ಮುಂಬೈ: ಭಾರತ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಯಾಗಿರುವ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್(ಕೆಆರ್‌ಸಿಎಲ್) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ವೃಂದದ ನಾನಾ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಪ್ರಕಟಿಸಿದೆ.
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಇದೇ ತಿಂಗಳ ಕೊನೆವಾರದಲ್ಲಿ ಪ್ರಾರಂಭವಾಗಲಿದೆ. ಸಂಸ್ಥೆಯ ಸಿವಿಲ್, ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಶನ್, ಆಪರೇಟಿಂಗ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಮತ್ತು ಕಮರ್ಷಿಯಲ್ ಇಲಾಖೆಗಳಿಗೆ ಒಟ್ಟು 201 ಸ್ಥಾನಗಳಿಗೆ ಅಭ್ಯರ್ಥಿಗಳ ನೇಮಕ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಕೊಂಕಣ ರೈಲ್ವೆಯ ಅಧಿಕೃತ ವೆಬ್‌ಸೈಟ್ www.konkanrailway.com ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗಿ ಕೋರಲಾಗಿದೆ.
ಮುಖ್ಯ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 2026ರ ಆಗಸ್ಟ್ ಕೊನೆಯ ವಾರದಲ್ಲಿ ತೆರೆಯಲಿದೆ.
- ಅರ್ಜಿ ಸಲ್ಲಿಕೆಯ ಕೊನೆದಿನ – ಇನ್ನು ಮಾಹಿತಿ ಲಭ್ಯವಾಗಿಲ್ಲ.
ಹುದ್ದೆಗಳ ವಿವರಗಳು:
| ಹುದ್ದೆಯ ಹೆಸರು | ಒಟ್ಟು ಹುದ್ದೆಗಳು |
|---|---|
| ಜೂನಿಯರ್ ಇಂಜಿನಿಯರ್(Junior Engineer) | 32 |
| ಟ್ರಾಕ್ ಮೇಂಟೇನರ್(Track Maintainer) | 57 |
| ಸೀನಿಯರ್ ಸೆಕ್ಷನ್ ಇಂಜಿನಿಯರ್(Senior Section Engineer) | 05 |
| ESTM-III | 15 |
| ಸೆಕ್ಷನ್ ಕಂಟ್ರೋಲರ್(Section Controller) | 09 |
| ಸ್ಟೇಷನ್ ಮಾಸ್ಟರ್(Station Master) | 15 |
| ಗೂಡ್ಸ್ ಟ್ರೈನ್ ಮ್ಯಾನೇಜರ್(Goods Train Manager) | 10 |
| ಅಸಿಸ್ಟೆಂಟ್ ಲೋಕೋ ಪೈಲಟ್(Asst. Loco Pilot) | 30 |
| ಸೀನಿಯರ್ ಸೆಕ್ಷನ್ ಇಂಜಿನಿಯರ್(Senior Section Engineer) | 03 |
| ಜೂನಿಯರ್ ಇಂಜಿನಿಯರ್ (Junior Engineer) | 07 |
| ಟೆಕ್ನಿಷಿಯನ್/III (Technician/III) | 15 |
| ಕಮರ್ಷಿಯಲ್ ಸೂಪರ್‌ವೈಸರ್(Commercial Supervisor) | 07 |
| 201 |
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ: ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ ಪಾಸ್, ಐಟಿಐ (ITI), ಡಿಪ್ಲೋಮಾ, ಇಂಜಿನಿಯರಿಂಗ್ ಪದವಿ ಅಥವಾ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ: 01/08/2026ರಂತೆ; ಗ್ರೂಪ್ ‘ಸಿ’ ಹುದ್ದೆಗಳಿಗೆ 18 ರಿಂದ 36 ವರ್ಷಗಳು ಹಾಗೂ ಗ್ರೂಪ್ ‘ಡಿ’ (ಟ್ರಾಕ್ ಮೇಂಟೇನರ್)ಹುದ್ದೆಗೆ 18 ರಿಂದ 45 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ನಿಯಮಾನುಸಾರ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.
ಆದ್ಯತೆ ಮತ್ತು ಮೀಸಲಾತಿ:
➤ ನೇಮಕಾತಿಯಲ್ಲಿ ಕೊಂಕಣ ರೈಲ್ವೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ (Land losers) ಮೊದಲ ಆದ್ಯತೆ ನೀಡಲಾಗುತ್ತದೆ.
➤ ಎರಡನೇ ಆದ್ಯತೆಯನ್ನು ಕೊಂಕಣ ರೈಲ್ವೆ ಮಾರ್ಗದ ವ್ಯಾಪ್ತಿಯ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ (ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಮಹಾರಾಷ್ಟ್ರ ಮತ್ತು ಗೋವಾದ ನಿಗದಿತ ಜಿಲ್ಲೆಗಳು) ಹೆಸರು ನೋಂದಾಯಿಸಿದ ಅಭ್ಯರ್ಥಿಗಳಿಗೆ.
➤ ಮೂರನೇ ಆದ್ಯತೆಯನ್ನು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ನಿವಾಸಿಗಳು ಹಾಗೂ ಕೆಆರ್‌ಸಿಎಲ್ (KRCL) ನೌಕರರಿಗೆ ನೀಡಲಾಗುತ್ತದೆ.
ಮಾಜಿ ಸೈನಿಕರು, ಅಂಗವಿಕಲರು (PwBD), ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ (EWS) ಅಭ್ಯರ್ಥಿಗಳಿಗೆ ನಿಯಮಾನುಸಾರ ಮೀಸಲಾತಿ ಅನ್ವಯವಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಹುದ್ದೆಗಳಿಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆ ಇರಲಿದೆ.
- ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ),
- ಆಪ್ಟಿಟ್ಯೂಡ್ ಟೆಸ್ಟ್(ಸಿಬಿಎಟಿ/ಒಎಂಆರ್),
- ದೈಹಿಕ ದಕ್ಷತೆ ಪರೀಕ್ಷೆ(ಪಿಇಟಿ-ಟ್ರಾಕ್ ಮೇಂಟೇನರ್ ಹುದ್ದೆಗೆ ಮಾತ್ರ),
- ದಾಖಲೆಗಳ ಪರಿಶೀಲನೆ(ಡಿವಿ)
- ವೈದ್ಯಕೀಯ ತಪಾಸಣೆಗಳ(ಎಂಇ)
ಕಂಪ್ಯೂಟರ್ ಆಧಾರಿತ ಪರೀಕ್ಷೆಯು(ಸಿಬಿಟಿ) ಕನ್ನಡ, ಕೊಂಕಣಿ, ಮರಾಠಿ, ಇಂಗ್ಲಿಷ್ ಮತ್ತು ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ನಡೆಸಲಾಗುತ್ತದೆ.
ವೇತನ:
➡ ಸೀನಿಯರ್ ಸೆಕ್ಷನ್ ಇಂಜಿನಿಯರ್(S&T/ಮೆಕ್ಯಾನಿಕಲ್) ಹುದ್ದೆಗೆ; ಆರಂಭಿಕ ವೇತನ ರೂ.44,900(ವೇತನ ಮಟ್ಟ-7)
➡ ಜೂನಿಯರ್ ಇಂಜಿನಿಯರ್(ಸಿವಿಲ್/ಮೆಕ್ಯಾನಿಕಲ್), ಸೆಕ್ಷನ್ ಕಂಟ್ರೋಲರ್, ಸ್ಟೇಷನ್ ಮಾಸ್ಟರ್, ಕಮರ್ಷಿಯಲ್ ಸೂಪರ್‌ವೈಸರ್ ಹುದ್ದೆಗೆ; ಆರಂಭಿಕ ವೇತನ ರೂ.35,400(ವೇತನ ಮಟ್ಟ-6)
➡ ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗೆ; ಆರಂಭಿಕ ವೇತನ ರೂ.29,200(ವೇತನ ಮಟ್ಟ-5)
➡ ಟೆಕ್ನಿಷಿಯನ್-III(ಮೆಕ್ಯಾನಿಕಲ್), ESTM-III (S&T), ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗೆ; ಆರಂಭಿಕ ವೇತನ ರೂ. 19,900(ವೇತನ ಮಟ್ಟ-2)
➡ಟ್ರಾಕ್ ಮೇಂಟೇನರ್-IV (ಗ್ರೂಪ್ ‘D’) ಹುದ್ದೆಗೆ; ಆರಂಭಿಕ ವೇತನ ರೂ.18,000(ವೇತನ ಮಟ್ಟ-1)
ಪರೀಕ್ಷಾ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ ರೂ.1180/- (ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಹೊರತುಪಡಿಸಿ. ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು, ಮಹಿಳೆಯರು, ಅಲ್ಪಸಂಖ್ಯಾತರು, ಇಬಿಸಿ(EBC) ಮತ್ತು ಅಂಗವಿಕಲ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದ ನಂತರ ಅವರ ಶುಲ್ಕವನ್ನು ಬ್ಯಾಂಕ್ ಶುಲ್ಕ ಕಡಿತಗೊಳಿಸಿ ಮರುಪಾವತಿ ಮಾಡಲಾಗುತ್ತದೆ.)
ಅನ್‌ಲೈನ್ ಅರ್ಜಿ ನೋಂದಣಿ ಹೇಗೆ.?
ಅರ್ಹ ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://konkanrailway.com/en/current_notificationಕ್ಕೆ ಭೇಟಿ ನೀಡಿ. ನಿಗದಿತ ದಿನಾಂಕದಿಂದ ಆರಂಭವಾಗಲಿರುವ ಆನ್‌ಲೈನ್ ಅರ್ಜಿ ನಮೂನೆಯ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
Important Direct Links:
| Official Notification PDF | Download |
| Online Application Form Link( ಆಗಸ್ಟ್ ಕೊನೆ ವಾರದಿಂದ ಆರಂಭ) | Apply Now |
| Official Website | konkanrailway.com |
| More Updates | KarnatakaHelp.in |