ಕಲಬುರಗಿ: ಜಿಲ್ಲಾ ಪಂಚಾಯತ್ ವತಿಯಿಂದ 2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಉಚಿತ ಸುಧಾರಿತ ವೃತ್ತಿಪರ ಉಪಕರಣಗಳನ್ನು ಪಡೆಯುವುದಕ್ಕಾಗಿ ಜಿಲ್ಲೆಯ ಅರ್ಹ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಂದ ತಾಲೂಕುವಾರು ಹಾಗೂ ಪ್ರವರ್ಗವಾರು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರು(ಗ್ರಾ.ಕೈ.) ತಿಳಿಸಿದ್ದಾರೆ.
ಧೋಬಿ ವೃತ್ತಿ, ಕ್ಷೌರಿಕ ವೃತ್ತಿಯ ಉಪಕರಣಗಳನ್ನು ಪಡೆಯಲು ಎಲ್ಲಾ ವರ್ಗದವರು ಅರ್ಹರು ಹಾಗೂ ವಿದ್ಯುತಚಾಲಿತ ಹೊಲಿಗೆಯಂತ್ರಗಳಿಗೆ ಪ.ಜಾತಿ/ಪ.ಪಂಗಡ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ. ಅಭ್ಯರ್ಥಿಯು ವಯಸ್ಸಿನ ಮಿತಿಯು 20-07-2026ರಂತೆ ಕನಿಷ್ಠ 18 ವರ್ಷ ವಯೋಮಾನದವರಾಗಿರಬೇಕು. ಸರ್ಕಾರಿ ನೌಕರರು ಅಥವಾ ಅವರನ್ನು ಅವಲಂಬಿತರು ಅರ್ಜಿ ಸಲ್ಲಿಕೆಗೆ ಅನರ್ಹರು.
ಅರ್ಜಿಗಳನ್ನು ಜಿಲ್ಲಾ ಪಂಚಾಯತ್ ಅಧಿಕೃತ ವೆಬ್‌ಸೈಟ್ www.zpkalaburagi.karnataka.gov.in ಅಥವಾ ಜಿಲ್ಲಾಡಳಿತದ ಜಾಲತಾಣ kalaburagi.nic.in ಮುಖಾಂತರ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆ.30ರವೆರೆಗೆ ಅವಕಾಶ ನೀಡಲಾಗಿದೆ. ಗುರಿಗಿಂತ ಅಧಿಕ ಅರ್ಜಿ ಸಲ್ಲಿಕೆಯಾದರೆ ಆಯ್ಕೆ ಸಮಿತಿ ವತಿಯಿಂದ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆಗೆ ಬೇಕಾದ ಮುಖ್ಯ ದಾಖಲೆಗಳು ಇಂತಿವೆ:
- ಅರ್ಜಿದಾರರ ಫೋಟೋ
- ಭಾವಚಿತ್ರವಿರುವ ಗುರುತಿನ ಪ್ರಮಾಣ ಪತ್ರ(ಆಧಾರ ಕಾರ್ಡ್ ಇತ್ಯಾದಿ)
- ಪಡಿತರ ಚೀಟಿ
- ಜಾತಿ ಪ್ರಮಾಣ ಪತ್ರ (ಎಸ್ಸಿ/ಎಸ್ಟಿ/ಅಲ್ಪ ಸಂಖ್ಯಾತರು ಮಾತ್ರ)
- ವೃತ್ತಿ ದೃಢೀಕರಣ ಪ್ರಮಾಣ ಪತ್ರ(ಪಿಡಿಓ ಅಥವಾ ಕೈಗಾರಿಕಾ ವಿಸ್ತರ್ಣಾಧಿಕಾರಿಗಳಿಂದ)
- ದೈಹಿಕವಾಗಿ ಅಂಗವಿಕಲ ಪ್ರಮಾಣಪತ್ರ(ಅನ್ವಯಿಸಿದಲ್ಲಿ ಮಾತ್ರ)
ಅರ್ಜಿ ಸಲ್ಲಿಕೆ ಪ್ರಕ್ರಿಯೆ…
ಹಂತ-1 ಅಧಿಕೃತ ಜಾಲತಾಣಕ್ಕೆ(https://kalaburagi.nic.in/en/) ಭೇಟಿ ನೀಡಿ.
ಹಂತ-2 ಮುಖಪುಟದಲ್ಲಿ “2026 27ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವೃತ್ತಿಪರ ಉಪಕರಣಗಳನ್ನು ಪಡೆಯಲು – Apply here ಅಥವಾ Application to get free professional tools for rural skilled workers in the year 2026-27- Apply here” ಮೇಲೆ ಕ್ಲಿಕ್ಕಸಿ.
ಹಂತ-3 ನಂತರ ಹೊಸಪುಟದೊಂದಿಗೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ತದನಂತರ ಅಲ್ಲಿ ಕೇಳಾದ ಮಾಹಿತಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ: ಉಪನಿರ್ದೇಶಕರು(ಗ್ರಾಮೀಣ ಕೈಗಾರಿಕೆ)ರವರ ಕಚೇರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ ಕಲಬುರಗಿ, ಜಿಲ್ಲಾ ಕೈಗಾರಿಕಾ ಕೇಂದ್ರ, 1ನೇ ಮಹಡಿ, ವಿಶೇಷ ನಿವೇಷನ ಸಂಖ್ಯೆ:ಎಸಪಿಎಲ್ 16, ಕೈಗಾರಿಕಾ ವಸಾಹತು, ಜೇವರ್ಗಿ ಕ್ರಾಸ್, ಎಂ.ಎಸ್.ಕೆ. ಮಿಲ್ ರಸ್ತೆ, ಕಲಬುರಗಿ ಅಥವಾ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳಿಗೆ ಸಂಪರ್ಕಿಸಬಹುದಾಗಿ ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
Important Direct Links:
| Free Professional Tools for Rural Skilled Workers Application 2026-27 Link | Apply Now |
| Official Website | kalaburagi.nic.in |
| More Updates | KarnatakaHelp.in |
When ballari
When yamakanmardi
Please give sewing machine
How to apply sir
Holige yantra
Link
ದಯವಿಟ್ಟು ನಮಗೆ ಹೊಲಿಗೆ ಯಂತ್ರ ಬೇಕಾಗಿತ್ತು
ನೀವು ಅದನ್ನು ನನಗೆ ಕಲ್ಪಿಸಿಕೊಡಬೇಕು
Please give me a tailor machine i need please