ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಬೋಧಕೇತರ ಸಿಬ್ಬಂದಿಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ವಿವಿಧ ಬೋಧಕೇತರ ವೃಂದಗಳಲ್ಲಿ ಗ್ರೂಪ್ ಎ, ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಸೇರಿದಂತೆ ಒಟ್ಟು 25 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸದರಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆ ದಿನವಾಗಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು CUK ಅಧಿಕೃತ ವೆಬ್ ಸೈಟ್https://www.cuk.ac.in/#/home ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅಕ್ಟೋಬರ್ 01, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 30, 2025
- ಆನ್ಲೈನ್ ಅರ್ಜಿ ಸಲ್ಲಿಕೆ ಪ್ರತಿ ಜೊತೆಗೆ ನಿಗದಿತ ದಾಖಲೆಗಳನ್ನು ಆಫ್ಲೈನ್ ಮೂಲಕ ಸಲ್ಲಿಸಲು ಕೊನೆ ದಿನ – ನವೆಂಬರ್ 10, 2025
ಹುದ್ದೆಗಳ ವಿವರ:
ಆಂತರಿಕ ಲೆಕ್ಕ ಪರಿಶೋಧನಾ ಅಧಿಕಾರಿ – 01 ಹುದ್ದೆ
ಕಾರ್ಯನಿರ್ವಾಹಕ ಇಂಜಿನಿಯರ್ – 01 ಹುದ್ದೆ
ಸಹಾಯಕ ನೋಂದಣಾಧಿಕಾರಿ – 01 ಹುದ್ದೆ
ವೈದ್ಯಕೀಯ ಅಧಿಕಾರಿ (ಪುರುಷ) – 01 ಹುದ್ದೆ
ಖಾಸಗಿ ಕಾರ್ಯದರ್ಶಿ – 04 ಹುದ್ದೆಗಳು
ವೈಯಕ್ತಿಕ ಸಹಾಯಕ – 03 ಹುದ್ದೆಗಳು
ಭದ್ರತಾ ನಿರೀಕ್ಷಕ – 01 ಹುದ್ದೆ
ಪ್ರಯೋಗಾಲಯ ಸಹಾಯಕ – 04 ಹುದ್ದೆಗಳು
ಗ್ರಂಥಾಲಯ ಸಹಾಯಕ – 01 ಹುದ್ದೆ
ಮೇಲ್ದರ್ಜೆ ಸಹಾಯಕ- 01 ಹುದ್ದೆ
ಕೆಳ ದರ್ಜೆ ಸಹಾಯಕ – 02 ಹುದ್ದೆಗಳು
ಕುಕ್ – 01 ಹುದ್ದೆ
ವೈದ್ಯಕೀಯ ಪರಿಚಾರಕ/ಡ್ರೆಸ್ಸರ್ – 01 ಹುದ್ದೆ
ಗ್ರಂಥಾಲಯ ಪರಿಚಾರಕ – 02 ಹುದ್ದೆಗಳು
ಅಡುಗೆಮನೆ ಪರಿಚಾರಕ – 01 ಹುದ್ದೆ
ಒಟ್ಟು 25 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ, ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು;
ಆಂತರಿಕ ಲೆಕ್ಕ ಪರಿಶೋಧನಾ ಅಧಿಕಾರಿ – 01 ಹುದ್ದೆ
ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ – ಎಂಜಿನಿಯರಿಂಗ್ ಪದವಿ
ಸಹಾಯಕ ನೋಂದಣಾಧಿಕಾರಿ(PRO) ಹುದ್ದೆಗೆ – ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ
ವೈದ್ಯಕೀಯ ಅಧಿಕಾರಿ (ಪುರುಷ) ಹುದ್ದೆಗೆ – MBBS ಪದವಿ
ಖಾಸಗಿ ಕಾರ್ಯದರ್ಶಿ ಹುದ್ದೆಗೆ – ಯಾವುದೇ ಪದವಿ ಜೊತೆಗೆ ವೈಯಕ್ತಿಕ ಸಹಾಯಕನಾಗಿ ಕೆಲಸದ ಅನುಭವ
ವೈಯಕ್ತಿಕ ಸಹಾಯಕ ಹುದ್ದೆಗೆ – ಯಾವುದೇ ಪದವಿ
ಭದ್ರತಾ ನಿರೀಕ್ಷಕ ಹುದ್ದೆಗೆ – ಯಾವುದೇ ಪದವಿ/ ಸೇನಾ ಅಭ್ಯರ್ಥಿಗಳಿಗೆ 10th ಪಾಸ್ + ಚಾಲನಾ ಪರವಾನಗಿ (LMV / ಮೋಟಾರ್ ಸೈಕಲ್) ಹೊಂದಿರಬೇಕು.
ಪ್ರಯೋಗಾಲಯ ಸಹಾಯಕ ಹುದ್ದೆಗೆ– ವಿಜ್ಞಾನ/ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ
ಗ್ರಂಥಾಲಯ ಸಹಾಯಕ ಹುದ್ದೆಗೆ– ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಪದವಿ
ಮೇಲ್ದರ್ಜೆ ಸಹಾಯಕ ಮತ್ತು ಕೆಳ ದರ್ಜೆ ಸಹಾಯಕ ಹುದ್ದೆಗೆ – ಪದವಿ
ಕುಕ್ ಹುದ್ದೆಗೆ– 10ನೇ ತರಗತಿ ಜೊತೆಗೆ ಐಟಿಐ
ವೈದ್ಯಕೀಯ ಪರಿಚಾರಕ/ಡ್ರೆಸ್ಸರ್ ಹುದ್ದೆಗೆ– ಎಸ್ಸೆಸ್ಸೆಲ್ಸಿ
ಗ್ರಂಥಾಲಯ ಪರಿಚಾರಕ ಹುದ್ದೆಗೆ – ಪಿಯುಸಿ ಜೊತೆಗೆ ಗ್ರಂಥಾಲಯ ವಿಜ್ಞಾನದಲ್ಲಿ ಪ್ರಮಾಣಪತ್ರ ಕೋರ್ಸ್.
ಅಡುಗೆಮನೆ ಪರಿಚಾರಕ ಹುದ್ದೆಗೆ – 10ನೇ ತರಗತಿ ಅಥವಾ ಐಟಿಐ
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ – 32 ರಿಂದ 56 ವರ್ಷಗಳು
ನೇಮಕಾತಿ ನಿಯಮಗಳ ಪ್ರಕಾರ ವರ್ಗವಾರು ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ.
ಸಂಬಳ:
ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಭಾರತ ಸರ್ಕಾರದ ನಿಯಮಗಳ ಪ್ರಕಾರ ಅಭ್ಯರ್ಥಿಗಳ ಹಿಂದಿನ ದಾಖಲೆ ಮತ್ತು ಲಿಖಿತ ಪರೀಕ್ಷೆ/ಕೌಶಲ್ಯ ಪರೀಕ್ಷೆ/ಸಂದರ್ಶನದಲ್ಲಿ ಅವರ ಸಾಧನೆಯ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 1,000ರೂ.
ಪ.ಜಾತಿ, ಪ.ಪಂಗಡದ, ಪಿಡಬ್ಲ್ಯೂಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
• CUK ಅಧಿಕೃತ ವೆಬ್ ಸೈಟ್https://www.cuk.ac.in/#/home ಗೆ ಭೇಟಿ ನೀಡಿ.
• ಮುಖಪುಟದ ಮೆನುವಿನಲ್ಲಿ “ಪ್ರವೇಶ-2025” ವಿಭಾಗವನ್ನು ಆಯ್ಕೆ ಮಾಡಿ.
• ನಂತರ ತ್ವರಿತ ಲಿಂಕ್ ಗಳು ವಿಭಾಗದ ಕೆಳಗೆ ನೀಡಲಾಗಿರುವ – ಉದ್ಯೋಗಿ ಲಾಗಿನ್ ಸಮರ್ಥಪೋರ್ಟಲ್ https://cuk.samarth.ac.in/index.php/site/login ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ನಂತರ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
• ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ, ಶೈಕ್ಷಣಿಕ ದಾಖಲೆ, ಭಾವಚಿತ್ರ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆದಾಗಿ ಅರ್ಜಿಯನ್ನು ಪರೀಶೀಲನೆ ಮಾಡಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಅಂತಿಮವಾಗಿ ಆನ್ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ಸಂಬಂಧಿತ ದಾಖಲೆಗಳು ಸೇರಿ ಮುಂತಾದ ಎಲ್ಲಾ ಲಗತ್ತುಗಳ ಸ್ವಯಂ-ದೃಢೀಕರಿಸಿದ ಪ್ರತಿಗಳೊಂದಿಗೆ “ಇಲಾಖೆಯ ಹುದ್ದೆಗೆ ಅರ್ಜಿ” ಎಂದು ಲಕೋಟೆಯಲ್ಲಿ ಬರೆದು ಉಪ ನೋಂದಣಾಧಿಕಾರಿ, ನೇಮಕಾತಿ ಕೋಶ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಆಳಂದ ರಸ್ತೆ, ಕಲಬುರಗಿ ಜಿಲ್ಲೆ-585367ಗೆ ಕಳುಹಿಸಿ.
ಹೆಚ್ಚಿನ ಮಾಹಿತಿಗಾಗಿ: ಇಮೇಲ್ – recruitment@cuk.ac.in ಅಥವಾ ದೂರವಾಣಿ ಸಂಖ್ಯೆ – 08477-226705 ಅನ್ನು ಸಂಪರ್ಕಿಸಬಹುದು.
Important Direct Links:
| Official Notification PDF | Download |
| Online Application Form Link | Apply Now |
| Official Website | https://www.cuk.ac.in |
| More Updates | KarnatakaHelṗ.in |



