಜಿ ನಮೂನೆ ಭರ್ತಿ ಮಾಡಬಹುದು.
ಪ್ರತಿಭಾನ್ವಿತ ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಸದರಿ ಯೋಜನೆಯಡಿ ಸಿಬಿಎಸ್ಇ ಮಂಡಳಿಯು – “ಪೋಷಕರು ಏಕೈಕ ಹೆಣ್ಣುಮಗುವನ್ನು ಹೊಂದಿದ್ದರೆ” ಆ ವಿದ್ಯಾರ್ಥಿನಿಯು ಸಿಬಿಎಸ್ಇ ಸಂಯೋಜಿತ ಶಾಲೆಯಲ್ಲಿ 2024-25ನೇ ಸಾಲಿನಲ್ಲಿ ಶೇ.70% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸಿಬಿಎಸ್ಇ ಸಂಯೋಜಿತ ಶಾಲೆಗಳಲ್ಲಿ 11ನೇ ವ್ಯಾಸಂಗ ಮಾಡುತ್ತಿರುವ ಹಾಗೂ ಈಗಾಗಲೇ 2024ರಲ್ಲಿ ಅರ್ಜಿ ಸಲ್ಲಿಸಿ ಪ್ರಸಕ್ತ ಸಾಲಿನಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ – ಸೆಪ್ಟೆಂಬರ್ 19, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 23, 2025
ಅರ್ಜಿ ಸಲ್ಲಿಸಲು ಇರಬೇಕಾದ ಸಾಮಾನ್ಯ ಅರ್ಹತೆಗಳು:
• ಭಾರತೀಯ ಪ್ರಜೆಗಳು ಮಾತ್ರ ಸದರಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
• ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು 8ಲಕ್ಷರೂ. ಗಳ ಮಿತಿಯೊಳಗಿರಬೇಕು.
• ಒಂದು ಕುಟುಂಬದಲ್ಲಿ ಏಕೈಕ ಹೆಣ್ಣುಮಗುವನ್ನು ಹೊಂದಿರುವವರು ಪೋಷಕರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.
• CBSE ಸಂಯೋಜಿತ ಶಾಲೆಯಲ್ಲಿ 2024-25ನೇ ಸಾಲಿನಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.70% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ವಿದ್ಯಾರ್ಥಿಯು ಉತ್ತೀರ್ಣರಾಗಿರಬೇಕು.
• ಪ್ರಸಕ್ತ ಸಾಲಿನಲ್ಲಿ CBSE ಸಂಯೋಜಿತ ಶಾಲೆಗಳಲ್ಲಿ 11ನೇ ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
• 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕು.
• 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು (2024ರಲ್ಲಿ ಸದರಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಲ್ಲಿ ಮಾತ್ರ) ಈ ವರ್ಷ ಅದನ್ನು ರಿನಿವಲ್ ಮಾಡಬೇಕು.
• ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯ ಬೋಧನಾ ಶುಲ್ಕ(Tuition Fee) ತಿಂಗಳಿಗೆ 2,500 ರೂ. ಗಳಿಗಿಂತ ಹೆಚ್ಚಿರಬಾರದು.
• 11ನೇ ಮತ್ತು 12ನೇ ತರಗತಿಯ ಬೋಧನಾ ಶುಲ್ಕ(Tuition Fee) ಪ್ರತಿ ತಿಂಗಳು 3,000ರೂ. ಗಳಿಗಿಂತ ಹೆಚ್ಚಿರಬಾರದು.
ವಿದ್ಯಾರ್ಥಿವೇತನದ ವಿವರ:
“ಸಿಂಗಲ್ ಗರ್ಲ್ ಚೈಲ್ಡ್ ಮೆರಿಟ್ ಸ್ಕಾಲರ್ಶಿಪ್” ಯೋಜನೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1,000ರೂ. ವಿದ್ಯಾರ್ಥಿವೇತನವನ್ನು ಗರಿಷ್ಠ 2 ವರ್ಷಗಳ ಅವಧಿಯವರೆಗೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
Steps to Apply for CBSE Single Girl Child Scholarship 2025
ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
• CBSC ವಿದ್ಯಾರ್ಥಿ ವೇತನ ಶಾಖೆಯ ಅಧಿಕೃತ ಜಾಲತಾಣ https://www.cbse.gov.in/cbsenew/scholar.html ಕ್ಕೆ ಭೇಟಿ ನೀಡಿ.
• “ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ X 2025 ಗಾಗಿ ಮಾರ್ಗಸೂಚಿಗಳು ಮತ್ತು ಅರ್ಜಿ ನಮೂನೆಗಳು/ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ” ಶೀರ್ಷಿಕೆಯ ಮೇಲೆ ಟ್ಯಾಪ್ ಮಾಡಿ.
• ಹೊಸದಾಗಿ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು “ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ – 2025 (ಹೊಸ ಅರ್ಜಿ)” ವಿಭಾಗದ ಕೆಳಗೆ ನೀಡಲಾಗಿರುವ “ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
Cbse Single Girl Child Scholarship Application Form 2025-26
ಅಥವಾ ಈಗಾಗಲೇ 2024ರಲ್ಲಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು “ಹತ್ತನೇ ತರಗತಿಯ ಒಂಟಿ ಹೆಣ್ಣು ಮಗುವಿಗೆ CBSE ಮೆರಿಟ್ ವಿದ್ಯಾರ್ಥಿವೇತನ ಯೋಜನೆ – ನವೀಕರಣ” ವಿಭಾಗದ ಕೆಳಗೆ ನೀಡಲಾಗಿರುವ “ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಹೊಸ ಅರ್ಜಿ ಸಲ್ಲಿಸಲು “SGC-X – ಹೊಸ ಅಪ್ಲಿಕೇಶನ್” ಆಯ್ಕೆ ಮಾಡಿ.
• ಅರ್ಜಿ ರಿನಿವಲ್ ಗಾಗಿ “SGC-X – ನವೀಕರಣ” ಆಯ್ಕೆ ಮಾಡಿ.
• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
CBSE Single Girl Child Scholarship Application Form 2025-26 Link