ಮುಂಬೈ: ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿಮಿಟೆಡ್(ಆರ್‌ಸಿಎಫ್‌ಎಲ್) ಸಂಸ್ಥೆಯು 94 ವಿವಿಧ ವಿಭಾಗದ ಮ್ಯಾನೇಜ್ಮೆಂಟ್ ಟ್ರೈನಿ(ಎಂಟಿ) ಹುದ್ದೆಗಳ ನೇಮಕಾತಿಗಾಗಿ ಅಧಿಕಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಆ.08ರಿಂದ ಪ್ರಾರಂಭವಾಗಲಿದೆ.
ಟ್ರೋಂಬೆ, ಥಾಲ್ ಹಾಗೂ ಭಾರತದಾದ್ಯಂತ ಇರುವ ತನ್ನ ಪ್ರಾದೇಶೀಕ ಕಚೇರಿಗಳಿಗೆ ಕೆಮಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ಫೈನಾನ್ಸ್ ಹಾಗೂ ಐಟಿ ಸೇರಿದಂತೆ ವಿವಿಧ ವಿಭಾಗಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆರ್‌ಸಿಎಫ್‌ಎಲ್‌ನ ಅಧಿಕೃತ ವೆಬ್‌ಸೈಟ್ www.rcfltd.com ಮೂಲಕ ಆನ್‌ಲೈನ್ ಮೂಲಕ ಆ.24ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ನೋಂದಣಿ ಆರಂಭ- ಆಗಸ್ಟ್ 8, 2026 ರಂದು ಬೆಳಗ್ಗೆ 8:00 ಗಂಟೆಗೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 24, 2026 ರಂದು ಸಂಜೆ 5:00 ಗಂಟೆಗೆ.
ಹುದ್ದೆಗಳ ಸಂಖ್ಯೆ:
ಮ್ಯಾನೇಜ್‌ಮೆಂಟ್ ಟ್ರೈನಿ(ಕೆಮಿಕಲ್) 32
ಮ್ಯಾನೇಜ್‌ಮೆಂಟ್ ಟ್ರೈನಿ(ಬಾಯ್ಲರ್) 06 (ಇದರಲ್ಲಿ 4 ಬ್ಯಾಕ್‌ಲಾಗ್ ಹುದ್ದೆಗಳು ಸೇರಿವೆ)
ಮ್ಯಾನೇಜ್‌ಮೆಂಟ್ ಟ್ರೈನಿ(ಮೆಕ್ಯಾನಿಕಲ್) 04
ಮ್ಯಾನೇಜ್‌ಮೆಂಟ್ ಟ್ರೈನಿ(ಎಲೆಕ್ಟ್ರಿಕಲ್) 10
ಮ್ಯಾನೇಜ್‌ಮೆಂಟ್ ಟ್ರೈನಿ(ಇನ್ಸ್ಟ್ರುಮೆಂಟೇಶನ್) 09
ಮ್ಯಾನೇಜ್‌ಮೆಂಟ್ ಟ್ರೈನಿ(ಫೈರ್) 01
ಮ್ಯಾನೇಜ್‌ಮೆಂಟ್ ಟ್ರೈನಿ(ಮೆಟೀರಿಯಲ್ಸ್) 01
ಮ್ಯಾನೇಜ್‌ಮೆಂಟ್ ಟ್ರೈನಿ(ಸಿವಿಲ್) 01
ಮ್ಯಾನೇಜ್‌ಮೆಂಟ್ ಟ್ರೈನಿ(CC LAB) 01
ಮ್ಯಾನೇಜ್‌ಮೆಂಟ್ ಟ್ರೈನಿ(ಇಂಡಸ್ಟ್ರಿಯಲ್ ಎಂಜಿನಿಯರಿಂಗ್) 02
ಮ್ಯಾನೇಜ್‌ಮೆಂಟ್ ಟ್ರೈನಿ(ಮಾಹಿತಿ ತಂತ್ರಜ್ಞಾನ) 05
ಮ್ಯಾನೇಜ್‌ಮೆಂಟ್ ಟ್ರೈನಿ(ರಾಜಭಾಷಾ) 02
ಮ್ಯಾನೇಜ್‌ಮೆಂಟ್ ಟ್ರೈನಿ(ಫೈನಾನ್ಸ್) 10
ಮ್ಯಾನೇಜ್‌ಮೆಂಟ್ ಟ್ರೈನಿ(ಮಾರ್ಕೆಟಿಂಗ್) 10
ಹುದ್ದೆಗಳಾಧಾರಿತ ಶೈಕ್ಷಣಿಕ ಅರ್ಹತೆ:
ಮ್ಯಾನೇಜ್‌ಮೆಂಟ್ ಟ್ರೈನಿ (ಕೆಮಿಕಲ್) ಹುದ್ದೆಗೆ; ಕೆಮಿಕಲ್ ಎಂಜಿನಿಯರಿಂಗ್/ಟೆಕ್ನಾಲಜಿ ಅಥವಾ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್/ಟೆಕ್ನಾಲಜಿಯಲ್ಲಿ 4 ವರ್ಷಗಳ ಬಿ. ಇ/ಬಿ. ಟೆಕ್ ಅಥವಾ ಡಿಪ್ಲೊಮಾ ನಂತರ 3 ವರ್ಷಗಳ ಬಿ. ಇ/ಬಿ. ಟೆಕ್ ಪದವಿ ಪಡೆದಿರಬೇಕು
ಮ್ಯಾನೇಜ್‌ಮೆಂಟ್ ಟ್ರೈನಿ (ಬಾಯ್ಲರ್) ಹುದ್ದೆಗೆ; ಕೆಮಿಕಲ್/ಪೆಟ್ರೋಕೆಮಿಕಲ್/ಮೆಕ್ಯಾನಿಕಲ್/ಇನ್ಸ್ಟ್ರುಮೆಂಟೇಶನ್/ಎಲೆಕ್ಟ್ರಿಕಲ್‌ನಲ್ಲಿ ಬಿ. ಇ/ಬಿ. ಟೆಕ್ ಜೊತೆಗೆ ಮಾನ್ಯತೆ ಪಡೆದ ಬಾಯ್ಲರ್ ಆಪರೇಷನ್ ಎಂಜಿನಿಯರ್(BOE) ಪ್ರಮಾಣಪತ್ರ ಹೊಂದಿರಬೇಕು.
ಮ್ಯಾನೇಜ್‌ಮೆಂಟ್ ಟ್ರೈನಿ (ಮೆಕ್ಯಾನಿಕಲ್) ಹುದ್ದೆಗೆ; ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ/ಬಿ.ಟೆಕ್ ಪದವಿ.
ಮ್ಯಾನೇಜ್‌ಮೆಂಟ್ ಟ್ರೈನಿ (ಎಲೆಕ್ಟ್ರಿಕಲ್) ಹುದ್ದೆಗೆ; ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಮತ್ತು ಪವರ್ ಎಂಜಿನಿಯರಿಂಗ್‌ನಲ್ಲಿ ಬಿ.ಇ/ಬಿ.ಟೆಕ್ ಪದವಿ.
ಮ್ಯಾನೇಜ್‌ಮೆಂಟ್ ಟ್ರೈನಿ (ಇನ್ಸ್ಟ್ರುಮೆಂಟೇಶನ್) ಹುದ್ದೆಗೆ; ಇನ್ಸ್ಟ್ರುಮೆಂಟೇಶನ್/ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ/ಇನ್ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್ ಎಂಜಿನಿಯರಿಂಗ್‌ನಲ್ಲಿ ಬಿ. ಇ/ಬಿ. ಟೆಕ್ ಪದವಿ.
ಮ್ಯಾನೇಜ್‌ಮೆಂಟ್ ಟ್ರೈನಿ (ಮೆಟೀರಿಯಲ್ಸ್) ಹುದ್ದೆಗೆ; ಕೆಮಿಕಲ್/ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಇನ್ಸ್ಟ್ರುಮೆಂಟೇಶನ್ ಇತ್ಯಾದಿ ವಿಭಾಗಗಳಲ್ಲಿ ಬಿ.ಇ/ಬಿ.ಟೆಕ್ ಪದವಿ.
ಮ್ಯಾನೇಜ್‌ಮೆಂಟ್ ಟ್ರೈನಿ (ಸಿವಿಲ್) ಹುದ್ದೆಗೆ; ಸಿವಿಲ್ ಎಂಜಿನಿಯರಿಂಗ್ ಅಥವಾ ಸಂಬಂಧಿತ ವಿಭಾಗಗಳಲ್ಲಿ ಬಿ.ಇ/ಬಿ.ಟೆಕ್ ಪದವಿ.
ಮ್ಯಾನೇಜ್‌ಮೆಂಟ್ ಟ್ರೈನಿ (ಫೈರ್) ಹುದ್ದೆಗೆ; ಫೈರ್ ಅಥವಾ ಫೈರ್ & ಸೇಫ್ಟಿ ವಿಭಾಗದಲ್ಲಿ ಬಿ.ಇ/ಬಿ.ಟೆಕ್ ಪದವಿ.
ಮ್ಯಾನೇಜ್‌ಮೆಂಟ್ ಟ್ರೈನಿ (CC LAB) ಹುದ್ದೆಗೆ; ರಸಾಯನಶಾಸ್ತ್ರದಲ್ಲಿ (Chemistry) ಪಿಎಚ್.ಡಿ ಅಥವಾ ಕೆಮಿಕಲ್/ಪೆಟ್ರೋಕೆಮಿಕಲ್ ಎಂಜಿನಿಯರಿಂಗ್/ಕೆಮಿಕಲ್ ಟೆಕ್ನಾಲಜಿಯಲ್ಲಿ ಬಿ.ಇ/ಬಿ.ಟೆಕ್ ಪದವಿ.
ಮ್ಯಾನೇಜ್‌ಮೆಂಟ್ ಟ್ರೈನಿ (ಇಂಡಸ್ಟ್ರಿಯಲ್ ಎಂಜಿನಿಯರಿಂಗ್) ಹುದ್ದೆಗೆ; ಇಂಡಸ್ಟ್ರಿಯಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ/ಬಿ.ಟೆಕ್ ಅಥವಾ ಯಾವುದೇ ಪದವಿಯೊಂದಿಗೆ ಇಂಡಸ್ಟ್ರಿಯಲ್ ಎಂಜಿನಿಯರಿಂಗ್‌ನಲ್ಲಿ 2 ವರ್ಷಗಳ ಪಿಜಿ ಪದವಿ/ಡಿಪ್ಲೊಮಾ ಹೊಂದಿರಬೇಕು.
ಮ್ಯಾನೇಜ್‌ಮೆಂಟ್ ಟ್ರೈನಿ(ಮಾಹಿತಿ ತಂತ್ರಜ್ಞಾನ) ಹುದ್ದೆಗೆ; ಐಟಿ/ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಟೆಕ್ನಾಲಜಿ/ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿ.ಇ/ಬಿ.ಟೆಕ್ ಪದವಿ.
ಮ್ಯಾನೇಜ್‌ಮೆಂಟ್ ಟ್ರೈನಿ (ರಾಜಭಾಷಾ) ಹುದ್ದೆಗೆ; ಹಿಂದಿ/ಇಂಗ್ಲಿಷ್ ವಿಷಯಗಳೊಂದಿಗೆ ಸ್ನಾತಕೋತ್ತರ ಪದವಿ (Master’s Degree).
ಮ್ಯಾನೇಜ್‌ಮೆಂಟ್ ಟ್ರೈನಿ (ಫೈನಾನ್ಸ್) ಹುದ್ದೆಗೆ; CA/CMA ಅಥವಾ ಕಾಮರ್ಸ್/ಅಕೌಂಟಿಂಗ್/ಫೈನಾನ್ಸ್ ಪದವಿಯೊಂದಿಗೆ ಫೈನಾನ್ಸ್ ಸ್ಪೆಷಲೈಸೇಶನ್‌ನಲ್ಲಿ MBA/MMS/PGDM ಹೊಂದಿರಬೇಕು. (ಗಮನಿಸಿ: M.Com ಪದವಿಯನ್ನು ಪರಿಗಣಿಸಲಾಗುವುದಿಲ್ಲ).
ಮ್ಯಾನೇಜ್‌ಮೆಂಟ್ ಟ್ರೈನಿ (ಮಾರ್ಕೆಟಿಂಗ್) ಹುದ್ದೆಗೆ; ಸೈನ್ಸ್/ಎಂಜಿನಿಯರಿಂಗ್/ಅಗ್ರಿಕಲ್ಚರ್ ಪದವಿಯೊಂದಿಗೆ ಮಾರ್ಕೆಟಿಂಗ್/ಅಗ್ರಿ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ MBA/PGDM ಹೊಂದಿರಬೇಕು.
ವಯೋಮಿತಿ:
01.02.2026ಕ್ಕೆ ಅನ್ವಯಿಸುವಂತೆ:
- ಸಾಮಾನ್ಯ ವರ್ಗ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 27 ವರ್ಷಗಳು.
- ಒಬಿಸಿ(NCL)ಅಭ್ಯರ್ಥಿಗಳಿಗೆ 30 ವರ್ಷಗಳು
- ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 32 ವರ್ಷಗಳು.
1984ರ ದಂಗೆಯ ಸಂತ್ರಸ್ತರ ಮಕ್ಕಳು/ಕುಟುಂಬದ ಸದಸ್ಯರಿಗೆ 5 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
- ಆನ್‌ಲೈನ್ ಪರೀಕ್ಷೆ (CBT)
- ವೈಯಕ್ತಿಕ ಸಂದರ್ಶನದ(PI)
ಆನ್‌ಲೈನ್ ಪರೀಕ್ಷೆಗೆ ಶೇ.80 ಮತ್ತು ಸಂದರ್ಶನಕ್ಕೆ ಶೇ.20ರಷ್ಟು ವೇಟೇಜ್ ನಿಗದಿಪಡಿಸಲಾಗಿದೆ.
ಸಂಬಳ:
ಒಂದು ವರ್ಷದ ತರಬೇತಿ ಅವಧಿ ಅವಧಿಯಲ್ಲಿ ಪ್ರ.ತಿಂ. ರೂ. 60,000/-ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿ ನಂತರ ಅವರನ್ನು E1 ಗ್ರೇಡ್‌ನಲ್ಲಿ(ವೇತನ ಶ್ರೇಣಿ ರೂ.40,000-1,40,000) ಖಾಯಂ ಮಾಡಿಕೊಳ್ಳಲಾಗುತ್ತದೆ. ಈ ಹಂತದಲ್ಲಿ ಒಟ್ಟು ಮಾಸಿಕ ವೇತನ ಅಂದಾಜು ವೇತನ ರೂ. 86,320/- ಇರಲಿದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ(NCL) ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.1000/- (ಬ್ಯಾಂಕ್ ಶುಲ್ಕ ಮತ್ತು ಜಿಎಸ್‌ಟಿ ಪ್ರತ್ಯೇಕ ಪಾವತಿಸಬೇಕು.)
ಎಸ್ಸಿ, ಎಸ್ಟಿ, ಮಾಜಿ ಸೈನಿಕರು, ವಿಕಲಚೇತನರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಹೇಗೆ ಮಾಡುವುದು?
ಹಂತ-1 ಅಧಿಕೃತ ಜಾಲತಾಣ https://www.rcfltd.com/ದ “Recruitment” ವಿಭಾಗಕ್ಕೆ ಭೇಟಿ ನೀಡಿ.
ಹಂತ-2 ನಂತರ “Advertisement for the post of Management Trainee in various disciplines for Trombay/Thal/ Area Offices Pan India” ಶೀರ್ಷಿಕೆಯಡಿ ನೀಡಲಾಗಿರುವ “Apply Now” ಲಿಂಕ್ ಕ್ಲಿಕ್ಕಿಸಿ.
ಹಂತ-3 ತದನಂತರ ಹೊಸ ಬಳಕೆದಾರರಾಗಿ ನೋಂದಣಿಯಾಗಿ, ಅರ್ಜಿ ನಮೂನೆಯನ್ನು ಸರಿಯಾಗಿ ತುಂಬಿ, ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
Important Direct Links:
| Official Notification PDF | Download |
| Online Application Form Link(ಆ.08ರಿಂದ ಆರಂಭ) | Apply Now |
| Official Website | www.rcfltd.com |
| More Updates | KarnatakaHelp.in |
Nothing
Railway