ಬೆಂಗಳೂರು: 2027ನೇ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲ್ಯಾಟ್)ಗಾಗಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸ್ನಾತಕ ಮತ್ತು ಸ್ನಾತಕೋತ್ತರ ಕಾನೂನು ಕೋರ್ಸ್ ಪ್ರವೇಶಾತಿಗಾಗಿ ಪರೀಕ್ಷೆಯನ್ನು ಡಿ.6ರ ಭಾನುವಾರದಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಆಫ್‌ಲೈನ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸದರಿ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ದೇಶದ 26 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಲು ಅರ್ಹತೆ ಹೊಂದಿರುತ್ತಾರೆ.
ಕ್ಲ್ಯಾಟ್ 2027ಗೆ ಹಾಜರಾಗಲಿ ಇಚ್ಛಿಸುವ ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ಜಾಲತಾಣ https://consortiumofnlus.ac.in/clat-2027/ಕ್ಕೆ ಭೇಟಿ ನೀಡಿ, ಅ.31ರೊಳಗೆ ನೋಂದಣಿ ಮಾಡಿಕೊಳ್ಳಬಹುದು.
ಮುಖ್ಯ ದಿನಾಂಕಗಳು:
- ಪರೀಕ್ಷೆ ನೋಂದಣಿ ಪ್ರಾರಂಭ – ಆಗಸ್ಟ್ 03
- ಪರೀಕ್ಷೆ ನೋಂದಣಿಗೆ ಕೊನೆದಿನ – ಅಕ್ಟೋಬರ್ 31
- ಕ್ಲ್ಯಾಟ್ ಪರೀಕ್ಷೆಯ ದಿನಾಂಕ – ಡಿಸೆಂಬರ್ 06
ಶೈಕ್ಷಣಿಕ ಅರ್ಹತೆ:
ಕ್ಲ್ಯಾಟ್ 2027ರ ನೋಂದಣಿಗೆ ಬೇಕಾದ ವಿದ್ಯಾರ್ಹತೆ ನೋಡುವುದಾದರೇ,
ಸ್ನಾತಕ ಕಾನೂನು ಪದವಿ(ಎಲ್‌ಎಲ್‌ಬಿ) ಪ್ರವೇಶಾತಿಗಾಗಿ; ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇ.45ರಷ್ಟು ಅಂಕದೊಂದಿಗೆ ಹಾಗೂ ಎಸ್ಸಿ/ಎಸ್ಟಿ/ಪಿಡಬ್ಲ್ಯೂ ಅಭ್ಯರ್ಥಿಗಳು ಶೇ.40ರಷ್ಟು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
ಸ್ನಾತಕೋತ್ತರ ಕಾನೂನು ಪದವಿ(ಎಲ್‌ಎಲ್‌ಎಂ) ಪ್ರವೇಶಾತಿಗಾಗಿ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ(ಎಲ್‌ಎಲ್‌ಬಿ) ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇ.50ರಷ್ಟು ಅಂಕದೊಂದಿಗೆ ಹಾಗೂ ಎಸ್ಸಿ/ಎಸ್ಟಿ/ಪಿಡಬ್ಲ್ಯೂ ಅಭ್ಯರ್ಥಿಗಳು ಶೇ.45ರಷ್ಟು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
ವಯೋಮಿತಿ:
ಕ್ಲ್ಯಾಟ್ ಪರೀಕ್ಷೆ ನೋಂದಣಿಗೆ ಯಾವುದೇ ಗರಿಷ್ಠ ವಯೋಮಿತಿ ಅನ್ವಯಿಸುವುದಿಲ್ಲ.
ಕ್ಲ್ಯಾಟ್ 2027ರ ಪಠ್ಯಕ್ರಮದ ಕುರಿತು ಮಾಹಿತಿ
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ/ಎನ್‌ಆರ್‌ಐ ಅಭ್ಯರ್ಥಿಗಳಿಗೆ ರೂ.4,000/-
ಎಸ್ಸಿ/ಎಸ್ಟಿ/ಬಿಪಿಎಲ್/ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ ರೂ.3,500/-
ಅಭ್ಯರ್ಥಿಗಳು ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು ಬೇಕಾಗಿದ್ದಲ್ಲಿ ಹೆಚ್ಚುವರಿಗಾಗಿ ರೂ.500/- ಪಾವತಿಸಬೇಕಾಗುತ್ತದೆ.
ನೋಂದಣಿ ಹೇಗೆ ಮಾಡುವುದು?
ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ಜಾಲತಾಣ https://consortiumofnlus.ac.in/clat-2027/ಕ್ಕೆ ಭೇಟಿ ನೀಡಿ. ನೋಂದಣಿಯಾಗಿ ಅರ್ಜಿ ನಮೂನೆ ತುಂಬಿ ಕೇಳಲಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ತಮಗೆ ಅನ್ವಯವಾಗುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
Important Direct Links:
| CLAT 2027 Registration Link | Apply Now |
| Official Website | consortiumofnlus.ac.in |
| More Updates | KarnatakaHelp.in |