ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ; ನೋಂದಣಿ ಆರಂಭ

Published on:

2027-28ನೇ ಶೈಕ್ಷಣಿಕ ಸಾಲಿನ ಜವಾಹರ್‌ ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು, ನೋಂದಣಿ ಅವಧಿಯನ್ನು ಆ.07ರವರೆಗೆ ವಿಸ್ತರಿಸಲಾಗಿದೆ ಎಂದು ನವೋದಯ ವಿದ್ಯಾಲಯ ಸಮಿತಿ ತಿಳಿಸಿದೆ.

ಪ್ರಸ್ತುತ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ನೋಂದಣಿಗೆ ಅರ್ಹರು. ಕನ್ನಡ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಯಲ್ಲಿ ಪ್ರವೇಶ ಪರೀಕ್ಷೆ ನ.28ರಂದು ನಡೆಯಲಿದೆ. ಆಸಕ್ತರು ವಿದ್ಯಾಲಯದ ಅಧಿಕೃತ ಜಾಲತಾಣ https://cbseitms.rcil.gov.in/nvs/Index/Registrationಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.

ಮುಖ್ಯ ದಿನಾಂಕಗಳು:

  • ಪ್ರವೇಶ ಪರೀಕ್ಷೆ ನೋಂದಣಿಗೆ ಕೊನೆ ದಿನ – ಆಗಸ್ಟ್‌ 07(ವಿಸ್ತರಣೆ)
  • ಪ್ರವೇಶ ಪರೀಕ್ಷೆಯ ದಿನಾಂಕ – ನವೆಂಬರ್‌ 28
  • ಪ್ರವೇಶ ಪರೀಕ್ಷೆಯ ಫಲಿತಾಂಶ – ಮಾರ್ಚ್‌, 2027

ವಿದ್ಯಾರ್ಹತೆ:

ಮಾನ್ಯತೆ ಪಡೆದ ಮಹಾವಿದ್ಯಾಲಯದಲ್ಲಿ 5ನೇ ತರಗತಿ ಅಭ್ಯಾಸ ಮಾಡುತ್ತಿರಬೇಕು.

ಸ್ಥಳೀಯತೆ: ವಿದ್ಯಾರ್ಥಿಯು ಯಾವ ಜಿಲ್ಲೆಯ ನವೋದಯ ಶಾಲೆಗೆ ಪ್ರವೇಶ ಬಯಸುತ್ತಾನೋ, ಅದೇ ಜಿಲ್ಲೆಯ ನಿವಾಸಿಯಾಗಿರಬೇಕು ಮತ್ತು ಅಲ್ಲಿಯೇ 5ನೇ ತರಗತಿ ಓದುತ್ತಿರಬೇಕು.

ವಯಸ್ಸಿನ ಮಿತಿ:

ವಿದ್ಯಾರ್ಥಿಯು 01.05.2015 ರಿಂದ 31.07.2017ರ ನಡುವೆ ಜನಿಸಿದವರು (ಎರಡೂ ದಿನಾಂಕಗಳು ಸೇರಿದಂತೆ)

ಆಯ್ಕೆ ಪ್ರಕ್ರಿಯೆ:

  • ಆಯ್ಕೆ ಪರೀಕ್ಷೆ(ಪ್ರವೇಶ ಪರೀಕ್ಷೆ)
  • ದಾಖಲಾತಿ ಪರಿಶೀಲನೆ

ಅರ್ಜಿ ಶುಲ್ಕ:

ಎಲ್ಲಾ ವರ್ಗದವರಿಗೂ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ 2027ಗೆ ನೋಂದಣಿ ಹೇಗೆ?

ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ನೋಂದಣಿ ಮಾಡಲು https://cbseitms.rcil.gov.in/nvs/ ಅಥವಾ https://cbseitms.rcil.gov.in/nvs/Index/Registrationಗೆ ಭೇಟಿ ನೀಡಿ.

Navodaya Vidyalaya 6Th Class Admission Entrance Exam 2027
ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ; ನೋಂದಣಿ ಆರಂಭ
Navodaya Vidyalaya 6Th Class Admission Entrance Exam 2027
ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ; ನೋಂದಣಿ ಆರಂಭ

Important Direct Links:

Navodaya Vidyalaya 6th Class Admission Entrance Exam 2027 Prospectus cum notification PDFDownload
JNV Class 6 Entrance Exam 2027-28 Registration Link(Direct Link)Visit and Apply
Official Websitenavodaya.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

2 thoughts on “ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ; ನೋಂದಣಿ ಆರಂಭ”

Leave a Comment