ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿವಿಧ ಬೋಧಕೇತರ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
ವಿವಿಧ ಬೋಧಕೇತರ ಸಿಬ್ಬಂದಿ (ವೈದ್ಯಕೀಯ ದಾಖಲೆ ತಂತ್ರಜ್ಞ, ಆಡಿಯೋ ವಿಷುಯಲ್ ತಂತ್ರಜ್ಞ, ದಂತ ತಂತ್ರಜ್ಞ, ಒಟಿ ತಂತ್ರಜ್ಞ ಹಾಗೂ ಎಕ್ಸ್-ರೇ ತಂತ್ರಜ್ಞ) ಸೇರಿದಂತೆ ಇತರೆ ಒಟ್ಟು 11 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅಭ್ಯರ್ಥಿಗಳು ಅಕ್ಟೋಬರ್ 30 ರೊಳಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕಅಕ್ಟೋಬರ್ 30, 2025
ಖಾಲಿ ಇರುವ ಹುದ್ದೆಗಳ ವಿವರ:
ವೈದ್ಯಕೀಯ ದಾಖಲೆ ತಂತ್ರಜ್ಞ – 01 ಹುದ್ದೆ ಆಡಿಯೋ ವಿಷುಯಲ್ ತಂತ್ರಜ್ಞ – 01 ಹುದ್ದೆ ದಂತ ತಂತ್ರಜ್ಞ – 01 ಹುದ್ದೆ ಒಟಿ ತಂತ್ರಜ್ಞ – 04 ಹುದ್ದೆಗಳು ಎಕ್ಸ್-ರೇ ತಂತ್ರಜ್ಞ – 01 ಹುದ್ದೆ ವೆಂಟಿಲೇಟರ್ ತಂತ್ರಜ್ಞ – 01 ಹುದ್ದೆ ಆಮ್ಲಜನಕ ತಂತ್ರಜ್ಞ – 01 ಹುದ್ದೆಗಳು ಬ್ಲಡ್ ಬ್ಯಾಂಕ್ ತಂತ್ರಜ್ಞ – 01 ಹುದ್ದೆಗಳು
• ಒಟ್ಟು – 11 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಭಾಗದಲ್ಲಿ 12 ನೇ ತರಗತಿ ಉತ್ತೀರ್ಣ/ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮಾ/ಪದವಿ(ಬಿಎಸ್ಸಿ) ಪೂರ್ಣಗೊಳಿಸಿರಬೇಕು ಜೊತೆಗೆ ನಿಗದಿತ ವೃತ್ತಿ ಅನುಭವದೊಂದಿಗೆ ಕಂಪ್ಯೂಟರ್ ಮತ್ತು ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು.
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
ಆಯ್ಕೆ ವಿಧಾನ:
ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇಮಕಾತಿ ನಿಯಮಗಳ ಅನುಸಾರ ಆಯ್ಕೆ ಪ್ರಕ್ರಿಯೆ ಇರುತ್ತದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 17,435ರೂ. ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಪ.ಜಾತಿ, ಪ.ಪಂಗಡ ಮತ್ತು Cat-1 ವರ್ಗದ ಅಭ್ಯರ್ಥಿಗಳಿಗೆ – 250ರೂ. ಸಾಮಾನ್ಯ ಮತ್ತು ಇತರ ವರ್ಗದ ಅಭ್ಯರ್ಥಿಗಳಿಗೆ – 500ರೂ.
ಅಭ್ಯರ್ಥಿಗಳು “ದಿ ಡೈರೆಕ್ಟರ್, ಚಿಕ್ಕಮಗಳೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್” ಹೆಸರಿನಲ್ಲಿ ಡಿ.ಡಿ.ಯೊಂದಿಗೆ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದು.
ಅರ್ಜಿ ಸಲ್ಲಿಸುವ ವಿಧಾನ
• ಮೊದಲಿಗೆ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧಿಕೃತ ಜಾಲತಾಣ https://cimschikkamagaluru.karnataka.gov.inಕ್ಕೆ ಭೇಟಿ ನೀಡಿ.
• ಇತ್ತೀಚಿನ ಸುದ್ದಿಗಳು ವಿಭಾಗದಲ್ಲಿ ನೀಡಲಾಗಿರುವ”NOTIFICATION FOR NON TEACHING STAFF RECRUITMENT ON CONTRACT BASIS 15/10/25” ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ. ಡಿಮ್ಯಾಂಡ್ ಡ್ರಾಫ್ಟ್ ಹಾಗೂ ಇತರೆ ಸಂಬಂಧಿತ ದಾಖಲಾತಿಗಳನ್ನು ಲಗತ್ತಿಸಿ.
• ಅರ್ಜಿ ಲಕೋಟೆಯ ಮೇಲ್ಭಾಗದಲ್ಲಿ “ಅರ್ಜಿ ಸಲ್ಲಿಸಿರುವ ಹುದ್ದೆಯ ಹೆಸರು” ಎಂದು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಅಕ್ಟೋಬರ್ 30ರೊಳಗೆ ಕಳುಹಿಸಬೇಕು.
ವಿಳಾಸ: ಡೀನ್ ಮತ್ತು ನಿರ್ದೇಶಕರು, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ತೇಗೂರು, ಚಿಕ್ಕಮಗಳೂರು-577133
ವಿಶೇಷ ಸೂಚನೆ: ಅರ್ಜಿಯನ್ನು ನೇರವಾಗಿ ಸಲ್ಲಿಸುವುದನ್ನು ಪರಿಗಣಿಸಲಾಗುವುದಿಲ್ಲ.